ಕರ್ನಾಟಕ

karnataka

ETV Bharat / bharat

ಇಂದು ಅಮೆರಿಕದಿಂದ ಹೊರಡಲಿರುವ ಟ್ರಂಪ್... ಇಲ್ಲಿದೆ ಭಾರತ ಪ್ರವಾಸದ ಕಂಪ್ಲೀಟ್ ಟೈಂ ಟೇಬಲ್ - ಯುಎಸ್​ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪತ್ನಿ ಮೆಲಾನಿಯಾ ಟ್ರಂಪ್ ಅವರು ಇಂದು ಸಂಜೆ ಮೇರಿಲ್ಯಾಂಡ್‌ನ ಜಂಟಿ ನೆಲೆಯಿಂದ ಪ್ರವಾಸ ಪ್ರಾರಂಭಿಸಲಿದ್ದಾರೆ. ಭಾರತದಲ್ಲಿ ಟ್ರಂಪ್ ಅವರ ಟೈಂ ಟೇಬಲ್ ಏನು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.

Donald Trump, Melania to depart for India today evening
ಇಂದು ಸಂಜೆ ಭಾರತ ಪ್ರವಾಸ ಪ್ರಾರಂಭಿಸಲಿರುವ ಡೊನಾಲ್ಡ್ ಟ್ರಂಪ್, ಮೆಲಾನಿಯಾ

By

Published : Feb 23, 2020, 2:00 PM IST

Updated : Feb 23, 2020, 5:33 PM IST

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪತ್ನಿ ಮೆಲಾನಿಯಾ ಟ್ರಂಪ್ ಅವರು ಇಂದು ಸಂಜೆ ಮೇರಿಲ್ಯಾಂಡ್‌ನ ಜಂಟಿ ನೆಲೆಯಿಂದ ಪ್ರವಾಸ ಪ್ರಾರಂಭಿಸಲಿದ್ದಾರೆ. ಭಾರತದಲ್ಲಿ ಟ್ರಂಪ್ ಅವರ ಟೈಂ ಟೇಬಲ್ ಏನು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.

ಅಮೆರಿಕದಿಂದ ನಿರ್ಗಮನ:

ವಾಷಿಂಗ್ಟನ್‌ನಿಂದ ಸಂಜೆ 7:30ಕ್ಕೆ ನಿರ್ಗಮಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರ ಏರ್​ಫೋರ್ಸ್​-1 ವಿಮಾನ ಜರ್ಮನಿಯ ರೈನ್‌ಲ್ಯಾಂಡ್-ಪ್ಯಾಲಟಿನೇಟ್‌ನಲ್ಲಿ ನಿಲುಗಡೆಯಾಗುತ್ತೆ. ಅಲ್ಲಿಂದ ರಾತ್ರಿ 11:55ಕ್ಕೆ (ಜರ್ಮನಿಯಲ್ಲಿ ಸ್ಥಳೀಯ ಸಮಯ) ಅಥವಾ ಬೆಳಗ್ಗೆ 4:25ಕ್ಕೆ (ಭಾರತೀಯ ಕಾಲಮಾನದ ಪ್ರಕಾರ) 4:25ಕ್ಕೆ ಜರ್ಮನಿಯಿಂದ ಅಹಮದಾಬಾದ್‌ಗೆ ಹೊರಡಲಿದ್ದಾರೆ.

ಮಹಾತ್ಮ ಗಾಂಧೀಜಿ ಸ್ಮಾರಕಕ್ಕೆ ಭೇಟಿ:

ಗುಜರಾತಿನ ಅಹಮದಾಬಾದ್​ ವಿಮಾನ ನಿಲ್ದಾಣಕ್ಕೆ ಪತ್ನಿ ಸಮೇತ ಬಂದಿಳಿಯಲಿರುವ ಟ್ರಂಪ್​ ಮತ್ತು ನಿಯೋಗದ ಸದಸ್ಯರನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಲಿದ್ದಾರೆ. ಇಲ್ಲಿಯೇ ಇವರಿಗೆ ಗೌರವ ವಂದನೆ ಸಲ್ಲಿಸಲಾಗುತ್ತದೆ. ಮೊದಲು ಸಬರಮತಿ ಆಶ್ರಮಕ್ಕೆ ಭೇಟಿ ನೀಡಿ ಅಲ್ಲಿ ಮಹಾತ್ಮ ಗಾಂಧೀಜಿ ಸ್ಮಾರಕಕ್ಕೆ ​ಗೌರವ ಸಲ್ಲಿಸಲಿದ್ದಾರೆ. ಈ ವೇಳೆ ಗಣ್ಯರಿಗೆ ನೀಡಲಾಗುವ ಮಹಾತ್ಮ ಗಾಂಧಿ ಸ್ಮರಣಿಕೆಯನ್ನು ಟ್ರಂಪ್​​ ಅವರಿಗೆ ನೀಡಲಾಗುವುದು. ಈ ಸ್ಮರಣಿಕೆಯು ಚರಕ, ಚಕ್ರ ಮತ್ತು ಪುಸ್ತಕಗಳನ್ನೊಳಗೊಂಡಿರುತ್ತದೆ.

