ಮುಂಬೈ(ಮಹಾರಾಷ್ಟ್ರ): ಮುಂಬೈನ ಅತಿದೊಡ್ಡ ಕೊಳೆಗೇರಿ ಪ್ರದೇಶವಾದ ಧಾರಾವಿಯಲ್ಲಿ ಭಾನುವಾರ 94 ಹೊಸ ಕೋವಿಡ್-19 ಪ್ರಕರಣಗಳು ಮತ್ತು ಎರಡು ಸಾವುಗಳು ವರದಿಯಾಗಿವೆ.
ಧಾರಾವಿಯಲ್ಲಿ 94 ಹೊಸ ಕೋವಿಡ್-19 ಪ್ರಕರಣಗಳು, ಮತ್ತೆ 2 ಸಾವು - ಧಾರವಿ ಕೊಳೆಗೇರಿ
ಮುಂಬೈನ ಅತಿ ದೊಡ್ಡ ಕೊಳೆಗೇರಿ ಧಾರಾವಿಯಲ್ಲಿ ಭಾನುವಾರ 94 ಹೊಸ ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ.
ಮುಂಬೈನ ಅತಿದೊಡ್ಡ ಕೊಳೆಗೇರಿ ಧಾರವಿಯಲ್ಲಿ 94 ಹೊಸ ಕೋವಿಡ್-19 ಪ್ರಕರಣಗಳು ಮತ್ತು 2 ಸಾವುಗಳು ವರದಿ
ಸೋಂಕಿತರ ಸಂಖ್ಯೆ 590ಕ್ಕೆ ಮತ್ತು ಸಾವಿನ ಸಂಖ್ಯೆ 20ಕ್ಕೆ ಏರಿದೆ ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್(ಬಿಎಂಸಿ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತದ ಅತಿದೊಡ್ಡ ಕೊಳೆಗೇರಿ ಎಂದೇ ಪರಿಗಣಿಸಬಹುದಾದ ಧಾರಾವಿಯಲ್ಲಿ ಜನಸಾಂದ್ರತೆಯಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟಸಾಧ್ಯವಾಗಿದೆ. ಇಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆ ಬಿಎಂಸಿ ಮತ್ತು ಮಹಾರಾಷ್ಟ್ರ ಸರ್ಕಾರಕ್ಕೆ ಕಠಿಣ ಸವಾಲನ್ನೇ ತಂದೊಡ್ಡಿದೆ.