ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಗುಜರಾತ್ನಂತಹ ರಾಜ್ಯಗಳು ಕಾರ್ಮಿಕ ಕಾನೂನುಗಳ ಮಿತಿಯನ್ನು ಅಮಾನತುಗೊಳಿಸುವುದಾಗಿ ಘೋಷಿಸಿವೆ. ಈ "ಸುಧಾರಣೆಗಳು" ಕಾರ್ಖಾನೆಗಳು, ಸಂಸ್ಥೆಗಳು ಮತ್ತು ವ್ಯವಹಾರಗಳನ್ನು ಕಾರ್ಮಿಕ ಕಾಯ್ದೆಯ ಪ್ರಮುಖ ನಿಯಮಗಳಿಂದ ವಿನಾಯಿತಿ ನೀಡುವ ಮೂಲಕ ಹೂಡಿಕೆ ಆಕರ್ಷಿಸಲು ಪ್ರಯತ್ನಿಸುತ್ತವೆ. ಕಾರ್ಮಿಕರಿಗೆ ಕನಿಷ್ಠ ವೇತನ, ಕೆಲಸದಿಂದ ಬಿಡುಗಡೆಗೊಳಿಸುವುದು, ಔದ್ಯೋಗಿಕ ಸುರಕ್ಷತೆ ಮತ್ತು ಕೆಲಸದ ಪರಿಸ್ಥಿತಿಗಳ ಬಗ್ಗೆ ಅನೇಕ ರಕ್ಷಣೆಗಳನ್ನು ನೀಡುವುದರಿಂದ ಕಾರ್ಖಾನೆಗಳಿಗೆ ವಿನಾಯಿತಿ ಸಿಗುತ್ತದೆ. ರಾಜಸ್ಥಾನ, ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಂತಹ ರಾಜ್ಯಗಳು ಕೆಲಸದ ವೇಳೆಯನ್ನು ವಿಸ್ತರಿಸಿ ಕಾರ್ಮಿಕ ಕಾಯ್ದೆಯ ನಿಯಮಗಳನ್ನು ಕಡಿಮೆ ಪ್ರಮಾಣದಲ್ಲಿ ದುರ್ಬಲಗೊಳಿಸುವುದಾಗಿ ಘೋಷಿಸಿವೆ. ಹೆಚ್ಚಿನ ರಾಜ್ಯಗಳು ಇದನ್ನು ಅನುಸರಿಸಲು ಮುಂದಾಗಿವೆ.
ಕಾರ್ಮಿಕ ಕಾಯ್ದೆಯ ನಿಯಮಗಳಲ್ಲಿ ಅತ್ಯಂತ ಅಮೂಲಾಗ್ರ ಬದಲಾವಣೆಗಳನ್ನು ಉತ್ತರ ಪ್ರದೇಶ ಸರಕಾರ ಜಾರಿಗೆ ತಂದಿದೆ. ಮುಖ್ಯಮುಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರವು ಕೆಲವು ಕಾರ್ಮಿಕ ಕಾನೂನುಗಳಿಗೆ 2020 ರಲ್ಲಿ ಸುಗ್ರೀವಾಜ್ಞೆ ತರುವ ಮೂಲಕ ತಾತ್ಕಾಲಿಕ ವಿನಾಯಿತಿಯನ್ನು ನೀಡಿತು, ಈ ಸುಗ್ರೀವಾಜ್ಞೆ ಮೂರು ವರ್ಷಗಳ ಅವಧಿಗೆ ರಾಜ್ಯವನ್ನು ಹದ್ದುಬಸ್ತಿನಲ್ಲಿಡುವ ಎಲ್ಲ ಕಾರ್ಮಿಕ ಕಾಯ್ದೆಯ ನಿಯಮಗಳನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಲಾಗಿದೆ. ಇತರ ಕಾರ್ಮಿಕ ಕಾಯ್ದೆಗಳಲ್ಲಿ ಉತ್ತರಪ್ರದೇಶ ಸರಕಾರ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಾಯ್ದೆ, 1996, ಕಾರ್ಮಿಕರ ಪರಿಹಾರ ಕಾಯ್ದೆ, 1923, ಜೀತ ಕಾರ್ಮಿಕ ಪದ್ಧತಿ (ನಿರ್ಮೂಲನ) ಕಾಯ್ದೆ, 1976, ಮತ್ತು ವೇತನ ಪಾವತಿ ಕಾಯ್ದೆ, 1936 ರ ನಿಯಮ 5 ಮಾತ್ರ ಉಳಿಸಿಕೊಂಡಿದೆ. ಆದರೆ, ಯೋಗಿ ಸರಕಾರ ನಿರ್ಣಾಯಕ ಕಾರ್ಮಿಕ ಕಾಯ್ದೆಗಳಾದ ಕನಿಷ್ಠ ವೇತನ ಕಾಯ್ದೆ, 1948, ಕೈಗಾರಿಕಾ ವಿವಾದ ಕಾಯ್ದೆ, 1947, ಕಾರ್ಖಾನೆಗಳ ಕಾಯ್ದೆ, 1948 ಮತ್ತು ಕೆಲಸದ ಪರಿಸ್ಥಿತಿಗಳನ್ನು ನಿಯಂತ್ರಿಸುವ ಸುಮಾರು 30 ಇತರ ಕಾನೂನುಗಳನ್ನು ಸಂಕ್ಷಿಪ್ತವಾಗಿ ನಿಷ್ಕ್ರಿಯಗೊಳಿಸಿದೆ.
