ತಿರುವನಂತಪುರಂ:ಡಾಲರ್ ಕಳ್ಳಸಾಗಣೆ ಪ್ರಕರಣದಲ್ಲಿ ಕಸ್ಟಮ್ಸ್ ಇಲಾಖೆ ಮುಂದೆ ವಿಚಾರಣೆಗೆ ಹಾಜರಾಗಲು ಕೇರಳ ವಿಧಾನಸಭೆ ಸ್ಪೀಕರ್‌ನ ಹೆಚ್ಚುವರಿ ಖಾಸಗಿ ಕಾರ್ಯದರ್ಶಿ ಕೆ.ಅಯ್ಯಪ್ಪನ್ ವಿಫಲರಾಗಿದ್ದಾರೆ.
ಬುಧವಾರ ಬೆಳಗ್ಗೆ 10 ಗಂಟೆಗೆ ವಿಚಾರಣೆಗಾಗಿ ಕೊಚ್ಚಿ ಕಸ್ಟಮ್ಸ್ ಕಚೇರಿಗೆ ಹಾಜರಾಗುವಂತೆ ಕಸ್ಟಮ್ಸ್ ಅಯ್ಯಪ್ಪನ್ ಅವರಿಗೆ ಕಸ್ಟಮ್ಸ್ ಇಲಾಖೆ ಮಂಗಳವಾರ ಸೂಚನೆ ನೀಡಿತ್ತು.
ಇದಕ್ಕೂ ಮೊದಲು ವಿಚಾರಣೆಗೆ ಹಾಜರಾಗುವಂತೆ ಕಸ್ಟಂ ಅಧಿಕಾರಿಗಳು ಇ-ಮೇಲ್ ಮೂಲಕ ಸೂಚನೆ ನೀಡಿದ್ದರೆಂದು ತಿಳಿದುಬಂದಿದ್ದು, ಮಂಗಳವಾರ ಅಯ್ಯಪ್ಪನ್ ವಿಚಾರಣೆಗೆ ಹಾಜರಾಗುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು.
ಇದನ್ನೂ ಓದಿ:ಹೆತ್ತ ತಾಯಿಯ ವಿಕೃತಿ.. ಅಪ್ರಾಪ್ತ ಮಗನ ಮೇಲೆಯೇ ಲೈಂಗಿಕ ದೌರ್ಜನ್ಯ..
ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಕೆ.ಅಯ್ಯಪ್ಪನ್ ತನಗೆ ಯಾವುದೇ ಅಧಿಕೃತ ಸಮನ್ಸ್ ಬರದ ಕಾರಣ ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಇದಾದ ನಂತರ ಮಂಗಳವಾರ ಸಮನ್ಸ್ ನೀಡಿದ್ದು, ಬುಧವಾರ ಹಾಜರಾಗುವಂತೆ ಸೂಚನೆ ನೀಡಿದ್ದರೂ, ಅಯ್ಯಪ್ಪನ್ ವಿಚಾರಣೆಗೆ ಹಾಜರಾಗಲಿಲ್ಲ.
ಕೇರಳದಲ್ಲಿ ಚಿನ್ನ ಕಳ್ಳ ಸಾಗಣೆ ಪ್ರಕರಣದ ಮುಖ್ಯ ಆರೋಪಿಯಾಗಿರುವ ಸ್ವಪ್ನಾ ಸುರೇಶ್ ಅವರ ಹೇಳಿಕೆಗಳನ್ನು ಆಧರಿಸಿ, ಕಸ್ಟಮ್ಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಆಕೆ ಪಡೆಯುತ್ತಿದ್ದ ಹಣವನ್ನು ಡಾಲರ್ಗಳಾಗಿ ಪರಿವರ್ತಿಸಿಕೊಂಡು ಏರ್ಪೋರ್ಟ್ಗೆ ತೆಗೆದುಕೊಂಡು ಹೋಗುತ್ತಿದ್ದರು ಎನ್ನಲಾಗಿದೆ. ಇದರ ಜೊತೆಗೆ ಕೇರಳ ಸ್ಪೀಕರ್ ಕಚೇರಿಯನ್ನು ಕೂಡಾ ಸ್ವಪ್ನಾ ಸುರೇಶ್ ಉಲ್ಲೇಖಿಸಿದ್ದಳು.