ಕರ್ನಾಟಕ

karnataka

ETV Bharat / bharat

ಶುಭ ಸುದ್ದಿ: ಕಳೆದ ಒಂದೇ ದಿನ ದೇಶದಲ್ಲಿ 10,215 ಜನ ಸೋಂಕಿನಿಂದ ಗುಣಮುಖ - ಭಾರತ ಕೊರೊನಾ ಸುದ್ದಿ

ದೇಶದ ಕೊರೊನಾ ಗುಣಮುಖರ ಪ್ರಮಾಣ 52.46ಕ್ಕೆ ಏರಿಕೆಯಾಗಿದೆ. ಇದು ಈವರೆಗಿನ ಅತಿ ಹೆಚ್ಚು ಪ್ರಮಾಣವಾಗಿದ್ದು, ಈವರೆಗೆ ದೇಶದಲ್ಲಿ 1,80,012 ಜನ ಸೋಂಕಿನಿಂದ ಮುಕ್ತರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್​ ಆಗಿದ್ದಾರೆ. ಕೊರೊನಾ ವಿರುದ್ಧದ ಹೊರಾಟದಲ್ಲಿ ಭಾರತ ಯಶಸ್ಸು ಗಳಿಸುತ್ತಿದೆ.

Discharge
ಗುಣಮುಖ

By

Published : Jun 16, 2020, 5:04 PM IST

ನವದೆಹಲಿ: ದೇಶದಲ್ಲಿ ಕೊರೊನಾ ಗುಣಮುಖರ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿದ್ದು, ಕಳೆದ ಒಂದೇ ದಿನ 10,215 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ.

ದೇಶದ ಒಟ್ಟು 3,43,091ಕೊರೊನಾ ಪಪ್ರಕರಣಗಳ ಪೈಕಿ 1,53,178 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ ದೇಶದಲ್ಲಿ 9,900 ಜನ ಸೋಂಕಿಗೆ ಬಲಿಯಾಗಿದ್ದಾರೆ. ಉಳಿದಂತೆ 1,80,012 ಜನ ಸೋಂಕಿನಿಂದ ಮುಕ್ತರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್​ ಆಗಿದ್ದಾರೆ. ಕಳೆದ ಕೆಲ ದಿನಗಳಿಂದಲೂ ದೇಶದ ಸಕ್ರಿಯ ಪ್ರಕರಣಗಳಿಗಿಂತ ಗುಣಮುಖರ ಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿದೆ.

ಕಳೆದ ಒಂದೇ ದಿನ ದೇಶದಲ್ಲಿ 10,215 ಜನ ಸೋಂಕಿನಿಂದ ಗುಣಮುಖರಾಗಿದ್ದು, ಮಹಾರಾಷ್ಟ್ರ ಒಂದೇ ರಾಜ್ಯದಲ್ಲಿ ಕಳೆದ ದಿನ 5,000 ಕ್ಕೂ ಹೆಚ್ಚು ಜನ ಗುಣಮುಖರಾಗಿ ಡಿಸ್ಚಾರ್ಜ್​ ಆಗಿದ್ದಾರೆ.

ಸದ್ಯ ದೇಶದ ಕೊರೊನಾ ಗುಣಮುಖರ ಪ್ರಮಾಣ 52.46ಕ್ಕೆ ಏರಿಕೆಯಾಗಿದೆ. ಇದು ಈವರೆಗಿನ ಅತಿ ಹೆಚ್ಚು ಪ್ರಮಾಣವಾಗಿದ್ದು, ಕೊರೊನಾ ವಿರುದ್ಧದ ಹೊರಾಟದಲ್ಲಿ ಭಾರತ ಯಶಸ್ಸು ಗಳಿಸುತ್ತಿದೆ.

ABOUT THE AUTHOR

...view details