ಪಿಥೋರ್ಗಢ(ಉತ್ತರಾಖಂಡ): ಭಾರಿ ಮಳೆಯಿಂದಾಗಿ ಪಿಥೋರ್ಗಢ ಜಿಲ್ಲೆಯ ಧಾರ್ಚುಲಾದಲ್ಲಿ ಸಾಮಾನ್ಯ ಜೀವನ ಸಂಪೂರ್ಣವಾಗಿ ಹಳಿ ತಪ್ಪಿದೆ.
ಭಾರಿ ಮಳೆಗೆ ಹಳಿ ತಪ್ಪಿದ ಜನಜೀವನ : ಧಾರ್ಚುಲಾದಲ್ಲಿ ಜನಜೀವನ ಅಸ್ತವ್ಯಸ್ತ - ಧಾರ್ಚುಲಾ - ತವಾಘಾಟ್ ರಾಷ್ಟ್ರೀಯ ಹೆದ್ದಾರಿ
ಚೀನಾ ಗಡಿಯನ್ನು ಸಂಪರ್ಕಿಸುವ ಧಾರ್ಚುಲಾ - ತವಾಘಾಟ್ ರಾಷ್ಟ್ರೀಯ ಹೆದ್ದಾರಿ ಕೊಚ್ಚಿಹೋಗಿದ್ದು, ನದಿಯಂತಾಗಿ ಪರಿವರ್ತನೆ ಆಗಿದೆ.

ಧಾರ್ಚುಲಾದಲ್ಲಿ ಜನಜೀವನ ಅಸ್ತವ್ಯಸ್ತ
ಚೀನಾ ಗಡಿಯನ್ನು ಸಂಪರ್ಕಿಸುವ ಧಾರ್ಚುಲಾ - ತವಾಘಾಟ್ ರಾಷ್ಟ್ರೀಯ ಹೆದ್ದಾರಿ ಕೊಚ್ಚಿಹೋಗಿದ್ದು, ನದಿಯಂತಾಗಿ ಪರಿವರ್ತನೆ ಆಗಿದೆ. ಭಾರಿ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿರುವುದರಿಂದ ಚೀನಾಗಡಿ ಉದ್ದಕ್ಕೂ ಹಲವು ಗ್ರಾಮಗಳು ಸಂಪರ್ಕ ಇಲ್ಲದಂತಾಗಿ ಸಂಕಷ್ಟಕ್ಕೀಡಾಗಿವೆ.
10 ಸಾವಿರ ಜನರ ದೈನಂದಿನ ಅವಶ್ಯಕತೆಗಳನ್ನ ಪೂರೈಸಿಕೊಳ್ಳುವುದು ಕಷ್ಟವಾಗಿದೆ. ಇನ್ನು ಹಿಮ್ಕೋಲಾ ಸೇತುವೆ ಉಕ್ಕಿ ಹರಿಯುವುದರಿಂದ ಕಾಂಚೋತಿ ನಾರಾಯಣ್ ಆಶ್ರಮ ಮೋಟಾರು ಮಾರ್ಗವನ್ನು ಮುಚ್ಚಲಾಗಿದೆ. ಇದರಿಂದಾಗಿ ಹಿಮ್ಕೋಲಾ ಗ್ರಾಮಸ್ಥರು ಬೇರೊಂದು ಸೇತುವೆ ನಿರ್ಮಿಸಿಕೊಂಡಿದ್ದಾರೆ.