ಕರ್ನಾಟಕ

karnataka

ETV Bharat / bharat

ಕೋವಿಡ್‌-19: ದಿವ್ಯಾಂಗರ ಅಗತ್ಯತೆಗಳನ್ನು ಪೂರೈಸಲಾಗುತ್ತಿದೆಯೇ..?

ವಿಕಲಚೇತನರನ್ನು ತಲುಪಲು ಸರ್ಕಾರ, ಎನ್‌ಜಿಒಗಳು ಮತ್ತು ನಾಗರಿಕ ಸಮಾಜ ವಿಶೇಷ ಪ್ರಯತ್ನ ಮಾಡಬೇಕಾಗಿದೆ. ಕೋವಿಡ್‌ ತಡೆಗಟ್ಟುವಿಕೆ ಮತ್ತು ಆರೈಕೆ ಸಂದೇಶಗಳು ಅಂಗವಿಕಲರನ್ನು ತಲುಪಲು ಸರ್ಕಾರ ಪ್ರಯತ್ನ ಮಾಡಬೇಕಾಗಿದೆ. ಆರೋಗ್ಯ ಸೌಲಭ್ಯಗಳು ಅವರ ಅಗತ್ಯಗಳಿಗೆ ಆದ್ಯತೆ ನೀಡಬೇಕಿದೆ.

disablity and covid 19
ದಿವ್ಯಾಂಗರು

By

Published : Mar 28, 2020, 11:46 AM IST

ಯಾವುದೇ ವಿಕೋಪದ ಸಂದರ್ಭದಲ್ಲಿ ವಿಕಲಚೇತನರನ್ನು ನಾವು ಹೇಗೆ ನಿರ್ಲಕ್ಷಿಸುತ್ತೇವೆ ಅಥವಾ ಅವರ ಕುರಿತು ತಾರತಮ್ಯ ಮಾಡಿದ್ದೇವೆ ಎಂಬುದಕ್ಕೆ ಇತಿಹಾಸದಲ್ಲಿ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ದಿವ್ಯಾಂಗರನ್ನು(ಪಿಡಬ್ಲ್ಯುಡಿ) ವಿಪತ್ತು ಪ್ರತಿಕ್ರಿಯೆ ವ್ಯಾಪ್ತಿಯಿಂದ ಕೈಬಿಡಲಾಗಿದೆ ಅಥವಾ ಕಡೆಗಣಿಸಲಾಗಿದೆ. ಏಕೆಂದರೆ ಅವರ ಬಲವಾದ ಧ್ವನಿ ನಮಗೆ ಕೇಳಿಸುವುದಿಲ್ಲ. ದೈಹಿಕವಾಗಿ ಸದೃಢವಾಗಿರುವ ಜಗತ್ತಿನಲ್ಲಿ ಮೊದಲು ಅವರ ಉಳಿವಿಗಾಗಿ ಹೋರಾಟ ನಡೆಯಲಿದ್ದು, ದುರಂತವೆಂಬಂತೆ ಮಾನವೀಯತೆಯ ಮುಖವು ಕಣ್ಮರೆಯಾಗುತ್ತದೆ. ಆದ್ದರಿಂದ ಕೋವಿಡ್‌-19 ಪ್ರತಿಕ್ರಿಯೆ ಎಲ್ಲರನ್ನೂ ಒಳಗೊಳ್ಳುವ ಅಗತ್ಯವಿದೆ. ಸುಸ್ಥಿರ ಅಭಿವೃದ್ಧಿ ಗುರಿಗಳು ಆರೈಕೆಯ ಸಾರ್ವತ್ರಿಕತೆಗೆ ಒತ್ತು ನೀಡುತ್ತವೆ ಮತ್ತು ಈ ಸಾಧನೆಯ ಮೇಲೆ ದೇಶಗಳನ್ನು ನಿರ್ಣಯಿಸಲಾಗುತ್ತದೆ.

ತಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳಲು ಮತ್ತು ಅಗತ್ಯವಾದ ಆರೈಕೆ ಮತ್ತು ಬೆಂಬಲವನ್ನು ಪಡೆಯಲು ಮತ್ತು ಸೋಂಕಿನ ಅಪಾಯದ ಬಗ್ಗೆ ಮಾಹಿತಿಯನ್ನು ಕಲೆಹಾಕುವ ಕೆಲಸದಲ್ಲಿ ದಿವ್ಯಾಂಗರ ಅನುಭವ ಕಠಿಣವಾಗಿದೆ. ಎಲ್ಲರಿಗೂ ಸಾಮಾನ್ಯ ಸಮಯದಲ್ಲೂ ಬೆಂಗಾವಲು ಅಥವಾ ಆರೈಕೆ ಬೇಕು. ಬಿಕ್ಕಟ್ಟಿನ ಸಮಯದಲ್ಲಂತೂ ಈ ಬೇಡಿಕೆ ದುಪ್ಪಟ್ಟಾಗುತ್ತದೆ. ಕುರುಡರಿಗೆ ಜಾಗ ಹುಡುಕಲು ಅಥವಾ ನಡೆದಾಡಲು ದೈಹಿಕ ಸ್ಪರ್ಶ ಬೇಕಾಗುತ್ತದೆ. ಕಿವುಡರಿಗೆ ರಾಷ್ಟ್ರೀಯ ಮಾಧ್ಯಮಗಳು ಬಿತ್ತರಿಸುವ ಸಂದೇಶಗಳು ಕೇಳಿಸುವುದಿಲ್ಲ. ದಿವ್ಯಾಂಗರಿಗೆ ವಾಶ್‌ ಬೇಸಿನ್‌ ತಲುಪಲು ಮತ್ತು ಪದೆ, ಪದೆ ಕೈ ತೊಳೆಯಲು ಸಾಧ್ಯವಿಲ್ಲ. ಸೆರೆಬ್ರಲ್ ಪಾಲ್ಸಿ ಅಥವಾ ಡೌನ್ ಸಿಂಡ್ರೋಮ್‌ನಂತಹ ಪರಿಸ್ಥಿತಿಗಳನ್ನು ಹೊಂದಿರುವ ಮಕ್ಕಳು ಮತ್ತು ಹದಿಹರೆಯದವರ ಆಹಾರಕ್ಕಾಗಿ ಸಹಾಯ ಮಾಡಬೇಕಾಗುತ್ತದೆ. ಸಂವಹನ ವಿಕಲಾಂಗತೆ ಹೊಂದಿರುವ ಜನರಿಗೆ ತಮ್ಮ ಸಮಸ್ಯೆಗಳನ್ನು ಹೇಗೆ ವ್ಯಕ್ತಪಡಿಸಬೇಕು ಎಂದು ತಿಳಿದಿಲ್ಲ. ಮಾನಸಿಕ ಆರೋಗ್ಯ ಸಮಸ್ಯೆಗಳಿರುವ ಜನರು ಸಂದೇಶಗಳನ್ನು ಗ್ರಹಿಸಲು ಸಾಧ್ಯವಿಲ್ಲ. ಯುರೋಪಿನ ಬಹುತೇಕ ಎಲ್ಲ ಚಾನಲ್‌ಗಳಿಗಿಂತ ಭಿನ್ನವಾಗಿ ಒಂದೇ ಭಾರತೀಯ ಚಾನಲ್ ಸಹ ಸಂಕೇತ ಭಾಷೆಯ ಆಂಕರ್‌ಗಳನ್ನು ಬಳಸುವುದಿಲ್ಲ. ಮುಖ್ಯವಾಹಿನಿಯಲ್ಲಿ ಬಿತ್ತರವಾಗುವ ಸಂದೇಶಗಳು ಇವರನ್ನು ತಲುಪುವುದಿಲ್ಲ.