ಭಾರತದಲ್ಲಿ 36 ಗಂಟೆ ಕಳೆಯಲಿರುವ ಗಣ್ಯರು:

ಅಧ್ಯಕ್ಷ ಟ್ರಂಪ್​ ಜೊತೆ ಭಾರತಕ್ಕೆ ಆಗಮಿಸುತ್ತಿರುವ ಗಣ್ಯರು ಅವರ ಕುಟುಂಬ ಮತ್ತು ಸಚಿವರ ನಿಯೋಗದೊಂದಿಗೆ ಸುಮಾರು 36 ಗಂಟೆಗಳ ಕಾಲ ಭಾರತದಲ್ಲಿರುತ್ತಾರೆ. ಭೇಟಿಯ ಸಮಯದಲ್ಲಿ ಡೊನಾಲ್ಡ್​ ಟ್ರಂಪ್​, ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆ. ಅನಂತರ ಮಧ್ಯಾಹ್ನ 1:15ಕ್ಕೆ ಮೊಟೆರಾ ಕ್ರೀಡಾಂಗಣದಲ್ಲಿ ನಡೆಯುವ ‘ನಮಸ್ತೆ ಟ್ರಂಪ್​’ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.

ಆಗ್ರಾದ ತಾಜ್‌ಮಹಲ್‌ ಭೇಟಿ:

ಮಧ್ಯಾಹ್ನ 3:30ಕ್ಕೆ ಟ್ರಂಪ್ ಮತ್ತು ಅವರ ಪತ್ನಿ ಮೆಲಾನಿಯಾ ಟ್ರಂಪ್​ ಅವರು ಆಗ್ರಾಗೆ ಪ್ರಯಾಣಬೆಳೆಸಲಿದ್ದಾರೆ. ಸಂಜೆ 4:30ಕ್ಕೆ ತಾಜ್​ಮಹಲ್​​ ವೀಕ್ಷಿಸಲಿದ್ದಾರೆ. ಮೂಲಗಳ ಪ್ರಕಾರ ಪ್ರಧಾನಿ ಮೋದಿ ಅವರು ಈ ಕಾರ್ಯಕ್ರಮದಲ್ಲಿ ಜೊತೆಯಲ್ಲಿರುವುದಿಲ್ಲ. ಆಗ್ರಾದಿಂದ ಟ್ರಂಪ್​, ರಾಜಧಾನಿ ನವದೆಹಲಿಗೆ ತೆರಳಲಿದ್ದಾರೆ. ಸಂಜೆ ಪ್ರಧಾನಿ ಮೋದಿ ಏರ್ಪಡಿಸಿರುವ ಔತಣಕೂಟದಲ್ಲಿ ಟ್ರಂಪ್​​ ಭಾಗವಹಿಸಲಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ಟ್ರಂಪ್​​ಗೆ ಭವ್ಯ ಸ್ವಾಗತ:

ಅಮೆರಿಕ ಅಧ್ಯಕ್ಷ ಟ್ರಂಪ್​​ಗೆ ಫೆ.25ರಂದು ರಾಷ್ಟ್ರಪತಿ ಭವನದಲ್ಲಿ ವಿಧ್ಯುಕ್ತ ಸ್ವಾಗತ ಸ್ವೀಕರಿಸಲಿದ್ದು, ಆನಂತರ ರಾಜ್‌ಘಾಟ್‌ಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ ನಿಯೋಗ ಸಭೆಯಲ್ಲಿ ಟ್ರಂಪ್ ಭಾಗವಹಿಸಲಿದ್ದು, ರಕ್ಷಣಾ ಕ್ಷೇತ್ರದಲ್ಲಿನ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ.

ಅಮೆರಿಕ ಅಧ್ಯಕ್ಷರಿಂದ ದೇಶದ ಗಣ್ಯರ ಭೇಟಿ:

ಸಂಜೆ ಅಮೆರಿಕದ ಅಧ್ಯಕ್ಷ ಟ್ರಂಪ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಹೈದರಾಬಾದ್ ಹೌಸ್​​ನಲ್ಲಿ ಭೇಟಿ ಮಾಡಲಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ಔತಣಕೂಟ:

ಫೆಬ್ರವರಿ 25ರಂದು ಸಂಜೆ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಗಳಾದ ರಾಮ್​ನಾಥ್ ಕೋವಿಂದ್ ಆಯೋಜಿಸಿರುವ ಔತಣಕೂಟದಲ್ಲಿ ಡೊನಾಲ್ಡ್​​ ಟ್ರಂಪ್​ ಭಾಗವಹಿಸಲಿದ್ದಾರೆ. ನಂತರ ರಾತ್ರಿ 10 ಗಂಟೆಗೆ ದೆಹಲಿಯಿಂದ ನಿರ್ಗಮಿಸಲಿದ್ದಾರೆ.

Last Updated : Feb 23, 2020, 5:33 PM IST

ABOUT THE AUTHOR

...view details