ಕರ್ನಾಟಕ

karnataka

ETV Bharat / bharat

2 ಸಲ ಪ್ಲಾಸ್ಮಾ ದಾನ ಮಾಡಿರುವೆ, ಅವಶ್ಯಕತೆ ಬಿದ್ದರೆ 10 ಸಲ ನೀಡುವೆ: ಚಿಕಿತ್ಸೆ ಕೊಂಡಾಡಿದ ತಬ್ಲಿಘಿ ಸದಸ್ಯ - ಕೊರೊನಾ ಸೋಂಕಿತ ಅರ್ಷದ್​

ತಬ್ಲಿಘಿ ಜಮಾತ್​​ ಸಭೆಯಲ್ಲಿ ಭಾಗಿಯಾಗಿ ಕೊರೊನಾ ಸೋಂಕಿಗೆ ಒಳಗಾಗಿರುವ ವ್ಯಕ್ತಿಯೋರ್ವನಿಗೆ ಏಮ್ಸ್​​​​ ಕೋವಿಡ್​ ಸೆಂಟರ್​​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲರೂ ಸರ್ಕಾರದ ಮಾರ್ಗಸೂಚಿ ಪಾಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

Tablighi Jamaat member
Tablighi Jamaat member

By

Published : May 2, 2020, 10:56 AM IST

ನವದೆಹಲಿ: ದೇಶಾದ್ಯಂತ ಕೋವಿಡ್​-19 ಸೋಂಕಿತರ ಸಂಖ್ಯೆ ಏರಿಕೆ ಕ್ರಮದಲ್ಲಿ ಸಾಗುತ್ತಿದೆ. ಈಗಾಗಲೇ ಸೋಂಕು ಕಾಣಿಸಿಕೊಂಡಿರುವ ಅನೇಕರನ್ನು ವಿವಿಧ ಸ್ಥಳಗಳಲ್ಲಿಟ್ಟು ಕ್ವಾರಂಟೈನ್​ ಮಾಡಲಾಗ್ತಿದೆ. ಇದರ ಮಧ್ಯೆ ಕಳೆದ ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ನಡೆದ ತಬ್ಲಿಘಿ ಸಮಾವೇಶದಲ್ಲಿ ಭಾಗಿಯಾಗಿದ್ದ ಅನೇಕರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ಇದೇ ವಿಷಯವಾಗಿ ಮಾತನಾಡಿರುವ ತಬ್ಲಿಘಿ ಸಮಾವೇಶದಲ್ಲಿ ಭಾಗಿಯಾಗಿದ್ದ ಸದಸ್ಯ ಅರ್ಷದ್​ ಅಹ್ಮದ್​, ನಾನು ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಕೋವಿಡ್​-19 ಸೆಂಟರ್​​ನಲ್ಲಿ ವೈದ್ಯರು ದಿನಕ್ಕೆ ಮೂರು ಸಲ ಬಂದು ತಪಾಸಣೆ ನಡೆಸುತ್ತಿದ್ದು, ಯಾವುದೇ ರೀತಿಯ ತೊಂದರೆ ಇಲ್ಲದಂತೆ ನೋಡಿಕೊಳ್ಳುತ್ತಿದ್ದಾರೆ. ಸರ್ಕಾರ ಸೂಚಿಸುವ ಮಾರ್ಗಸೂಚಿ ಪಾಲಿಸಬೇಕಾಗಿದ್ದು,ಇದರಿಂದ ಎಲ್ಲರೂ ಆದಷ್ಟು ಬೇಗ ಕೊರೊನಾದಿಂದ ಹೊರಬರಬಹುದಾಗಿದೆ ಎಂದಿದ್ದಾರೆ.

ತಬ್ಲಿಘಿ ಸದಸ್ಯ ಹೇಳಿದ್ದೇನು ಕೇಳಿ!?

ಏಮ್ಸ್​ ಆಸ್ಪತ್ರೆ ಸೂಚಿಸಿರುವ ಕೋವಿಡ್​-19 ಸೆಂಟರ್​​ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಅರ್ಷದ್​, ಈಗಾಗಲೇ ಎರಡು ಸಲ ಪ್ಲಾಸ್ಮಾ ದಾನ ಮಾಡಿದ್ದು, ಅವಶ್ಯಕತೆ ಬಿದ್ದರೆ 10 ಸಲ ನೀಡಲು ಸಿದ್ಧ ಎಂದಿದ್ದಾರೆ.

'ರಂಜಾನ್ ತಿಂಗಳಲ್ಲಿ ಮನೆಯಲ್ಲಿದ್ದೇ ನಮಾಜ್ ಮಾಡಿ'

ಇದು ನಮಗೆ ರಂಜಾನ್​ ತಿಂಗಳಾಗಿದ್ದು, ಎಲ್ಲರೂ ಮನೆಯಲ್ಲೇ ನಮಾಜ್​ ಮಾಡಬೇಕು. ಯಾವುದೇ ಕಾರಣಕ್ಕೂ ಮಸೀದಿಗೆ ತೆರಳಬಾರದು ಎಂದು ಮನವಿ ಮಾಡಿಕೊಂಡಿದ್ದು, ಮಾಸ್ಕ್​ ಧರಿಸುವಂತೆ ತಿಳಿಸಿದ್ದಾರೆ.

ABOUT THE AUTHOR

...view details