ಕರ್ನಾಟಕ

karnataka

ETV Bharat / bharat

ಕೊವಾಕ್ಸಿನ್ ಲಸಿಕೆ ‘ಅಸಮರ್ಥತೆ’ ಕುರಿತ ಊಹಾಪೋಹಕ್ಕೆ ತೆರೆ ಎಳೆದ ವೈದ್ಯರು: ಹೀಗಿದೆ ಸ್ಪಷ್ಟನೆ - ಅಂಬಾಲಾ ಸಿವಿಲ್ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ. ಕುಲದೀಪ್ ಸಿಂಗ್

ಭಾರತ್ ಬಯೋಟೆಕ್ ಲಂಡನ್ ಮತ್ತು ಅಮೆರಿಕದಲ್ಲಿ ಕೊವಾಕ್ಸಿನ್‌ನ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸುತ್ತಿದೆ. ಕಳೆದ ಎರಡು ದಶಕಗಳಲ್ಲಿ 18 ದೇಶಗಳಲ್ಲಿ 80ಕ್ಕೂ ಹೆಚ್ಚು ಕ್ಲಿನಿಕಲ್ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ

vaccine
ಕೊವಾಕ್ಸಿನ್

By

Published : Dec 5, 2020, 10:41 PM IST

ಹೈದರಾಬಾದ್: ಕೊವಿಡ್ -19ರ ಪ್ರಾಯೋಗಿಕ ಲಸಿಕೆ ಪಡೆದು ಕೊವಿಡ್ ಪಾಸಿಟಿವ್​ಗೆ ಒಳಗಾಗಿರುವ ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಆವರಿಗೆ ಚಿಕಿತ್ಸೆ ನೀಡುತ್ತಿರುವ ಅಂಬಾಲಾ ಸಿವಿಲ್ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ. ಕುಲದೀಪ್ ಸಿಂಗ್, ಲಸಿಕೆಯ ಮೊದಲ ಹನಿ ಸ್ವೀಕರಿಸಿದ 15 ದಿನಗಳಲ್ಲಿ ಅದು ಮಾನವನ ದೇಹದಲ್ಲಿ ಪರಿಣಾಮ ಬೀರಲು ಸಾಧ್ಯವಿಲ್ಲ ಎಂದು ಶನಿವಾರ ಸ್ಪಷ್ಟಪಡಿಸಿದ್ದಾರೆ.

"ಲಸಿಕೆಯ ಮೊದಲ ಹನಿ ಪಡೆದ 15 ದಿನಗಳಲ್ಲಿ ಅದು ಮಾನವನ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ದಿಸಲು ಸಾಧ್ಯವಿಲ್ಲ" ಎಂದೂ ಡಾ. ಸಿಂಗ್ ಹೇಳಿದ್ದಾರೆ. ಭಾರತದಲ್ಲಿ ಮೊದಲ ಬಾರಿಗೆ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಲಸಿಕೆ ‘ಕೊವಾಕ್ಸಿನ್‌ನ’ ಮೂರನೇ ಹಂತದ ಪ್ರಯೋಗದಲ್ಲಿ ಹರಿಯಾಣದ ಆರೋಗ್ಯ ಸಚಿವರು ಸ್ವಯಂಪ್ರೇರಿತರಾಗಿ ಲಸಿಕೆ ತೆಗೆದುಕೊಂಡಿದ್ದರು. ಲಸಿಕೆಯ ಮೊದಲ ಪ್ರಮಾಣವನ್ನು ನವೆಂಬರ್ 20 ರಂದು ವಿಜ್‌ಗೆ ನೀಡಲಾಯಿತು ಎಂದು ಡಾ. ಸಿಂಗ್ ಹೇಳಿದರು, ಮಾನವನ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ದಿಸಲು ಕನಿಷ್ಠ ಎರಡು ಡೋಸ್ ಲಸಿಕೆಗಳನ್ನು ನೀಡಬೇಕು ಎಂದು ಡಾ.ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

