ಕರ್ನಾಟಕ

karnataka

ETV Bharat / bharat

ಚುನಾವಣಾ ಹಬ್ಬದಲ್ಲಿ ಇನ್ಮುಂದೆ ನೀವು ಮನೆಯಲ್ಲೇ ಕುಳಿತು ವೋಟ್‌ ಮಾಡಿ.. ಅದು ಹೀಗೆ.. - ಅಂಚೆ ಮತ

ಅಂಗವಿಕಲರು ಹಾಗೂ 80 ವರ್ಷ ಮೇಲ್ಪಟ್ಟ ವೃದ್ಧರು ಮತದಾನ ಕೇಂದ್ರಗಳನ್ನು ತಲುಪಲು ಕಷ್ಟ ಸಾಧ್ಯ. ವೋಟ್‌ ಮಾಡ್ಬೇಕು ಅನ್ನೋ ಬಯಕೆಯಿದ್ರೂ ಅವರಿಗದು ಸಾಧ್ಯವಾಗೋದಿಲ್ಲ. ಇದು ಈ ಎರಡು ವರ್ಗದ ಜನರಿಗೆ ಸುಲಭವಾಗಿ ಮತ ಚಲಾಯಿಸಲು ಅನುವು ಮಾಡಿಕೊಡಲು ಅಂಚೆ ಮತಪತ್ರದ ಮೂಲಕ ತಮ್ಮ ಹಕ್ಕು ಚಲಾಯಿಸಬಹುದು. ಇದರಿಂದಾಗಿ ಮತದಾನ ಪ್ರಮಾಣ ಹೆಚ್ಚಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

By

Published : Oct 26, 2019, 8:00 PM IST

ನವದೆಹಲಿ:ಅಂಗವಿಕಲರು ಮತ್ತು 80 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಇನ್ಮುಂದೆ ಅಂಚೆ ಮತಪತ್ರದ ಮೂಲಕ ತಮ್ಮ ಮತ ಚಲಾಯಿಸಬಹುದು. ಇದು ಮತದಾನ ಪ್ರಮಾಣವನ್ನು ಹೆಚ್ಚಿಸಲು ನೆರವಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಪ್ರಸ್ತುತ ಅಂಚೆ ಮತಪತ್ರದ ಅವಕಾಶವನ್ನು ಸಶಸ್ತ್ರ ಪಡೆಗಳಿಗೆ ಮತ್ತು ನಿಯೋಜಿತ ಚುನಾವಣಾ ಅಧಿಕಾರಿಗಳಿಗೆ ಮಾತ್ರ ನೀಡಲಾಗುತ್ತಿದೆ. ಚುನಾವಣಾ ಆಯೋಗದ ಶಿಫಾರಸ್ಸಿನ ಮೇರೆಗೆ, ಕಾನೂನು ಮತ್ತು ನ್ಯಾಯ ಸಚಿವಾಲಯವು ಚುನಾವಣಾ ಅಧಿನಿಯಮ 1961ರ ಅಕ್ಟೋಬರ್ 22ರ ಕಾಯ್ದೆಗೆ ತಿದ್ದುಪಡಿ ಮಾಡಿದೆ. ಹಿರಿಯ ನಾಗರಿಕರು ಮತ್ತು ವಿಕಲಚೇತನರು ಮತದಾನದಲ್ಲಿ ಗೈರಾಗುತ್ತಿದ್ದರು. ಇದನ್ನು ತಪ್ಪಿಸಲು ಈ ನಡೆ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಿದೆ.

ಈ ಎರಡೂ ವಿಭಾಗಗಳಲ್ಲಿ ಮತದಾನ ಕೇಂದ್ರಗಳನ್ನು ತಲುಪಲು ಸಾಧ್ಯವಾಗದ ಜನರಿದ್ದಾರೆ. ಮತ ಚಲಾಯಿಸಲು ಮತಗಟ್ಟೆಗೆ ತಲುಪಲು ಅವರಿಗೆ ಸಾಧ್ಯವಾಗುತ್ತಿಲ್ಲ. ಇದು ಈ ಎರಡು ವರ್ಗದ ಜನರಿಗೆ ಸುಲಭವಾಗಿ ಮತ ಚಲಾಯಿಸಲು ಅನುವು ಮಾಡಿಕೊಡಲಿದೆ. ಇದರಿಂದಾಗಿ ಮತದಾನ ಪ್ರಮಾಣ ಹೆಚ್ಚಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ABOUT THE AUTHOR

...view details