ಕರ್ನಾಟಕ

karnataka

ETV Bharat / bharat

'ಜನ ಮೋದಿ.. ಮೋದಿ.. ಅಂದಷ್ಟೂ ಅವರಿಗೆ ನಿದ್ದೆ ಬರೋದಿಲ್ಲ': ದೀದಿ ಕುಟುಕಿದ ಮೋದಿ - ಪಶ್ಚಿಮ ಬಂಗಾಳ

ಪಶ್ಚಿಮಬಂಗಾಳದ ಕೂಚ್​ಬೆಹರ್​ನಲ್ಲಿ ಪ್ರಚಾರ ನಡೆಸಿದ ಪ್ರಧಾನಿ ಮೋದಿ, ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದರು.

ದೀದಿ ವಿರುದ್ಧ ಮೋದಿ ವಾಗ್ದಾಳಿ

By

Published : Apr 7, 2019, 4:07 PM IST

ಕೂಚ್​ ಬೆಹರ್​ (ಪಶ್ಚಿಮ ಬಂಗಾಳ): ಸಿಎಂ ಮಮತಾ ಬ್ಯಾನರ್ಜಿಗೆ ಸ್ಪೀಡ್​ ಬ್ರೇಕರ್​ ಎಂದು ಕುಟುಕಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಜನರು ಮೋದಿ.. ಮೋದಿ.. ಎಂದು ಕೂಗಿದಷ್ಟು ದೀದಿ ನಿದ್ದೆ ಮಾಡುವುದಿಲ್ಲ ಎಂದು ಕಾಲೆಳೆದಿದ್ದಾರೆ.

ಪಶ್ಚಿಮಬಂಗಾಳದ ಕೂಚ್​ಬೆಹರ್​ನಲ್ಲಿ ಪ್ರಚಾರ ನಡೆಸುತ್ತಿರುವ ಅವರು, ದೀದಿ ಬಿಡಿ-ಬಿಡಿ ಗುಂಪಿಗೆ ಬೆಂಬಲ ಸೂಚಿಸುತ್ತಿದ್ದಾರೆ. ದೇಶದಲ್ಲಿ ಇಬ್ಬರು ಪ್ರಧಾನಮಂತ್ರಿಗಳನ್ನು ನೀಡಲು ಹೊರಟಿದ್ದಾರೆ. ದೇಶಕ್ಕೆ ಹಾಗೂ ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ ಇರಬೇಕೆಂಬುದು ಅವರ ಅಭಿಪ್ರಾಯ. ಇಂತಹವರನ್ನು ನೀವು ಬೆಂಬಲಿಸುತ್ತೀರಾ? ಎಂದು ಜನರನ್ನು ಪ್ರಶ್ನೆ ಮಾಡಿದರು.

ದೀದಿ ವಿರುದ್ಧ ಮೋದಿ ವಾಗ್ದಾಳಿ

ಶಾರದಾ ಮಾತೆಯನ್ನು ಎಲ್ಲೆಡೆ ಗೌರವಿಸುತ್ತಾರೆ. ಆದರೆ, ಬಂಗಾಳದಲ್ಲಿ ಆಕೆ ಹೆಸರಿನಲ್ಲಿ ಚಿಟ್​ ಫಂಡ್​ ಹಗರಣ ನಡೆದಿದೆ. ನಾರದಾ, ಶಾರದಾ ಹಾಗೂ ರೋಸ್​ ಕಣಿವೆ ಹಗರಣಗಳಿಂದ ಅನ್ಯಾಯಕ್ಕೊಳಗಾದವರಿಗೆ ಖಂಡಿತಾ ನ್ಯಾಯ ಕೊಡಿಸ್ತೀನಿ ಎಂದು ಹೇಳಿದರು.

ದೀದಿ ಮಕ್ಕಳಂತೆ ನಾಟಕವಾಡ್ತಾರೆ. ಹೀಗಾದರೆ ಚುನಾವಣೆಯಲ್ಲಿ ಗೆಲ್ಲೋದು ಕಷ್ಟ. ಸಭೆಯಲ್ಲಿ ಜನರ ಸೇರಿರುವುದನ್ನು ನೋಡಿದರೆ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಆಡಳಿತ ಅಂತ್ಯವಾಗೋದು ಪಕ್ಕಾ ಎಂದರು.

ABOUT THE AUTHOR

...view details