ದೆಹಲಿ/ಚೆನ್ನೈ/ಲಖನೌ:ಎರಡು ತಿಂಗಳ ನಂತರ ದೆಹಲಿ, ಪಾಟ್ನಾ, ಚೆನ್ನೈ ಮತ್ತು ಲಕ್ನೋ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಲಾಕ್‌ಡೌನ್ ಮಧ್ಯೆ ದೇಶೀಯ ವಿಮಾನಗಳ ಕಾರ್ಯಾಚರಣೆ ಪುನಾರಂಭವಾಗಿದೆ.
ಎಲ್ಲಾ ವಿಮಾನ ನಿಲ್ದಾಣದಲ್ಲಿಯೂ ಸಾಮಾಜಿಕ ಅಂತರ ಮತ್ತು ಮಾಸ್ಕ್ಗಳ ಬಳಕೆ ಕಡ್ಡಾಯವಾಗಿದೆ. ಪ್ರಯಾಣಿಕರು ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಗುತ್ತದೆ.
ದೇಶಿ ವಿಮಾನಗಳ ಹಾರಾಟ ಪ್ರಾರಂಭ ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರತಿದಿನ 25 ವಿಮಾನಗಳ ನಿರ್ಗಮನ ಮತ್ತು 25 ವಿಮಾನಗಳ ಆಗಮನಕ್ಕೆ ಮಹಾರಾಷ್ಟ್ರ ಸರ್ಕಾರ ಅನುಮತಿ ನೀಡಿದೆ. ಪ್ರಯಾಣಿಕರೊಬ್ಬರು ದೆಹಲಿಗೆ ಹೋಗಬೇಕಿದ್ದ ವಿಮಾನವನ್ನು ಪೂರ್ವ ಸೂಚನೆ ಇಲ್ಲದೆ ರದ್ದುಪಡಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಇತ್ತ ಚೆನ್ನೈ, ಲಖನೌ, ಬೆಂಗಳೂರು ಸೇರಿದಂತೆ ಅನೇಕ ವಿಮಾನ ನಿಲ್ದಾಣಗಳು ಕಾರ್ಯಾಚರಣೆಯನ್ನು ಆರಂಭಿಸಿದ್ದು, ಹಲವು ವಿಮಾನಗಳು ಹಾರಾಟ ನಡಸುತ್ತಿವೆ.