ನವದೆಹಲಿ :ಇಂಡಿಗೊ ಮತ್ತು ಗೋಏರ್ ಸಂಸ್ಥೆಗಳಿಗೆ ತಮ್ಮ ಎಲ್ಲ 60 ಎ-320 ನಿಯೋ ವಿಮಾನಗಳ ಪ್ರ್ಯಾಟ್ ಮತ್ತು ವಿಟ್ನಿ (ಪಿಡಬ್ಲ್ಯೂ) ಇಂಜಿನ್ಗಳನ್ನು ಮಾರ್ಪಡಿಸಲು ಆಗಸ್ಟ್ 31 ರವರೆಗೆ ಗಡುವು ವಿಸ್ತರಿಸಲಾಗಿದೆ ಎಂದು ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ತಿಳಿಸಿದ್ದಾರೆ.
ಇಂಡಿಗೊ, ಗೋ ಏರ್ ವಿಮಾನಗಳ ಇಂಜಿನ್ ಬದಲಾವಣೆ: ಗಡುವು ವಿಸ್ತರಿಸಿದ ಡಿಜಿಸಿಎ - ಇಂಡಿಗೊ, ಗೋಏರ್ ವಿಮಾನಗಳ ಇಂಜಿನ್ ಬದಲಾವಣೆ ಗಡುವು ವಿಸ್ತರಣೆ
ಕೊರೊನಾ ಲಾಕ್ ಡೌನ್ ಹಿನ್ನೆಲೆ ಕಚ್ಚಾವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾದ್ದರಿಂದ ಇಂಡಿಗೊ ಮತ್ತು ಗೋಏರ್ ಸಂಸ್ಥೆಗಳ ಎ-320 ನಿಯೋ ವಿಮಾನಗಳ ಪ್ರ್ಯಾಟ್ ಮತ್ತು ವಿಟ್ನಿ (ಪಿಡಬ್ಲ್ಯೂ) ಇಂಜಿನ್ಗಳ ಬದಲಾವಣೆ ಗಡುವು ವಿಸ್ತರಿಸಿ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ಆದೇಶಿಸಿದೆ.

ಇಂಡಿಗೊ, ಗೋಏರ್ ವಿಮಾನಗಳ ಇಂಜಿನ್ ಬದಲಾವಣೆ ಗಡುವು ವಿಸ್ತರಿಸಿದ ಡಿಜಿಸಿಎ
ಈ ಬಗ್ಗೆ ಮಾತನಾಡಿದ ಅವರು , ನಾವು ಎರಡು ವಿಮಾನಯಾನ ಸಂಸ್ಥೆಗಳಿಗೆ ಎರಡು ದಿನಗಳ ಹಿಂದೆ ಕರೆ ಮಾಡಿ ಸೂಚನೆ ನೀಡಿದ್ದೇವೆ. ಕೊರೊನಾ ಲಾಕ್ ಡೌನ್ನಿಂದಾಗಿ ಕಚ್ಚಾ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ 60 ಇಂಜಿನ್ಗಳನ್ನು ಒಟ್ಟಿಗೆ ಬದಲಾಯಿಸಲು ಸಾಧ್ಯವಾಗಿಲ್ಲ. ಹೀಗಾಗಿ, ಆಗಸ್ಟ್ 31ರವರೆಗೆ ಮೂರು ತಿಂಗಳ ಕಾಲ ಗಡುವು ವಿಸ್ತರಿಸಿದ್ದೇವೆ. ಅಲ್ಲಿಯವರೆಗೆ ಇಂಜಿನ್ ಬದಲಾಯಿಸಿದ ವಿಮಾನಗಳನ್ನು ಮಾತ್ರ ಹಾರಾಟ ನಡೆಸಲು ಸೂಚಿಸಲಾಗಿದೆ ಎಂದರು.
ಇಂಡಿಗೊ ಮತ್ತು ಗೋಏರ್ನ ಎ 320 ನಿಯೋ ವಿಮಾನಗಳು 2016 ರಿಂದ ಪ್ರ್ಯಾಟ್ ಮತ್ತು ವಿಟ್ನಿ (ಪಿಡಬ್ಲ್ಯೂ) ಇಂಜಿನ್ಗಳ ಸಮಸ್ಯೆ ಎದುರಿಸುತ್ತಿದೆ.