ಅಹಮದಾಬಾದ್(ಗುಜರಾತ್): ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಪತ್ನಿ ಸಮೇತ ಬಂದಿಳಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನು ಪ್ರಧಾನಿ ನರೇಂದ್ರ ಮೋದಿ ಭಾರತೀಯ ಸಂಪ್ರದಾಯದ ಅನುಸಾರ ಸ್ವಾಗತಿಸಿದರು.
ಸಬರಮತಿ ಆಶ್ರಮದಲ್ಲಿ ಚರಕ ತಿರುಗಿಸಿ ನೂಲು ತೆಗೆದ ಟ್ರಂಪ್ ದಂಪತಿ! - First Lady Melania Trump
ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಪತ್ನಿ ಸಮೇತ ಬಂದಿಳಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನು ಪ್ರಧಾನಿ ನರೇಂದ್ರ ಮೋದಿ ಭಾರತೀಯ ಸಂಪ್ರದಾಯದ ಅನುಸಾರ ಸ್ವಾಗತಿಸಿದರು.
![ಸಬರಮತಿ ಆಶ್ರಮದಲ್ಲಿ ಚರಕ ತಿರುಗಿಸಿ ನೂಲು ತೆಗೆದ ಟ್ರಂಪ್ ದಂಪತಿ! Donald Trump and Melania Trump spin the Charkha at Sabarmati Ashram](https://etvbharatimages.akamaized.net/etvbharat/prod-images/768-512-6181342-thumbnail-3x2-sheela.jpg)
ಸಬರಮತಿ ಆಶ್ರಮದಲ್ಲಿ ಚರಕ ಸುತ್ತಿಸಿ ನೂಲು ತೆಗೆದ ಟ್ರಂಪ್ ದಂಪತಿ
ಅಲ್ಲಿಂದ ಪ್ರಧಾನಿ ಮೋದಿಯವರೊಂದಿಗೆ ಟ್ರಂಪ್ ದಂಪತಿ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ಅಧ್ಯಕ್ಷ ಟ್ರಂಪ್ ಮತ್ತು ಅಮೆರಿಕ ಮೊದಲ ಮಹಿಳೆ ಮೆಲಾನಿಯಾ ಟ್ರಂಪ್ ಇಬ್ಬರೂ ಕೂಡಿ ಮಹಾತ್ಮ ಗಾಂಧೀಜಿ ಅವರ ಸ್ಮರಣಾರ್ಥವಾಗಿ ಚರಕವನ್ನು ತಿರುಗಿಸಿ ನೂಲು ತೆಗೆದರು.
ಈ ಮೂಲಕ ಬಾಪೂಜಿಗೆ, ಭಾರತ ಇತಿಹಾಸದ ಪ್ರತೀಕವಾದ ಚರಕಕ್ಕೆ ಗೌರವ ಸಲ್ಲಿಸಿದರು.