ಪಣಜಿ (ಗೋವಾ): ಗಂಭೀರವಾಗಿ ಅನಾರೋಗ್ಯಕ್ಕೆ ಒಳಗಾಗಿರುವ ಕೋವಿಡ್-19 ರೋಗಿಗಳಲ್ಲಿ ಪ್ಲಾಸ್ಮಾ ಚಿಕಿತ್ಸೆಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಜಿಸಿಐ) ಅನುಮೋದನೆ ನೀಡಿದೆ ಎಂದು ಆರೋಗ್ಯ ಸಚಿವ ವಿಶ್ವಜಿತ್ ಪಿ ರಾಣೆ ಹೇಳಿದ್ದಾರೆ.
ರಕ್ತದ ಪ್ಲಾಸ್ಮಾ ಹೊರತೆಗೆಯಲು ಅಪೆರೆಸಿಸ್ ಯಂತ್ರಕ್ಕೆ ಡಿಜಿಸಿಐ ಅನುಮೋದನೆ - ರಕ್ತ ಪ್ಲಾಸ್ಮಾ
ಗೋವಾದಲ್ಲಿ ಗಂಭೀರ ಅನಾರೋಗ್ಯದ ಕೋವಿಡ್-19 ರೋಗಿಗಳಿಗೆ ಪ್ಲಾಸ್ಮಾ ಚಿಕಿತ್ಸೆಗೆ, ರಕ್ತದ ಪ್ಲಾಸ್ಮಾ ಹೊರತೆಗೆಯಲು ಅಪೆರೆಸಿಸ್ ಯಂತ್ರಕ್ಕೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮೋದನೆ ನೀಡಿದೆ.
vishwajith rane
"ರಕ್ತ ಪ್ಲಾಸ್ಮಾ ಹೊರತೆಗೆಯಲು ಅಪೆರೆಸಿಸ್ ಯಂತ್ರಕ್ಕೆ ಡಿಜಿಸಿಐ ಅನುಮತಿಯೊಂದಿಗೆ, ಗಂಭೀರ ಅನಾರೋಗ್ಯದ ಕೋವಿಡ್ ರೋಗಿಗಳಿಗೆ ಗೋವಾ ತನ್ನ ಪ್ಲಾಸ್ಮಾ ಚಿಕಿತ್ಸೆಯಲ್ಲಿ ಹೊಸ ಪ್ರಗತಿ ಸಾಧಿಸಿದೆ" ಎಂದು ರಾಣೆ ಟ್ವೀಟ್ ಮಾಡಿದ್ದಾರೆ.
"ಈ ಮಹತ್ವದ ಬೆಳವಣಿಗೆಯೊಂದಿಗೆ, ವೈರಸ್ ನಿಭಾಯಿಸಲು ನಾವು ಮುಂದೆ ಸಾಗುತ್ತಿದ್ದೇವೆ" ಎಂದು ಅವರು ಹೇಳಿದರು. ಗೋವಾದಲ್ಲಿ ಈವರೆಗೆ 6,816 ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದು, 1,884 ಸಕ್ರಿಯ ಪ್ರಕರಣಗಳಿವೆ. 4,876 ಜನ ಗುಣಮುಖರಾಗಿದ್ದು, 56 ಸೋಂಕಿತರು ಮೃತಪಟ್ಟಿದ್ದಾರೆ.