"ನವೆಂಬರ್ 20 ರಂದು ಕೋವಾಕ್ಸಿನ್ ಅನ್ನು ಸಚಿವರಿಗೆ ನೀಡಲಾಯಿತು. ಇಂದು ಡಿಸೆಂಬರ್ 5, ಅಂದರೆ ಸಚಿವರು ಲಸಿಕೆ ಸ್ವೀಕರಿಸಿ ಇಂದಿಗೆ 15 ದಿನಗಳಾಗಿವೆ. ಕನಿಷ್ಠ ಎರಡು ಡೋಸ್ ಲಸಿಕೆಗಳನ್ನು ನೀಡಿದರೆ ಮಾತ್ರ 42 ದಿನಗಳ ನಂತರ ಮಾನವನ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ದಿಸಲು ಸಾಧ್ಯ " ಎಂದು ಡಾ. ಸಿಂಗ್ ಪ್ರತಿಪಾದಿಸಿದರು. ಅನಿಲ್ ವಿಜ್ ಅವರಿಗೆ ಡಿಸೆಂಬರ್ 18 ರಂದು ಎರಡನೇಯ ಡೋಸ್ ಲಸಿಕೆಯನ್ನು ನೀಡಬೇಕು. ಅವರಿನ್ನೂ ಎರಡನೇ ಡೋಸ್ ಲಸಿಕೆಯನ್ನು ಪಡೆದಿಲ್ಲ, ಇದನ್ನು ಬೂಸ್ಟರ್ ಡೋಸ್ ಎಂದೂ ಕರೆಯುತ್ತಾರೆ. ಕೋವಿಡ್​ಗೆ ಒಳಗಾಗಿರುವ ಅನಿಲ್ ವಿಜ್ ಅವರು ಇಂದು ಬೆಳಗ್ಗೆ ತನ್ನ ಸಂಪರ್ಕಕ್ಕೆ ಬಂದಿರುವವರಿಗೆ ಕೊವಿಡ್ ಪರೀಕ್ಷೆಗೆ ಒಳಗಾಗುವಂತೆ ಟ್ವಿಟರ್​ನಲ್ಲಿ ಮನವಿ ಮಾಡಿದ್ದರು.

"ನಾನು ಕೊವಿಡ್ ಪಾಸಿಟಿವ್​ಗೆ ಒಳಗಾಗಿದ್ದೇನೆ ಮತ್ತು ಸಿವಿಲ್ ಹಾಸ್ಪಿಟಲ್ ಅಂಬಾಲಾ ಕಂಟೇನ್​​​ಮೆಂಟ್​ನಲ್ಲಿ ದಾಖಲಾಗಿದ್ದೇನೆ. ನನ್ನೊಂದಿಗೆ ನಿಕಟ ಸಂಪರ್ಕಕ್ಕೆ ಬಂದವರೆಲ್ಲರೂ ಕೊರೊನಾ ಪರೀಕ್ಷೆಗೆ ಒಳಗಾಗುವಂತೆ ಕೋರುತ್ತೇನೆ" ಎಂದು ಆರೋಗ್ಯ ಸಚಿವರು ಟ್ವಿಟ್ಟರ್​ನಲ್ಲಿ ಮನವಿ ಮಾಡಿದ್ದಾರೆ.

ಈತನ್ಮಧ್ಯೆ, ಕೊವಾಕ್ಸಿನ್ ಅನ್ನು ಅಭಿವೃದ್ಧಿಪಡಿಸಿದ ಭಾರತ್ ಬಯೋಟೆಕ್ ಔಷಧ ಸಂಸ್ಥೆ, "ಲಸಿಕೆಯ ಪರಿಣಾಮಕಾರಿತ್ವವನ್ನು ಎರಡನೇ ಡೋಸ್ ನಂತರವೇ ಅಂದರೆ 14 ದಿನಗಳ ನಂತರ ಮಾತ್ರ ನಿರ್ಧರಿಸಬಹುದು" ಎಂದು ಶನಿವಾರ ಸ್ಪಷ್ಟಪಡಿಸಿದೆ. ಅನಿಲ್ ವಿಜ್ ಕೋವಿಡ್ -19 ಪಾಸಿಟಿವ್ ಎಂದು ದೃಢಪಟ್ಟ ನಂತರ ಭಾರತ್ ಬಯೋಟೆಕ್ ಸಂಸ್ಥೆ ಈ ಸ್ಪಷ್ಟೀಕರಣವನ್ನು ನೀಡಿದೆ.