ಉತ್ತರಪ್ರದೇಶ ಸರಕಾರದ ನಿರ್ಧಾರದ ನಂತರ, ಮಧ್ಯಪ್ರದೇಶ ಮತ್ತು ಗುಜರಾತ್ನಂತಹ ರಾಜ್ಯಗಳು ಕೂಡ ಕಾರ್ಮಿಕ ಕಾನೂನುಗಳ ಪ್ರಮುಖ ನಿಯಮಗಳನ್ನು ಅಮಾನತ್ತಿನಲ್ಲಿಟ್ಟಿವೆ. ಈ ನಿರ್ಧಾರಗಳು ವ್ಯವಹಾರಸ್ಥರ ಇಚ್ಚೆಯಂತೆ ಕೆಲಸಗಾರರನ್ನು ನೇಮಕಮಾಡಿಗೊಳ್ಳಲು ಮತ್ತು ಕೆಲಸದಿಂದ ಕಿತ್ತೊಗೆಯಲು ಅವಕಾಶ ಮಾಡಿಕೊಡುತ್ತವೆ, ಪ್ರಸ್ತುತ ಜಾರಿಯಲ್ಲಿರುವ ಸುರಕ್ಷತೆ ಮತ್ತು ಆರೋಗ್ಯ ಮಾನದಂಡಗಳನ್ನು ಅನುಸರಿಸುವುದರಿಂದ ಹೊಸ ಸಂಸ್ಥೆಗಳಿಗೆ ವಿನಾಯಿತಿ ನೀಡುತ್ತದೆ ಮತ್ತು ಸಂಸ್ಥೆಗಳಿಗೆ ಕಾರ್ಮಿಕರ ಕೆಲಸದ ಸಮಯವನ್ನು ವಿಸ್ತರಿಸಲು ಅನುವು ಮಾಡಿಕೊಡುತ್ತದೆ. ರಾಜಸ್ಥಾನ, ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಂತಹ ರಾಜ್ಯಗಳು ಕೂಡ ಕೆಲಸದ ವೇಳೆಯನ್ನು 8 ರಿಂದ 12 ಗಂಟೆಗಳವರೆಗೆ ವಿಸ್ತರಿಸುವ ಮೂಲಕ ಕಾರ್ಮಿಕ ಕಾಯ್ದೆಯ ನಿಯಮಗಳನ್ನು ಸಡಿಲಗೊಳಿಸಿವೆ., ಈ ರಾಜ್ಯಗಳಲ್ಲಿನ ಉದ್ಯೋಗದಾತರು ಹೆಚ್ಚು ಅವಧಿಗೆ ದುಡಿಯುವ ನೌಕರರಿಗೆ ದುಪ್ಪಟ್ಟು ವೇತವನ್ನು ಪಾವತಿಸಬೇಕಾಗುತ್ತದೆ.
