ನವದೆಹಲಿ: ಸುರಕ್ಷತಾ ನಿಯಮಗಳ ಉಲ್ಲಂಘನೆಗಾಗಿ ಏರ್ ಏಷ್ಯಾ ಇಂಡಿಯಾದ ಇಬ್ಬರು ಉನ್ನತ ಅಧಿಕಾರಿಗಳಾದ ಕ್ಯಾಪ್ಟನ್ ಮನೀಶ್ ಉಪ್ಪಲ್ ಮತ್ತು ಕ್ಯಾಪ್ಟನ್ ಮುಖೇಶ್ ನೀಮಾ ಅವರನ್ನು 3 ತಿಂಗಳ ಅವಧಿಗೆ ಅಮಾನತುಗೊಳಿಸಲಾಗಿದೆ.
ಸುರಕ್ಷತಾ ನಿಯಮಗಳ ಉಲ್ಲಂಘನೆ: ಏರ್ ಏಷ್ಯಾದ ಇಬ್ಬರು ಅಧಿಕಾರಿಗಳು ಅಮಾನತು
ಸುರಕ್ಷತಾ ನಿಯಮಗಳ ಉಲ್ಲಂಘನೆಗಾಗಿ ಏರ್ಏಷ್ಯಾ ಇಂಡಿಯಾದ ಇಬ್ಬರು ಉನ್ನತಾಧಿಕಾರಿಗಳನ್ನು ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ಅಮಾನತುಗೊಳಿಸಿದೆ ಎಂದು ತಿಳಿದುಬಂದಿದೆ.
airasia
ವಿಮಾನ ಕಾರ್ಯಾಚರಣೆಯ ಮುಖ್ಯಸ್ಥ ಕ್ಯಾಪ್ಟನ್ ಮನೀಶ್ ಉಪ್ಪಲ್ ಮತ್ತು ವಾಯು ಸುರಕ್ಷತೆಯ ಮುಖ್ಯಸ್ಥ ಕ್ಯಾಪ್ಟನ್ ಮುಖೇಶ್ ನೀಮಾ ಅವರಿಗೆ ಜೂನ್ 28ರಂದು ಶೋಕಾಸ್ ನೋಟಿಸ್ ನೀಡಲಾಗಿತ್ತು.
ಈ ವಿಚಾರವಾಗಿ ಏರ್ಏಷ್ಯಾ ಇಂಡಿಯಾ ವಕ್ತಾರರು ಪ್ರತಿಕ್ರಿಯೆ ನೀಡಿಲ್ಲ.