ನವದೆಹಲಿ:ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ತಮಿಳುನಾಡಿನಿಂದ ರಾಜ್ಯಸಭೆಗೆ ಆಯ್ಕೆ ಮಾಡಲು ಡಿಎಂಕೆ ಒಪ್ಪದ ಕಾರಣ, ರಾಜಸ್ಥಾನದತ್ತ ಕಾಂಗ್ರೆಸ್ ನಾಯಕರ ದೃಷ್ಟಿ ಹರಿದಿದೆ.
ಮಾಜಿ ಪ್ರಧಾನಿಗೆ ತಮಿಳುನಾಡಿನಲ್ಲಿಲ್ಲ ಸ್ಥಾನ.. ರಾಜ್ಯಸಭೆ ಆಯ್ಕೆಗೆ ರಾಜಸ್ಥಾನದತ್ತ 'ಕೈ' ಕಣ್ಣು.. - undefined
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ರನ್ನು ತಮಿಳುನಾಡು ಮೂಲಕ ರಾಜ್ಯಸಭೆಗೆ ಕಳುಹಿಸುವ ಸಂಬಂಧ ಕಾಂಗ್ರೆಸ್ ಹಾಗೂ ಡಿಎಂಕೆ ಒಮ್ಮತಕ್ಕೆ ಬರಲಾಗಿಲ್ಲ. ಅಸ್ಸೋಂ, ಗುಜರಾತ್, ತಮಿಳುನಾಡು ನಂತರ ಇದೀಗ ರಾಜಸ್ಥಾನದಿಂದ ಅವರನ್ನು ನಾಮನಿರ್ದೇಶನ ಮಾಡಿ ಕಳುಹಿಸಲು ಕಾಂಗ್ರೆಸ್ ಮುಂದಾಗಿದೆ.
![ಮಾಜಿ ಪ್ರಧಾನಿಗೆ ತಮಿಳುನಾಡಿನಲ್ಲಿಲ್ಲ ಸ್ಥಾನ.. ರಾಜ್ಯಸಭೆ ಆಯ್ಕೆಗೆ ರಾಜಸ್ಥಾನದತ್ತ 'ಕೈ' ಕಣ್ಣು..](https://etvbharatimages.akamaized.net/etvbharat/prod-images/768-512-3730454-thumbnail-3x2-gggg.jpg)
ಸಿಂಗ್ರನ್ನು ತಮಿಳುನಾಡು ಮೂಲಕ ರಾಜ್ಯಸಭೆಗೆ ಕಳುಹಿಸುವ ಸಂಬಂಧ ಕಾಂಗ್ರೆಸ್ ಹಾಗೂ ಡಿಎಂಕೆ ಒಮ್ಮತಕ್ಕೆ ಬರಲಾಗಿಲ್ಲ. ಅಸ್ಸೋಂ, ಗುಜರಾತ್, ತಮಿಳುನಾಡು ನಂತರ ಇದೀಗ ರಾಜಸ್ಥಾನದಿಂದ ಅವರನ್ನು ನಾಮನಿರ್ದೇಶನ ಮಾಡಿ ಕಳುಹಿಸಲು ಕಾಂಗ್ರೆಸ್ ಮುಂದಾಗಿದೆ.
ನಿನ್ನೆಯಷ್ಟೆ ಡಿಎಂಕೆ, ತಮಿಳುನಾಡಿನ ಮೂವರು ಅಭ್ಯರ್ಥಿಗಳ ಹೆಸರನ್ನು ರಾಜ್ಯಸಭೆಗಾಗಿ ಘೋಷಣೆ ಮಾಡಿದೆ. ಚುನಾವಣೆ ವೇಳೆ ಡಿಎಂಕೆ ನಾಯಕ ಎಂ ಕೆ ಸ್ಟಾಲಿನ್ ಅವರು, ರಾಹುಲ್ ಪ್ರಧಾನಿಯಾಗಬೇಕೆಂದು ಅಭಿಪ್ರಾಯಪಟ್ಟಾಗ, ಸಿಂಗ್ರನ್ನು ತಮಿಳುನಾಡು ಮೂಲಕ ಮೇಲ್ಮನೆಗೆ ಕಳಿಸಲು ಸಮ್ಮತಿಸಿದ್ದರು. ಆದರೆ, ಚುನಾವಣೆಯಲ್ಲಿ 2ನೇ ಸ್ಥಾನವನ್ನೂ ಸಮರ್ಥವಾಗಿ ಪಡೆಯಲಾಗದ ಪಕ್ಷದೊಂದಿಗೆ ಕೈಜೋಡಿಸುವುದು ಸರಿಯಲ್ಲ ಎಂದು ಸ್ಟಾಲಿನ್ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ರಾಜಸ್ಥಾನದ ರಾಜ್ಯಸಭೆ ಸದಸ್ಯರಾಗಿದ್ದ ಬಿಜೆಪಿ ಮದನ್ ಲಾಲ್ ಶೈನಿ ಅವರು ನಿಧನದಿಂದಾಗಿ ಸ್ಥಾನ ತೆರವಾಗಿದೆ. ಸಿಂಗ್ರನ್ನು ಈ ಮೂಲಕ ಆಯ್ಕೆ ಮಾಡುವ ಪ್ಲಾನ್ ಕಾಂಗ್ರೆಸ್ನದ್ದಾಗಿದೆ.