ಚೆನ್ನೈ:ಅಮೆರಿಕದ ನೂತನ ಉಪಾಧ್ಯಕ್ಷರಾಗಿ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಆಯ್ಕೆಯಾಗಿದ್ದು, ಅವರಿಗೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಇದರ ಮಧ್ಯೆ ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಕಮಲಾ ಹ್ಯಾರಿಸ್ಗೆ ತಮಿಳಿನಲ್ಲೇ ಪತ್ರ ಬರೆದಿದ್ದಾರೆ.
'ವಣಕ್ಕಂ' ಎಂದು ತಮಿಳು ಭಾಷೆಯಲ್ಲಿ ಶುಭಾಶಯ ಕೋರಿರುವ ಡಿಎಂಕೆ ಅಧ್ಯಕ್ಷ ಸ್ಟಾಲಿನ್, ಅವರಿಗೆ ತಮಿಳುನಾಡಿನೊಂದಿಗೆ ಇರುವ ಸಂಬಂಧದ ಬಗ್ಗೆ ಪತ್ರದಲ್ಲಿ ಬರೆದಿದ್ದಾರೆ. ನಿಮ್ಮ ಅಧಿಕಾರವಧಿಯಲ್ಲಿ ಅಮೆರಿಕಕ್ಕೆ ಒಳ್ಳೆಯ ಹೆಸರು ತಂದುಕೊಡಿ ಎಂದಿರುವ ಸ್ಟಾಲಿನ್, ಕಮಲಾ ಹ್ಯಾರಿಸ್ ಅವರ ತಾಯಿ ಅವರ ಮಾತೃ ಭಾಷೆ ತಮಿಳು ಆಗಿರುವ ಕಾರಣ ಈ ಪತ್ರ ಮತ್ತಷ್ಟು ಸಂತೋಷವನ್ನುಂಟು ಮಾಡಲಿದೆ ಎಂದು ತಿಳಿಸಿದ್ದಾರೆ. ಇದರ ಜತೆಗೆ ಕಮಲಾ ಹ್ಯಾರಿಸ್ ಅವರ ಗೆಲುವು ದ್ರಾವಿಡ್ ಚಳಚಳಿಗೆ ಆತ್ಮವಿಶ್ವಾಸ ನೀಡಿದೆ ಎಂದಿದ್ದಾರೆ.