ಹೈದರಾಬಾದ್ :ಪಡಿತರ ಪಡೆದು ಮನೆಗೆ ಗಂಡಂದಿರು ತಡವಾಗಿ ಬಂದರೆಂದು ಜಗಳ ಕಾಯ್ದ ಮಹಿಳೆಯರಿಬ್ಬರು ಮನೆ ಬಿಟ್ಟು ಬಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಹೊರವಲಯದ ಮೆಡ್ಚಲ್ನಲ್ಲಿ ನಡೆದಿದೆ.
ಪಡಿತರ ತರಲು ಗಂಡಂದಿರು ತಡ ಮಾಡಿದರೆಂದು ಆತ್ಮಹತ್ಯೆಗೆ ಶರಣಾದ ಹೆಂಡತಿಯರು!!
ತಮ್ಮ ತಮ್ಮ ಮನೆಯಲ್ಲಾದ ಜಗಳದಿಂದಾಗಿ ಇಬ್ಬರೂ ಮಹಿಳೆಯರೂ ಆತ್ಮಹತ್ಯೆಗೆ ನಿರ್ಧರಿಸಿದ್ದಾರೆ. ಮೆಡ್ಚಲ್ ಸಮೀಪದ ಹೊಲದ ಬಳಿ ತೆರಳಿ ಅಲ್ಲೇ ಇದ್ದ ಮರಕ್ಕೆ ಒಬ್ಬಾಕೆ ತನ್ನ ಮಗಳನ್ನು ನೇಣು ಬಿಗಿಸಿ, ಬಳಿಕ ಇಬ್ಬರು ಮಹಿಳೆಯರೂ ಬೇರೆ ಬೇರೆ ಮರಗಳಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆ ನಡೆದಿದ್ದಿಷ್ಟು :ಸರ್ಕಾರ ನೀಡುವ ಪಡಿತರವನ್ನು ಗಂಡಂದಿರು ಮನೆಗೆ ತರಲು ನಿಧಾನಿಸಿದರೆಂದು ಮಹಿಳೆಯರಿಬ್ಬರು ಜಗಳ ಶುರು ಮಾಡಿದ್ದಾರೆ. ಆ ಬಳಿಕ ಜಗಳವು ತಾರಕಕ್ಕೇರಿದೆ. ಇದೇ ವಿಚಾರಕ್ಕೆ ಕೋಪಗೊಂಡ ಮಹಿಳೆಯರಿಬ್ಬರು ಮನೆ ಬಿಟ್ಟು ಕರೀಂನಗರದಿಂದ ಏ.10ರಂದೇ ಮೆಡ್ಚಾಲ್ಗೆ ಬಂದಿದ್ದರು. ಲಾಕ್ಡೌನ್ ಕಾರಣದಿಂದಾಗಿ ಅವರು ಜವಾಹರನಗರ ಬಳಿಯ ಚರ್ಚ್‌ನಲ್ಲಿ ಆಶ್ರಯ ಪಡೆದಿದ್ದರು ಎನ್ನಲಾಗಿದೆ. ತಮ್ಮ ತಮ್ಮ ಮನೆಯಲ್ಲಾದ ಜಗಳದಿಂದಾಗಿ ಇಬ್ಬರೂ ಮಹಿಳೆಯರೂ ಆತ್ಮಹತ್ಯೆಗೆ ನಿರ್ಧರಿಸಿದ್ದಾರೆ. ಮೆಡ್ಚಲ್ ಸಮೀಪದ ಹೊಲದ ಬಳಿ ತೆರಳಿ ಅಲ್ಲೇ ಇದ್ದ ಮರಕ್ಕೆ ಒಬ್ಬಾಕೆ ತನ್ನ ಮಗಳನ್ನು ನೇಣು ಬಿಗಿಸಿ, ಬಳಿಕ ಇಬ್ಬರು ಮಹಿಳೆಯರೂ ಬೇರೆ ಬೇರೆ ಮರಗಳಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರಾಥಮಿಕ ಹಂತದ ಪರೀಕ್ಷೆ ನಡೆಸಿದ ಪೊಲೀಸರು ಆತ್ಮಹತ್ಯೆ ಮಾಡಿಕೊಂಡ ಮಹಿಳೆಯರಿಬ್ಬರು ಕರೀಂನಗರ ಜಿಲ್ಲೆಯವರಾಗಿದ್ದು, ಏ.10ರಂದು ಮೆಡ್ಚಾಲ್ಗೆ ಬಂದಿದ್ದರು. ಮೃತ ಮಹಿಳೆಯರನ್ನು ಸುಮತಿ, ಅನುಷಾ ಹಾಗೂ ಆಕೆಯ 5 ವರ್ಷದ ಮಗಳು ಉಮಾಮಹೇಶ್ವರಿ ಎಂದು ಗುರುತಿಸಲಾಗಿದೆ. ತನ್ನ ಮಗಳನ್ನು ನೇಣಿಗೆ ಹಾಕುವ ಮೊದಲು ಅನುಷಾ ಆಕೆಗೆ ವಿಷ ಕುಡಿಸಿದ್ದಳು ಎಂದು ಪೊಲೀಸರು ಹೇಳಿದ್ದಾರೆ. ಹೆಚ್ಚಿನ ತನಿಖೆಗಾಗಿ ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದರೂ ಕ್ಷುಲ್ಲಕ ಕಾರಣಕ್ಕಾದ ಜಗಳ ಇಬ್ಬರು ಮಹಿಳೆಯರೊಂದಿಗೆ 5 ವರ್ಷದ ಬಾಲಕಿಯನ್ನೂ ಬಲಿಪಡೆದಿರೋದು ವಿಪರ್ಯಾಸ.