ನವದೆಹಲಿ: ವೈದ್ಯರೇ ನಮ್ಮ ಸೂಪರ್ ಹೀರೋಗಳು, ಅವರ ರಕ್ಷಣೆಗೆ ಬಲವಾದ ಕಾನೂನು ಅಗತ್ಯವಿದೆ ಎಂದು ನಟಿ, ಬಿಜೆಪಿ ಸಂಸದೆ ಹೇಮಾಮಾಲಿನಿ ಲೋಕಸಭೆಯಲ್ಲಿ ಹೇಳಿದರು.
'ವೈದ್ಯರೇ ನಮ್ಮ ಸೂಪರ್ ಹೀರೋಗಳು, ಅವರ ರಕ್ಷಣೆ ಅತ್ಯಗತ್ಯ' ಎಂದ ಕನಸಿನ ಕನ್ಯೆ - undefined
ವೈದ್ಯರು ನಮ್ಮ ಸೂಪರ್ ಹೀರೋಗಳು, ದೇಶದ ಆಸ್ತಿ. ನಾವು ದೇವರನ್ನು ನಂಬುತ್ತೇವೆ, ಅಂತೆಯೇ ವೈದ್ಯರ ಮೇಲೂ ವಿಶ್ವಾಸವಿರಿಸಬೇಕು. ವೈದ್ಯಕೀಯ ಸಮುದಾಯದ ರಕ್ಷಣೆಗೆ ಪ್ರಬಲ ಕಾನೂನು ಅಗತ್ಯವಿದೆ ಎಂದು ನಟಿ, ಬಿಜೆಪಿ ಸಂಸದೆ ಹೇಮಾಮಾಲಿನಿ ಲೋಕಸಭೆಯಲ್ಲಿ ಹೇಳಿದರು.
!['ವೈದ್ಯರೇ ನಮ್ಮ ಸೂಪರ್ ಹೀರೋಗಳು, ಅವರ ರಕ್ಷಣೆ ಅತ್ಯಗತ್ಯ' ಎಂದ ಕನಸಿನ ಕನ್ಯೆ](https://etvbharatimages.akamaized.net/etvbharat/prod-images/768-512-3743198-thumbnail-3x2-gggg.jpg)
ಸಂಸತ್ ಅಧಿವೇಶನದ ವೇಳೆ ಮಾತನಾಡಿದ ಅವರು, ದೇಶದ ವಿವಿಧೆಡೆ ವೈದ್ಯರ ಮೇಲೆ ನಡೆದ ಹಲ್ಲೆ ಪ್ರಕರಣಗಳು ಆತಂಕ ಮೂಡಿಸಿವೆ. ಇದೇ ಕಾರಣಕ್ಕೆ ಜೂನ್ 17ರಂದು 8 ಲಕ್ಷ ವೈದ್ಯರು ರಾಷ್ಟ್ರವ್ಯಾಪಿ ಬಂದ್ ನಡೆಸಲು ಮುಂದಾದರು. ರೋಗಿಯ ಜೀವ ಉಳಿಸುವ ಸಂದರ್ಭದಲ್ಲಿ ವೈದ್ಯರ ಸಾಕಷ್ಟು ಒತ್ತಡದಲ್ಲಿರುತ್ತಾರೆ ಎಂದು ವೈದ್ಯರ ಸಮಸ್ಯೆ ಬಿಚ್ಚಿಟ್ಟರು.
ವೈದ್ಯರು ನಮ್ಮ ಸೂಪರ್ ಹೀರೋಗಳು, ದೇಶದ ಆಸ್ತಿ. ನಾವು ದೇವರನ್ನು ನಂಬುತ್ತೇವೆ, ಅಂತೆಯೇ ವೈದ್ಯರ ಮೇಲೂ ವಿಶ್ವಾಸವಿರಿಸಬೇಕು. ವೈದ್ಯಕೀಯ ಸಮುದಾಯದ ರಕ್ಷಣೆಗೆ ಪ್ರಬಲ ಕಾನೂನು ಅಗತ್ಯವಿದೆ. ವೈದ್ಯರ ಮೇಲೆ ಹಲ್ಲೆ ನಡೆಸುವವರನ್ನು ಬ್ಲಾಕ್ಲಿಸ್ಟ್ಗೆ ಸೇರಿಸಬೇಕು. ಅಂತಹವರರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಹ ಸಿಗದಂತೆ ಮಾಡಬೇಕು ಎಂದು ಆಕ್ರೋಶದಿಂದ ನುಡಿದರು.