ಅದೇ ಸಮಯದಲ್ಲಿ ದಿವ್ಯಾಂಗರಲ್ಲಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಪರಿಸ್ಥಿತಿಗಳ ಹೆಚ್ಚಿನ ಅಪಾಯವಿದೆ. ಇವು ಕೋವಿಡ್‌ನಿಂದ ಸಂಭವಿಸುವ ಮರಣದಲ್ಲಿ ಹೆಚ್ಚಿನ ಪಾಲನ್ನು ಪಡೆದಿವೆ. ಆದ್ದರಿಂದ, ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಉಳಿದ ಸಾಮಾನ್ಯ ಜನಸಂಖ್ಯೆಗಿಂತ ಅಂಗವಿಕಲರಿಗೆ ಹೆಚ್ಚಿನ ಬೆಂಬಲ ಬೇಕಾಗುತ್ತದೆ. ಅವರಿಗೆ ಯಾವುದೇ ನಿಯಂತ್ರಣವಿಲ್ಲದಿರುವುದರಿಂದ ಸುತ್ತಲೂ ಏನು ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದು ಅವರು ಸರಿಯಾಗಿ ಊಟ, ತಿಂಡಿ ಮಾಡದಂತೆ ಮಾಡಬಹುದು ಮತ್ತು ಹೆಚ್ಚಿನ ಒತ್ತಡವನ್ನು ಅನುಭವಿಸಬೇಕಾಗಬಹುದು. ದಿವ್ಯಾಂಗತೆ ಹೊಂದಿರುವ ಅನೇಕ ಮಹಿಳೆಯರಿಗೆ ಕುಟುಂಬವಿದೆ ಮತ್ತು ಈ ಬಿಕ್ಕಟ್ಟಿನಲ್ಲಿ ತಮ್ಮ ಮಕ್ಕಳು ಮತ್ತು ಕುಟುಂಬ ಸದಸ್ಯರನ್ನು ಹೇಗೆ ನೋಡಿಕೊಳ್ಳಬಹುದು ಎಂಬುದರ ಬಗ್ಗೆ ಹೆಚ್ಚು ಒತ್ತು ನೀಡುತ್ತಾರೆ. ಭಾರತದಲ್ಲಿ ಸುಮಾರು 150 ದಶಲಕ್ಷ ಜನರರು ಸ್ವಲ್ಪ ಮಟ್ಟಿನ ದಿವ್ಯಾಂಗತೆ ಹೊಂದಿದ್ದಾರೆ. ಸುಮಾರು 25-30 ಮಿಲಿಯನ್ ಜನರು ತೀವ್ರ ಅಂಗವೈಕಲ್ಯವನ್ನು ಹೊಂದಿದ್ದಾರೆ. ಅವರಲ್ಲಿ ಹೆಚ್ಚಿನವರು ಆರೈಕೆದಾರರನ್ನು ಅವಲಂಬಿಸಿದ್ದಾರೆ. ಇದು ಮತ್ತೊಂದು 25-30 ಮಿಲಿಯನ್ ಆರೈಕೆದಾರರನ್ನು ಸೇರಿಸುತ್ತದೆ.

ವಿಕಲಚೇತನರನ್ನು ತಲುಪಲು ಸರ್ಕಾರ, ಎನ್‌ಜಿಒಗಳು ಮತ್ತು ನಾಗರಿಕ ಸಮಾಜ ವಿಶೇಷ ಪ್ರಯತ್ನ ಮಾಡಬೇಕಾಗಿದೆ. ಕೋವಿಡ್‌ ತಡೆಗಟ್ಟುವಿಕೆ ಮತ್ತು ಆರೈಕೆ ಸಂದೇಶಗಳು ಅಂಗವಿಕಲರನ್ನು ತಲುಪಲು ಸರ್ಕಾರ ಪ್ರಯತ್ನ ಮಾಡಬೇಕಾಗಿದೆ. ಆರೋಗ್ಯ ಸೌಲಭ್ಯಗಳು ಅವರ ಅಗತ್ಯಗಳಿಗೆ ಆದ್ಯತೆ ನೀಡಬೇಕಿದೆ.

ಆಸ್ಪತ್ರೆಗಳಲ್ಲಿ ಅವರು ಕಾಯುವ ಸಮಯವನ್ನು ಕಡಿಮೆ ಮಾಡುವುದರಿಂದ ಅವರು ಆಸ್ಪತ್ರೆಗಳಿಗೆ ಭೇಟಿ ನೀಡುವಾಗ ಕೊರೊನಾ ವೈರಸ್ ಅಥವಾ ಶಂಕಿತ ಪ್ರಕರಣಗಳನ್ನು ಹೊಂದಿರುವವರ ಜೊತೆಗಿನ ಸಂಪರ್ಕವನ್ನು ಕಡಿಮೆ ಮಾಡುತ್ತದೆ. ಅವರಿಗೆ ಔಷಧಿ ಅಗತ್ಯಗಳನ್ನು ಒದಗಿಸಬೇಕಾಗಿದೆ. ಆರೋಗ್ಯ ಸಿಬ್ಬಂದಿ ಆಸ್ಪತ್ರೆಗಳ ಬದಲು ಅವರಿಗೆ ಮನೆಯಲ್ಲಿ ಆರೋಗ್ಯ ಸೇವೆಗಳನ್ನು ಒದಗಿಸಬಹುದು. ಇದಕ್ಕಾಗಿ ಮೀಸಲಾದ ಸಹಾಯವಾಣಿಯನ್ನು ಸ್ಥಾಪಿಸಬಹುದು. ಇದರಿಂದ ವೈದ್ಯಕೀಯ ತಂಡವು ಅವರನ್ನು ತಲುಪಬಹುದು. ಸೋಪ್ ಅಥವಾ ಸ್ಯಾನಿಟೈಸರ್ ಮತ್ತು ಟಿಶ್ಯೂ ಸರಬರಾಜನ್ನು ಅವರಿಗೆ ಒದಗಿಸಬೇಕು.

-ಪ್ರೊ.ಜಿ.ವಿ.ಎಸ್.ಮೂರ್ತಿ

ABOUT THE AUTHOR

...view details