ಕರ್ನಾಟಕ

karnataka

ETV Bharat / bharat

ಮಾನವೀಯತೆ ಮೆರೆದ ವೈದ್ಯ; ಸ್ವತಃ ಟ್ರ್ಯಾಕ್ಟರ್ ಓಡಿಸಿ ಕೊರೊನಾ ಸೋಂಕಿತನ ಅಂತ್ಯಕ್ರಿಯೆ - Doctor took dead body to crematorium in telangana

ಕೋವಿಡ್​ನಿಂದಾಗಿ ಮರಣ ಹೊಂದಿದ ವ್ಯಕ್ತಿಯ ಮೃತದೇಹವನ್ನು ಶವಾಗಾರಕ್ಕೆ ಕೊಂಡೊಯ್ಯಲು ಪುರಸಭೆಯ ಸಿಬ್ಬಂದಿ ನಿರಾಕರಿಸಿದ್ದಾರೆ. ಆದರೆ ಆಸ್ಪತ್ರೆಯ ವೈದ್ಯ ಡಾ. ಶ್ರೀರಾಮ್ ಎಂಬುವವರು ಪಿಪಿಇ ಸೂಟ್‌ನಲ್ಲಿ ಸ್ವತಃ ಟ್ರ್ಯಾಕ್ಟರ್ ಓಡಿಸಿ ಮೃತದೇಹಕ್ಕೆ ಅಂತ್ಯಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.

ಕೊರೊನಾ ಸೋಂಕಿತನ ಅಂತ್ಯಕ್ರಿಯೆ
ಕೊರೊನಾ ಸೋಂಕಿತನ ಅಂತ್ಯಕ್ರಿಯೆ

By

Published : Jul 13, 2020, 6:09 PM IST

Updated : Jul 13, 2020, 6:25 PM IST

ಹೈದರಾಬಾದ್: ‘ನಾವು ಹೋರಾಡಬೇಕಿರುವುದು ರೋಗಿಯ ವಿರುದ್ಧವಲ್ಲ ರೋಗದ ವಿರುದ್ಧ’ ಎಂದು ಸರ್ಕಾರ, ಆರೋಗ್ಯ ಕಾರ್ಯಕರ್ತರು ಎಷ್ಟೇ ತಿಳಿ ಹೇಳಿದರೂ ಜನರಲ್ಲಿರುವ ಕೊರೊನಾ ಸೋಂಕಿತರ ಬಗೆಗಿನ ಭಾವನೆ ಮಾತ್ರ ಬದಲಾಗುತ್ತಿಲ್ಲ. ಇದಕ್ಕೆ ತೆಲಂಗಾಣದಲ್ಲಿ ಕೊರೊನಾ ಸೋಂಕಿತನ ಮೃತದೇಹವನ್ನ ಕೊಂಡೊಯ್ಯಲು ಪುರಸಭೆಯ ಸಿಬ್ಬಂದಿ ನಿರಾಕರಿಸಿರುವುದು ಜೀವಂತ ಉದಾಹರಣೆ.

ಕೊರೊನಾ ಸೋಂಕಿತನ ಅಂತ್ಯಕ್ರಿಯೆ

ಅಂತ್ಯ ಸಂಸ್ಕಾರ ನೆರವೇರಿಸಿದ ವೈದ್ಯ :

ತೆಲಂಗಾಣದ ಪೆಡ್ಡಪಲ್ಲಿ ಜಿಲ್ಲೆಯ ಸುಲ್ತಾನಾಬಾದ್ ಆಡಳಿತ ಆಸ್ಪತ್ರೆಯಲ್ಲಿ ಕೋವಿಡ್​ನಿಂದಾಗಿ ಮರಣ ಹೊಂದಿದ ವ್ಯಕ್ತಿಯ ಮೃತದೇಹವನ್ನು ಶವಾಗಾರಕ್ಕೆ ಕೊಂಡೊಯ್ಯಲು ಪುರಸಭೆಯ ಸಿಬ್ಬಂದಿ ನಿರಾಕರಿಸಿದ್ದಾರೆ. ಆದರೆ ಇದೇ ಆಸ್ಪತ್ರೆಯ ವೈದ್ಯ ಡಾ. ಶ್ರೀರಾಮ್ ಎಂಬುವವರು ಪಿಪಿಇ ಸೂಟ್‌ನಲ್ಲಿ ಸ್ವತಃ ಟ್ರ್ಯಾಕ್ಟರ್ ಅನ್ನು ಓಡಿಸಿ ಮೃತದೇಹಕ್ಕೆ ಅಂತ್ಯಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.

ಕೊರೊನಾ ಸೋಂಕಿತನ ಅಂತ್ಯಕ್ರಿಯೆ

ವೈದ್ಯೋ ನಾರಾಯಣೋ ಹರಿ ಎಂಬ ಮಾತು ಮತ್ತೊಮ್ಮೆ ನಿಜವಾಗಿದೆ. ವೈದ್ಯರ ಮಾನವೀಯ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Last Updated : Jul 13, 2020, 6:25 PM IST

For All Latest Updates

TAGGED:

ABOUT THE AUTHOR

...view details