ಕರ್ನಾಟಕ

karnataka

ETV Bharat / bharat

ವೇತನ ಪಾವತಿಸದ ಹಿನ್ನೆಲೆ ‘ವೇತನ್ ಚೋರ್ ರಾವಣ’ನ ಪ್ರತಿಮೆ ದಹಿಸಿದ ದೆಹಲಿ ವೈದ್ಯರು - doctors in delhi burn vetan chor ravan

ವೇತನ ಪಾವತಿಸದ ಹಿನ್ನೆಲೆ ಹಿಂದೂ ರಾವ್ ಆಸ್ಪತ್ರೆಯ ವೈದ್ಯರು ಕಳೆದ 21 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ವೈದ್ಯರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಮುಂದುವರೆಸುವ ಸಾಂಕೇತಿಕ ಪ್ರತಿಭಟನೆಯಾಗಿ ನಿನ್ನೆ ರಾವಣನ ಪ್ರತಿಮೆಯನ್ನು ದಹಿಸಿದರು.

ವೆತನ್ ಚೋರ್ ರಾವಣನ ಪ್ರತಿಮೆ ದಹಿಸಿದ ದೆಹಲಿ ವೈದ್ಯರು
ವೆತನ್ ಚೋರ್ ರಾವಣನ ಪ್ರತಿಮೆ ದಹಿಸಿದ ದೆಹಲಿ ವೈದ್ಯರು

By

Published : Oct 26, 2020, 10:03 AM IST

ನವದೆಹಲಿ:ವೇತನ ಪಾವತಿಸದ ಹಿನ್ನೆಲೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಮುಂದುವರೆಸುವ ಸಾಂಕೇತಿಕ ಪ್ರತಿಭಟನೆಯಾಗಿ ಹಿಂದೂ ರಾವ್ ಆಸ್ಪತ್ರೆಯ ವೈದ್ಯರು ನಿನ್ನೆ ರಾವಣನ ಪ್ರತಿಮೆ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ವೇತನ ಪಾವತಿಸದ ಹಿನ್ನೆಲೆ ಆಸ್ಪತ್ರೆಯ ವೈದ್ಯರು ಕಳೆದ 21 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. ಸರ್ಕಾರದ ಗಮನ ಸೆಳೆಯುವ ಸಲುವಾಗಿ ಇಂದು ‘ವೇತನ್ ಚೋರ್ ರಾವಣ’ ಪ್ರತಿಮೆಯನ್ನು ಸುಡುವ ಮೂಲಕ ಸಾಂಕೇತಿಕ ಪ್ರತಿಭಟನೆ ನಡೆಸಿದ್ದೇವೆ ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ.

ಇದು ವೈದ್ಯರ ಉಪವಾಸದ ಮೂರನೇ ದಿನ. ಇಂದು ದಸರಾ ಮತ್ತು ನಾವು ನಮ್ಮ ಕುಟುಂಬಗಳೊಂದಿಗೆ ಈ ಹಬ್ಬವನ್ನು ಆಚರಿಸಬೇಕಿತ್ತು. ಆದರೆ ನಾವು ಪ್ರತಿಭಟನೆಯಲ್ಲಿ ನಿರತರಾಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅಕ್ಟೋಬರ್ 13 ರಂದು ಎನ್​ಡಿಎಂಸಿ ನಡೆಸುತ್ತಿರುವ ಹಿಂದೂ ರಾವ್ ಆಸ್ಪತ್ರೆಯನ್ನು ಕೋವಿಡ್ -19 ಆಸ್ಪತ್ರೆಗಳ ಪಟ್ಟಿಯಿಂದ ತೆಗೆದುಹಾಕಲಾಯಿತು. ಇತ್ತೀಚೆಗೆ ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರು ಎಂಸಿಡಿ ನಡೆಸುತ್ತಿರುವ ಹಿಂದೂ ರಾವ್ ಆಸ್ಪತ್ರೆಯ ಕೋವಿಡ್ -19 ರೋಗಿಗಳನ್ನು ದೆಹಲಿ ಸರ್ಕಾರಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗುವುದು ಎಂದು ಹೇಳಿದ್ದರು. ಮುಷ್ಕರ ನಿರತ ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿಗೆ ನೋಟಿಸ್ ನೀಡಲಾಗಿದೆ.

For All Latest Updates

TAGGED:

ABOUT THE AUTHOR

...view details