ಕರ್ನಾಟಕ

karnataka

ETV Bharat / bharat

ಅನರ್ಹ ಶಾಸಕರ ಪ್ರಕರಣ, ಆಡಿಯೋ ಪರಿಗಣಿಸಿದ ಸುಪ್ರೀಂ: ತೀರ್ಪಷ್ಟೇ ಬಾಕಿ - ಆಡಿಯೋ ಸೋರಿಕೆ ಸುಪ್ರೀಂನಲ್ಲಿ ಪ್ರಸ್ತಾಪ

ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್, ಬಿಎಸ್​ವೈ ಆಡಿಯೋವನ್ನು ಸುಪ್ರೀಂಕೋರ್ಟ್​ ಮುಂದಿಟ್ಟಿದ್ದಾರೆ.

ಸುಪ್ರೀಂ

By

Published : Nov 5, 2019, 10:58 AM IST

Updated : Nov 5, 2019, 11:58 AM IST

ನವದೆಹಲಿ:ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರ ಕಳೆದುಕೊಳ್ಳಲು ಪ್ರಮುಖ ಕಾರಣವಾಗಿದ್ದ ಕಾಂಗ್ರೆಸ್​​-ಜೆಡಿಎಸ್​ ಅನರ್ಹ ಶಾಸಕರ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಬಿಎಸ್​ವೈ ಅನರ್ಹರ ಬಗ್ಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋವನ್ನು ಕಾಂಗ್ರೆಸ್ ಸುಪ್ರೀಂಕೋರ್ಟ್​ ಮುಂದಿಟ್ಟಿದೆ.

ಆಡಿಯೋ ವೈರಲ್​ ಆದ ಬಳಿಕ ಕಾಂಗ್ರೆಸ್​​ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿ, ಬಿಎಸ್​ವೈ ಮಾಡಿದ್ದಾರೆ ಎನ್ನಲಾದ ವಿಡಿಯೋ ಸಾಕ್ಷ್ಯವಾಗಿ ಪರಿಗಣಿಸುವಂತೆ ಸುಪ್ರೀಂಗೆ ಅರ್ಜಿ ಸಲ್ಲಿಕೆ ಮಾಡಿತ್ತು. ನಿನ್ನೆ ಅರ್ಜಿ ಸ್ವೀಕರಿಸಿದ್ದ ಸುಪ್ರೀಂಕೋರ್ಟ್ ಇಂದು ಆಡಿಯೋ ಪರಿಗಣಿಸುವುದಾಗಿ ಹೇಳಿ, ಕಲಾಪ ಅಂತ್ಯಗೊಳಿಸಿದೆ. ​​

ಬಿಎಸ್​ವೈ ಮಾತನಾಡಿದ್ದಾರೆ ಎನ್ನಲಾದ ಆಡಿಯೋದಲ್ಲಿ ಅನರ್ಹ ಶಾಸಕರಿಗೆ ಬಿಜೆಪಿ ಭದ್ರತೆ ನೀಡಿತ್ತು ಎನ್ನುವುದು ಸ್ಪಷ್ಟವಾಗಿ ಕೇಳಿಬಂದಿತ್ತು. ಈ ಆಡಿಯೋವನ್ನ ಇಂಗ್ಲಿಷ್​ಗೆ ಭಾಷಾಂತರಿಸಿ, ಕಪಿಲ್​ ಸಿಬಲ್​ ನ್ಯಾ ರಮಣ್ ಪೀಠದಿಂದ ಮುಂದೆ ವಾದ ಮಂಡನೆ ಮಾಡಿದರು. ಈ ವೇಳೆ, ನ್ಯಾ. ರಮಣ್​ ಈ ಆಡಿಯೋವನ್ನು ಪರಿಗಣಿಸುವುದಾಗಿ ಹೇಳಿದರು. ಅಷ್ಟೇ ಅಲ್ಲ, ​​​ ನೀವು ನಮ್ಮ ಗಮನಕ್ಕೆ ತಂದಿದ್ದೀರಿ ಎಂದು ಹೇಳಿ ಕಲಾಪ ಮುಕ್ತಾಯಗೊಳಿಸಿದರು.. ಕಪಿಲ್​ ಸಿಬಲ್​ ವಾದ ಮಂಡನೆ ಸಮಯದಲ್ಲಿ ಮಧ್ಯ ಪ್ರವೇಶಿಸಿದ ನ್ಯಾ.ಖನ್ನಾ ಈ ಎಲ್ಲ ವಿಷಯವನ್ನ ವಾದ- ಪ್ರತಿವಾದದ ವೇಳೆ, ಹೇಳಿದ್ದೀರಿ ಇದನ್ನೆಲ್ಲ ಗಂಭೀರವಾಗಿ ಪರಿಗಣಿಸಿದರೆ ಬಿಎಸ್​ವೈಗೆ ನೋಟಿಸ್​ ನೀಡಬೇಕಾಗುತ್ತದೆ. ತೀರ್ಪು ನೀಡಲು ವಿಳಂಬವಾಗುತ್ತದೆ ಎಂದರು.

ಇವತ್ತು ಕೋರ್ಟ್ ವಾದ - ಪ್ರತಿವಾದ ಆಲಿಸದೇ ಅರ್ಜಿದಾರರ ವಾದ ಆಲಿಸಿ, ಆಡಿಯೋವನ್ನು ಪರಿಗಣಿಸುವುದಾಗಿ ಹೇಳಿ, ಕಲಾಪ ಅಂತ್ಯ ಗೊಳಿಸಿದೆ. ಈಗ ಪ್ರಕರಣದ ತೀರ್ಪಷ್ಟೇ ಹೊರ ಬೀಳಬೇಕಿದೆ. ಹೀಗಾಗಿ ಎಲ್ಲರ ಚಿತ್ತ ಸುಪ್ರೀಂ ತೀರ್ಪಿನತ್ತ ನೆಟ್ಟಿದೆ.

Last Updated : Nov 5, 2019, 11:58 AM IST

ABOUT THE AUTHOR

...view details