ಕರ್ನಾಟಕ

karnataka

ETV Bharat / bharat

ಡಿಸಿ ಅನುಮತಿಯಿಲ್ಲದೇ ಅಧಿಕಾರಿಗಳು, ಸಿಬ್ಬಂದಿಗೆ ರಜೆ ಇಲ್ಲ: ಬೇರೆ ಜಿಲ್ಲೆಗೂ ಹೋಗುವಂತಿಲ್ಲ! - ಜಿಲ್ಲಾಧಿಕಾರಿ

ಗೌತಮ್ ಬುದ್ಧ ನಗರದಲ್ಲಿ ಇದುವರೆಗೆ ಅತಿ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿದ್ದು, 776 ಸಕ್ರಿಯ ಪ್ರಕರಣಗಳಿವೆ. ಘಾಜಿಯಾಬಾದ್‌ನಲ್ಲಿ 882 ಪ್ರಕರಣಗಳಿದ್ದು, ಎರಡನೇ ಅತಿ ಹೆಚ್ಚು ಪ್ರಕರಣವನ್ನ ಗೌತಮ್ ಬುದ್ಧ ನಗರ ಹೊಂದಿದೆ.

ಕೋವಿಡ್​-19
ಕೋವಿಡ್​-19

By

Published : Jul 1, 2020, 8:33 AM IST

ನೋಯ್ಡಾ (ಯುಪಿ) : ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ಕೋವಿಡ್​-19 ಸಮಯದಲ್ಲಿ ಜಿಲ್ಲಾಧಿಕಾರಿಗಳ ಅನುಮತಿಯಿಲ್ಲದೇ ರಜೆ ತೆಗೆದುಕೊಳ್ಳುವ ಹಾಗಿಲ್ಲ ಎಂದು ಆದೇಶ ನೀಡಲಾಗಿದೆ.

ಗೌತಮ್ ಬುದ್ಧ ನಗರದಲ್ಲಿ ಇದುವರೆಗೆ ರಾಜ್ಯದಲ್ಲೇ ಅತಿ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿದ್ದು, 776 ಸಕ್ರಿಯ ಪ್ರಕರಣಗಳಿವೆ. ಘಾಜಿಯಾಬಾದ್‌ನಲ್ಲಿ 882 ಪ್ರಕರಣಗಳಿದ್ದು, ಎರಡನೇ ಅತಿ ಹೆಚ್ಚು ಪ್ರಕರಣವನ್ನ ಗೌತಮ್ ಬುದ್ಧ ನಗರ ಹೊಂದಿದೆ.

ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಹಿರಿಯ ಅಧಿಕಾರಿಯಿಂದ ಅನುಮತಿ ಪಡೆಯದೇ ರಜೆ ಪಡೆಯುತ್ತಿದ್ದು, ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಹೋಗುತ್ತಿರುವುದನ್ನ ಗಮನಿಸಿದ ಅಲ್ಲಿನ ಆಡಳಿತ ಈ ಆದೇಶವನ್ನು ಹೊರಡಿಸಿದೆ. ಈ ಸಮಯದಲ್ಲಿ ಅವರ ಸೇವೆ ಅಗತ್ಯವಿದೆ. ಆದರೆ, ಅಲ್ಲಿನ ಅಧಿಕಾರಿಗಳು ಸಿಬ್ಬಂದಿ ಅನಗತ್ಯವಾಗಿ ರಜೆಯಲ್ಲಿದ್ದಾರೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಸುಹಾಸ್ ಎಲ್ವೈ ಹೇಳಿದರು.

ಕೋವಿಡ್​-19 ಏಕಾಏಕಿ "ವಿಪತ್ತು" ಎಂದು ಉತ್ತರ ಪ್ರದೇಶ ಸರ್ಕಾರ ಈಗಾಗಲೇ ಘೋಷಿಸಿದೆ. ಈ ಬಗ್ಗೆ ಅವರು ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಮತ್ತೊಮ್ಮೆ ನೆನಪಿಸಿದ್ದಾರೆ. ಈ ಸಾಂಕ್ರಾಮಿಕ ಸಮಯದಲ್ಲಿ ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ಅಧಿಕಾರಿಗಳಿಗೆ ರಜೆ ತೆಗೆದುಕೊಳ್ಳಲು ಅಥವಾ ಜಿಲ್ಲೆಯನ್ನು ಬಿಡಲು ಅವಕಾಶ ನೀಡುವುದಿಲ್ಲ ಎಂದು ರಾಜ್ಯ ಸರ್ಕಾರ ಮಾರ್ಚ್ 22 ರಂದು ನಿರ್ದೇಶನ ನೀಡಿತ್ತು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಸರ್ಕಾರದ ನಿರ್ದೇಶನಗಳು ಮತ್ತು ಕೋವಿಡ್​​-19 ರ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ರಜೆ ಹೋಗಬಾರದು ಮತ್ತು ಜಿಲ್ಲೆಯನ್ನು ತೊರೆಯಬಾರದು ಎಂದು ನಿರ್ದೇಶಿಸಲಾಗಿದೆ ಹೇಳಿದ್ದಾರೆ.

ABOUT THE AUTHOR

...view details