ಕಾರ್ಮಿಕ ಕಾಯ್ದೆಯ ನಿಯಮಗಳನ್ನು ದುರ್ಬಲಗೊಳಿಸುವಿಕೆ, ವಿಶೇಷವಾಗಿ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ ಕಾಯ್ದೆಯ ಸಂಪೂರ್ಣ ನಿಷ್ಕ್ರಿಯಗೊಳಿಸುವಿಕೆಯು ಕಾರ್ಮಿಕ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ವಿರೋಧಪಕ್ಷಗಳ ಸಿಟ್ಟಿಗೆ ಕಾರಣವಾಗಿದೆ. ಭಾರತೀಯ ಕಾರ್ಮಿಕ ಸಂಘಗಳ ಕೇಂದ್ರವು (ಸಿಐಟಿಯು) ಇದನ್ನು "ದೇಶಕ್ಕಾಗಿ ಸಂಪತ್ತನ್ನು ಸೃಷ್ಟಿಸುತ್ತಿರುವ ದುಡಿಯುವ ಕೈ ಗಳ ಮೇಲೆ ಗುಲಾಮಗಿರಿಯ ಸಂಕೋಲೆಗಳನ್ನು ಹೇರುವ ಅನಾಗರಿಕ ಕ್ರಮ" ಎಂದು ಟೀಕಿಸಿದೆ. ಕರೋನಾ ವೈರಸ್ ಬಿಕ್ಕಟ್ಟು "ಮಾನವ ಹಕ್ಕುಗಳನ್ನು ಹತ್ತಿಕ್ಕಲು, ಅಸುರಕ್ಷಿತ ಕೆಲಸದ ಸ್ಥಳಗಳಿಗೆ ಅನುಮತಿ ನೀಡಲು, ಕಾರ್ಮಿಕರ ಶೋಷಣೆಗೆ ಮತ್ತು ಅವರ ಧ್ವನಿಯನ್ನು ನಿಗ್ರಹಿಸಲು ಕಾರಣವಾಗಬಾರದು " ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಮತ್ತು ಬಿಜೆಪಿಯ ಅಂಗಸಂಸ್ಥೆಯಾಗಿರುವ ಭಾರತೀಯ ಮಜ್ದೂರ್ ಸಂಘ ಕೂಡ ಈ ನಿರ್ಧಾರಗಳನ್ನು ಕಟುವಾಗಿ ಟೀಕಿಸಿದೆ.
ಕಾರ್ಮಿಕ ಕಾಯ್ದೆಯ ನಿಯಮಗಳನ್ನು ದುರ್ಬಲಗೊಳಿಸಿರುವ ಈ ರಾಜ್ಯಗಳ ನಿರ್ಧಾರಗಳು ಗಂಭೀರ ಸಾಂವಿಧಾನಿಕ ಮತ್ತು ಕಾನೂನು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಕಾರ್ಮಿಕರ ಪಟ್ಟಿ III- ಸಂವಿಧಾನದ ಏಳನೇ ಷಡ್ಯೊಲ್ ನ ಕಂಕ್ ರಂಟ್ ಪಟ್ಟಿಯ ಅಡಿಯಲ್ಲಿ ಬರುತ್ತದೆ. ಆದ್ದರಿಂದ, ಕೇಂದ್ರ ಮತ್ತು ರಾಜ್ಯಗಳು ಈ ವಿಷಯದ ಬಗ್ಗೆ ಕಾಯ್ದೆಗಳನ್ನುರೂಪಿಸಬಹುದಾಗಿದೆ. ಕಾರ್ಮಿಕರ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಪ್ರಸ್ತುತ ಸುಮಾರು 44 ಕೇಂದ್ರ ಶಾಸನಗಳು ಮತ್ತು 100 ಕ್ಕೂ ಹೆಚ್ಚು ರಾಜ್ಯ ಶಾಸನಗಗಳಿವೆ. ರಾಜ್ಯ ಶಾಸಕಾಂಗಗಳು ಕೇಂದ್ರ ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿಗಳನ್ನು ಸಹ ಜಾರಿಗೆ ತರಬಹುದು. ಆದಾಗ್ಯೂ, ಭಾರತೀಯ ಸಂವಿಧಾನದ 254 (2) ನೇ ಪರಿಚ್ಛೇದ ಅನ್ವಯ, ರಾಜ್ಯವು ಜಾರಿಗೆ ತಂದಿರುವ ಕಾಯ್ದೆಯ ನಿಬಂಧನೆಗಳು ಕೇಂದ್ರದ ಕಾನೂನಿಗೆ ಭಿನ್ನವಾಗಿದ್ದರೆ, ಅದಕ್ಕೆ ರಾಷ್ಟ್ರಪತಿಗಳ ಒಪ್ಪಿಗೆ ಪಡೆಯುವುದು ಕಡ್ಡಾಯವಾಗಿರುವತ್ತದೆ. ಅಗತ್ಯವಿರುತ್ತದೆ. ರಾಜ್ಯ ವಿಧಾನಸಭೆ ಅಧಿವೇಶನದಲ್ಲಿ ಇಲ್ಲದಿದ್ದಾಗ ತುರ್ತು ಅಗತ್ಯವಿರುವ ವಿಷಯಗಳ ಬಗ್ಗೆ ಸಂವಿಧಾನದ 213 ನೇ ವಿಧಿ ಅನ್ವಯ ಸುಗ್ರೀವಾಜ್ಞೆಗಳನ್ನು ಹೊರಡಿಸುವ ಮೂಲಕ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಕೇಂದ್ರ ಸರಕಾರದ ಕಾರ್ಮಿಕ ಕಾಯ್ದೆಯ ನಿಯಮಗಳನ್ನು ನಿಷ್ಕ್ರಿಯೆಗೊಳಿಸಿದೆ.