ನವದೆಹಲಿ:ಮಾರಕ ಕೊರೊನಾ ಸೋಂಕು ಪ್ರಾಣಿಗಳಿಂದ ಮನುಷ್ಯನಿಗೆ ಹರಡಿದೆ ಎಂದು ಹೇಳಲಾಗಿದೆ. ಈಗಾಗಲೇ ಪ್ರಪಂಚದಾದ್ಯಂತ 3 ಸಾವಿರಕ್ಕೂ ಹೆಚ್ಚು ಜನರನ್ನ ಬಲಿ ಪಡೆದಿರುವ ಈ ಸೋಂಕು, ನೋಟುಗಳಿಂದಲೂ ಹರಡುತ್ತದೆ ಎಂಬ ಆಘಾತಕಾರಿ ಅಂಶವನ್ನು ವಿಶ್ವ ಆರೋಗ್ಯ ಸಂಸ್ಥೆ(WHO) ಬಹಿರಂಗ ಪಡಿಸಿದೆ.
ಒಬ್ಬರ ಕೈಯಿಂದ ಒಬ್ಬರಿಗೆ ವರ್ಗಾವಣೆಯಾಗುವ ನೋಟಿನ ಮೇಲೂ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಿರುತ್ತವೆ. ಹೀಗಾಗಿ ಹಣವನ್ನು ಮುಟ್ಟಿದ ನಂತರ ಕೈ ತೊಳೆದುಕೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡಿದೆ.
ಈ ಬಗ್ಗೆ ಪ್ರಮುಖ ಸುದ್ದಿ ಸಂಸ್ಥೆ ಜೊತೆ ಮಾತನಾಡಿರುವ ವಿಶ್ವ ಆರೋಗ್ಯ ಸಂಸ್ಥೆಯ ವಕ್ತಾರರು, 'ನೂರಾರು ಜನರಿಂದ ವರ್ಗಾವಣೆಯಾಗುವ ನೋಟುಗಳ ಮೇಲೆ ಧೂಳು ಅಂಟಿರುತ್ತದೆ. ಬ್ಯಾಕ್ಟೀರಿಯಾ ಮತ್ತು ವೈರಾಣುಗಳು ಕೂಡ ಇರುತ್ತವೆ. ಹೀಗಾಗಿ ಹಣವನ್ನು ಮುಟ್ಟಿದ ನಂತರ ಮುಖ ಮುಟ್ಟಿಕೊಳ್ಳದೆ, ಕೈತೊಳೆದುಕೊಳ್ಳಬೇಕು' ಎಂದಿದ್ದಾರೆ.