ಕರ್ನಾಟಕ

karnataka

ETV Bharat / bharat

ತಿಹಾರ್​ ಜೈಲಿನ ಒಂದೇ ಸೆಲ್​ನಲ್ಲಿ ಡಿ.ಕೆ.ಶಿವಕುಮಾರ್ - ಪಿ.ಚಿದಂಬರಂ! - ತಿಹಾರ್​ ಜೈಲು

ತಿಹಾರ್​ ಜೈಲು ಸೇರಿರುವ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಮತ್ತು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನ ಒಂದೇ ಸೆಲ್​ನಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ.

ಒಂದೇ ಸೆಲ್​ನಲ್ಲಿ ಡಿ.ಕೆ.ಶಿವಕುಮಾರ್-ಪಿ.ಚಿದಂಬರಂ

By

Published : Sep 19, 2019, 3:24 PM IST

ನವದೆಹಲಿ: ಐಎನ್​ಎಕ್ಸ್​ ಮೀಡಿಯಾ ಹಗರಣದಲ್ಲಿ ತಿಹಾರ್​ ಜೈಲು ಸೇರಿರುವ ಮಾಜಿ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನ ಒಂದೇ ಸೆಲ್​ನಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ.

ಐಎನ್​ಎಕ್ಸ್​ ಮೀಡಿಯಾ ಹಗರಣದಲ್ಲಿ ಸೆ.5 ರಿಂದ ನ್ಯಾಯಾಂಗ ಬಂಧನದಲ್ಲಿರುವ ಪಿ.ಚಿದಂಬರಂ ಅವರನ್ನ ತಿಹಾರ್ ಜೈಲಿನ 7ನೇ ನಂಬರ್​​ನ ಸೆಲ್​ನಲ್ಲಿ ಇರಿಸಲಾಗಿತ್ತು. ಇತ್ತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಡಿ.ಕೆ.ಶಿವಕುಮಾರ್ ಅನಾರೋಗ್ಯ ಕಾರಣದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದರು.ಡಿಕೆಶಿ ಆರೋಗ್ಯದಲ್ಲಿ ಕೊಂಚ ಸುಧಾರಣೆ ಕಂಡು ಬಂದ ಕಾರಣ ಅವರನ್ನೂ ತಿಹಾರ್​ ಜೈಲಿಗೆ ಕರೆದೊಯ್ಯಲಾಗಿದ್ದು, ಪಿ.ಚಿದಂಬರಂ ಅವರನ್ನ ಇರಿಸಲಾಗಿದ್ದ 7ನೇ ಸೆಲ್​ನಲ್ಲಿ ಇರಿಸಲಾಗಿದೆ ಎಂದು ವರದಿಯಾಗಿದೆ.

ವಿಶೇಷ ಎಂದರೆ

ಸೆಲ್​ ನಂಬರ್​ 7ನೇ ಕೊಠಡಿ ಆರ್ಥಿಕ ಅಪರಾಧಿಗಳಿಗಾಗಿಯೇ ಇರುವ ಸೆಲ್​ ಆಗಿದೆ.

ಇಬ್ಬರಿಗೂ ಇಂದು ನಿರ್ಣಾಯಕ ದಿನ:ಇಂದು ವಿಶೇಷ ನ್ಯಾಯಾಲಯದಲ್ಲಿ ಡಿ.ಕೆ.ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಜೈಲಾ? ಬೇಲಾ? ನಿರ್ಧಾರವಾಗಲಿದೆ.

ಇತ್ತ ಪಿ.ಚಿದಂಬರಂ ಅವರ ನ್ಯಾಯಂಗ ಬಂಧನದ ಅವದಿ ಇಂದಿಗೆ ಮುಕ್ತಾಯಗೊಳ್ಳಲಿದ್ದು, ನ್ಯಾಯಾಲಯದ ಮುಂದೆ ಹಾಜರಾಗಲಿದ್ದಾರೆ. ಒಂದು ವೇಳೆ ಇಬ್ಬರಿಗೂ ಜಾಮೀನು ದೊರೆಯದಿದ್ದರೆ ಮತ್ತೆ ತಿಹಾರ್ ಜೈಲು ಪಾಲಾಗುವ ಸಾಧ್ಯತೆ ಇದೆ.

ABOUT THE AUTHOR

...view details