ಕರ್ನಾಟಕ

karnataka

ETV Bharat / bharat

ಡಿಕೆಶಿ ಆರೋಗ್ಯದಲ್ಲಿ ಸುಧಾರಣೆ... ಆಸ್ಪತ್ರೆಯಿಂದ ತಿಹಾರ್​ ಜೈಲಿಗೆ ಟ್ರಬಲ್ ಶೂಟರ್ ಶಿಫ್ಟ್​! - ಆರ್​ಎಂಎಲ್ ಆಸ್ಪತ್ರೆ

ಅನಾರೋಗ್ಯ ಕಾರಣದಿಂದ ನವದೆಹಲಿಯ ಆರ್​ಎಂಎಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನ ಪೊಲೀಸರು ತಿಹಾರ್ ಜೈಲಿಗೆ ಕರೆದೊಯ್ದಿದ್ದಾರೆ.

ಡಿ.ಕೆ.ಶಿವಕುಮಾರ್

By

Published : Sep 19, 2019, 12:56 PM IST

ನವದೆಹಲಿ: ಅನಾರೋಗ್ಯ ಕಾರಣದಿಂದ ಆರ್​ಎಂಎಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಆರೋಗ್ಯ ಕೊಂಚ ಸುಧಾರಿಸಿದ್ದು, ಪೊಲೀಸರು ತಿಹಾರ್​ ಜೈಲಿಗೆ ಕರೆದೊಯ್ದಿದ್ದಾರೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಡಿಕೆಶಿ, 2 ದಿನಗಳಿಂದ ರಕ್ತದೊತ್ತಡದ ಕಾರಣದಿಂದ ಆರ್​ಎಂಎಲ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದರು. ಡಿ.ಕೆ.ಶಿವಕುಮಾರ್​ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ತಿಹಾರ್ ಜೈಲಿಗೆ ಶಿಫ್ಟ್​ ಮಾಡಲಾಗಿದೆ.

ಇನ್ನು ಮಧ್ಯಾಹ್ನ 3:30ಕ್ಕೆ ವಿಶೇಷ ನ್ಯಾಯಾಲಯದಲ್ಲಿ ಡಿ.ಕೆ.ಶಿವಕುಮರ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು ಜೈಲಾ? ಅಥವಾ ಬೇಲಾ? ಎಂದು ನಿರ್ಧಾರ ವಾಗಲಿದೆ.

ABOUT THE AUTHOR

...view details