ವಾಷಿಂಗ್ಟನ್:17ನೇ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಪ್ರಚಂಡ ಬಹುಮತ ಪಡೆದು ಮತ್ತೊಮ್ಮೆ ಸರ್ಕಾರ ರಚನೆಗೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ನರೇಂದ್ರ ಮೋದಿಗೆ ಶುಭಕೋರಿದ್ದಾರೆ.
ಪ್ರಧಾನಿ ಮೋದಿಗೆ ದೂರವಾಣಿ ಕರೆ ಮಾಡಿರುವ ಟ್ರಂಪ್ ಶುಭಾಶಯ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅಮೇರಿಕ ಅಧ್ಯಕ್ಷರು, ಚುನಾವಣೆಯಲ್ಲಿ ಬಹುದೊಡ್ಡ ಗೆಲುವು ಸಾಧಿಸಿರುವ ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತನಾಡಿ ಶುಭಕೋರಿದ್ದೇನೆ. ಭಾರತದ ಜನರಿಗೆ ಅವರೊಬ್ಬ ಉತ್ತಮ ವ್ಯಕ್ತಿ ಮತ್ತು ನಾಯಕ. ಮೋದಿಯಂತ ನಾಯಕನನ್ನು ಪಡೆದ ಭಾರತೀಯರೇ ಅದೃಷ್ಟವಂತರು ಎಂದು ಹೇಳಿಕೊಂಡಿದ್ದಾರೆ.