"ಕೊವಾಕ್ಸಿನ್ ಕ್ಲಿನಿಕಲ್ ಪ್ರಯೋಗಗಳು ಎರಡು - ಡೋಸ್ ನ ವೇಳಾಪಟ್ಟಿಯನ್ನು ಆಧರಿಸಿವೆ. ಇದನ್ನು 28 ದಿನಗಳ ಅಂತರದಲ್ಲಿ ನೀಡಲಾಗುತ್ತದೆ. ಲಸಿಕೆ ಪರಿಣಾಮಕಾರಿತ್ವವನ್ನು ಎರಡನೇ ಡೋಸ್ ನಂತರ 14 ದಿನಗಳ ನಂತರ ನಿರ್ಧರಿಸಲಾಗುತ್ತದೆ" ಎಂದು ಭಾರತ್ ಬಯೋಟೆಕ್ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ. ಮೂರನೇ ಹಂತದ ಲಸಿಕೆ ಪ್ರಯೋಗದ ಸಮಯದಲ್ಲಿ, ಹೈದರಾಬಾದ್ ಮೂಲದ ಸಂಸ್ಥೆಯು ಭಾರತ್ ಬಯೋಟೆಕ್ 25 ಸ್ಥಳಗಳಲ್ಲಿ '26,000 ಪ್ರಾಯೋಗಿಕ ಲಸಿಕೆ ನೀಡಿದೆ 'ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಮೂರನೇ ಹಂತದ ಪ್ರಯೋಗದ ಸಂದರ್ಭದಲ್ಲಿ ಡಬಲ್ - ಬ್ಲೈಂಡ್ ಮಾಡಲಾಗಿದೆ "ಐವತ್ತು ಪ್ರತಿಶತ ಪ್ರಾಯೋಗಿಕ ವಿಭಾಗಗಳು ಲಸಿಕೆ ಪಡೆಯುತ್ತವೆ ಮತ್ತು 50 ಪ್ರತಿಶತ ವಿಭಾಗಗಳು ಪ್ಲಸೀಬೊವನ್ನು ಪಡೆಯುತ್ತವೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಹರಿಯಾಣ ಆರೋಗ್ಯ ಸಚಿವರು ಕೋವಿಡ್ ಪಾಸಿಟಿವ್ ಎಂದು ದೃಡಪಟ್ಟ ನಂತರ ಪರಿಸ್ಥಿತಿಯ ತಪ್ಪು ಗ್ರಹಿಕೆಯನ್ನು ತಡೆಯಲು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿಕೆ ನೀಡಿದೆ. "ಲಸಿಕೆಯ ಎರಡನೇ ಡೋಸ್ ತೆಗೆದುಕೊಂಡ ನಂತರ ಹಾಗೂ ನಿರ್ದಿಷ್ಟ ಸಂಖ್ಯೆಯ ದಿನಗಳು ಕಳೆದ ನಂತರವೇ ಮನುಷ್ಯನಲ್ಲಿ ಸೋಂಕಿನ ವಿರುದ್ಧದ ರೋಗ ನಿರೋಧಕ ಶಕ್ತಿಗಳು ಬೆಳೆಯುತ್ತವೆ. ಇದು ಎರಡು - ಡೋಸ್ ಲಸಿಕೆ. ಪ್ರಯೋಗಿಕ ಲಸಿಕೆ ಪಡೆದಿರುವ ಸಚಿವರು ತೆಗೆದುಕೊಂಡಿರುವುದು ಕೇವಲ ಒಂದು ಡೋಸ್ ಲಸಿಕೆ ಎಂದು ಕೇಂದ್ರ ಆರೋಗ್ಯ ಇಲಾಖೆ ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

ಭಾರತ್ ಬಯೋಟೆಕ್ ಲಂಡನ್ ಮತ್ತು ಅಮೆರಿಕದಲ್ಲಿ ಕೊವಾಕ್ಸಿನ್‌ನ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸುತ್ತಿದೆ. ಕಳೆದ ಎರಡು ದಶಕಗಳಲ್ಲಿ 18 ದೇಶಗಳಲ್ಲಿ 80 ಕ್ಕೂ ಹೆಚ್ಚು ಕ್ಲಿನಿಕಲ್ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ, "ಭಾರತ್ ಬಯೋಟೆಕ್ 80 ಕ್ಕೂ ಹೆಚ್ಚು ದೇಶಗಳಿಗೆ 4 ಬಿಲಿಯನ್ ಡೋಸ್‌ಗಳನ್ನು ಪೂರೈಸಿದೆ, ಸುರಕ್ಷತೆಯ ಅತ್ಯುತ್ತಮ ಬಿರುದನ್ನೂ ಅದು ಪಡೆದುಕೊಂಡಿದೆ. ಕೊವಾಕ್ಸಿನ್‌ನ ಮೂರನೇ ಹಂತದ ಪ್ರಯೋಗಗಳು ಕೋವಿಡ್ -19ರ ಲಸಿಕೆಗಳಿಗಾಗಿ ಭಾರತದಲ್ಲಿ ನಡೆಸುತ್ತಿರುವ ಏಕೈಕ ಪರಿಣಾಮಕಾರಿ ಪ್ರಯೋಗವಾಗಿದೆ, ಲಸಿಕೆಯ ಪರಿಣಾಮಕಾರಿತ್ವವನ್ನು ನಿರ್ಧರಿಸಲು ವೈವಿಧ್ಯಮಯ ಹೊಂದಿರುವ ಭಾರತೀಯ ಜನಸಂಖ್ಯೆಯನ್ನು ಆಯ್ಕೆ ಮಾಡಲಾಗಿದೆ "ಎಂದು ಭಾರತ್ ಬಯೋಟೆಕ್ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

ABOUT THE AUTHOR

...view details