ಕರ್ನಾಟಕ

karnataka

ETV Bharat / bharat

ಪ್ರಣಬ್ ಮುಖರ್ಜಿ ನಿಧನಕ್ಕೆ ಟ್ರಂಪ್, ಪೊಂಪಿಯೊ ಸಂತಾಪ

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ನಿಧನಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಸಂತಾಪ ಸೂಚಿಸಿದ್ದಾರೆ.

Donald Trump, Pompeo condoles demise of former Indian President Pranab Mukherjee
ಭಾರತದ ಮಾಜಿ ಅಧ್ಯಕ್ಷ ಪ್ರಣಬ್ ಮುಖರ್ಜಿ ನಿಧನಕ್ಕೆ ಟ್ರಂಪ್, ಪೊಂಪಿಯೊ ಸಂತಾಪ

By

Published : Sep 2, 2020, 11:16 AM IST

ವಾಷಿಂಗ್ಟನ್(ಅಮೆರಿಕಾ):ಭಾರತದಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ನಿಧನಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಮಂಗಳವಾರ ಸಂತಾಪ ಸೂಚಿಸಿದ್ದಾರೆ.

"ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ನಿಧನದ ಸುದ್ದಿ ಕೇಳಿ ನನಗೆ ಬೇಸರವಾಗಿದೆ" ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

ಈ ವೇಳೆ ಮುಖರ್ಜಿಯವರನ್ನು ಟ್ರಂಪ್​ "ಶ್ರೇಷ್ಠ ನಾಯಕ" ಎಂದು ಬಣ್ಣಿಸಿದ್ದಾರೆ. ಅವರ "ದೂರದೃಷ್ಟಿಯ ನಾಯಕತ್ವ" ಭಾರತವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದೆ ಮತ್ತು ಯುಎಸ್-ಭಾರತದ ಸಂಬಂಧವನ್ನು ಇನ್ನಷ್ಟು ಬಲಪಡಿಸಿದೆ ಎಂದು ಹೇಳಿದ್ದಾರೆ.

ಹಲವು ಕಾಯಿಲೆಗಳಿಂದ ಬಳಲುತ್ತಿದ್ದ ಪ್ರಣಬ್​ ಮುಖರ್ಜಿಯವರು ಸತತ 21 ದಿನಗಳ ಕಾಲ ಹೋರಾಡಿ ಕೊನೆಗೆ ಸೋಮವಾರ ಸಂಜೆ ನಿಧನರಾದರು.

ದೀರ್ಘ ಕಾಲ ಕಾಂಗ್ರೆಸ್ ನಾಯಕರಾಗಿದ್ದ ಇವರು ಏಳು ಬಾರಿ ಸಂಸದರಾಗಿ ಕಾರ್ಯನಿರ್ವಹಿಸಿದ್ದಾರೆ. ಶ್ವಾಸಕೋಶದ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಅವರ ಕೊರೊನಾ ವರದಿ ಕೂಡ ಪಾಸಿಟಿವ್​ ಬಂದಿತ್ತು. ಅದರಿಂದಾಗಿ ಅವರಿಗೆ ಭಾನುವಾರ ಹೃದಯಸ್ತಂಭನವಾಗಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ABOUT THE AUTHOR

...view details