ಮುಂಬೈ: ಮಂಗಳವಾರ ಮುಂಬೈನ ಧಾರಾವಿ ಸ್ಲಮ್ನಲ್ಲಿ 26 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟು 1,353 ಕೊರೊನಾ ಪ್ರಕರಣಗಳು ಸ್ಲಮ್ನಲ್ಲೇ ಪತ್ತೆಯಾಗಿವೆ ಎಂದು ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಹೇಳಿದೆ.
ಮುಂಬೈನ ಧಾರಾವಿ ಸ್ಲಮ್ನಲ್ಲಿ 26 ಹೊಸ ಕೊರೊನಾ ಪ್ರಕರಣಗಳು ಪತ್ತೆ - ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಶನ್
ಮಂಗಳವಾರ ಧಾರಾವಿ ಸ್ಲಮ್ನಲ್ಲಿ 26 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಕಳೆದ 24 ಗಂಟೆಗಳಲ್ಲಿ ಯಾರು ಕೂಡ ಕೊರೊನಾದಿಂದ ಸಾವನ್ನಪ್ಪಿಲ್ಲ ಎಂದು ತಿಳಿದು ಬಂದಿದೆ.
ಕೊರೊನಾ
ಕಳೆದ 24 ಗಂಟೆಗಳಲ್ಲಿ ಯಾರೂ ಕೂಡ ಕೊರೊನಾದಿಂದ ಸಾವನ್ನಪ್ಪಿಲ್ಲ. ಇದೂವರೆಗೂ ಒಟ್ಟು 56 ಸಾವು - ನೋವುಗಳು ಸಂಭವಿಸಿವೆ ಎಂದು ತಿಳಿದುಬಂದಿದೆ.
ಮಟುಂಗಾ ಲೇಬರ್ ಕ್ಯಾಂಪ್ನಿಂದ ಹೆಚ್ಚು ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದು ಹೆಚ್ಚು ಜನನಿಬಿಡ ಕೊಳೆಗೇರಿ ಕಾಲೋನಿಯಾಗಿದ್ದು, ಹೆಚ್ಚು ಹಾನಿಗೊಳಗಾದ ಪ್ರದೇಶವಾಗಿದೆ.