ಕರ್ನಾಟಕ

karnataka

ETV Bharat / bharat

ಎಲ್​ಒಸಿಯ ನಾಲ್ಕು ದಿನದ ಭೇಟಿ ಅಂತ್ಯ: ಬಿಎಸ್​ಎಫ್ ಕಾರ್ಯಕ್ಕೆ ರಾಕೇಶ್ ಅಸ್ತಾನಾ ಮೆಚ್ಚುಗೆ - ಬಿಎಸ್​ಎಫ್

ಜಮ್ಮು-ಕಾಶ್ಮೀರದ ಪಾಕ್ ಗಡಿಯ ಹಲವು ಪ್ರದೇಶಗಳಿಗೆ ಗಡಿ ಭದ್ರತಾ ಪಡೆಯ ಮುಖ್ಯಸ್ಥ ರಾಕೇಶ್ ಅಸ್ತಾನಾ ಭೇಟಿ ಅಂತ್ಯಗೊಂಡಿದ್ದು, ಬಿಎಸ್​ಎಫ್​ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

BSF
ಗಡಿ ಭದ್ರತಾ ಪಡೆ

By

Published : Sep 8, 2020, 1:15 PM IST

ಜಮ್ಮು: ಗಡಿ ಭದ್ರತಾ ಪಡೆಯ ಮುಖ್ಯಸ್ಥ ರಾಕೇಶ್ ಅಸ್ತಾನಾ ಇಂಡೋ- ಪಾಕ್​ ಗಡಿಯಲ್ಲಿರುವ ಕೆಲವು ಪ್ರದೇಶಗಳ ನಾಲ್ಕು ದಿನಗಳ ಪ್ರವಾಸವನ್ನು ಮುಕ್ತಾಯಗೊಳಿಸಿದ್ದಾರೆ.

ಸೆಪ್ಟೆಂಬರ್ 4ರಂದು ಜಮ್ಮು-ಸಾಂಬಾ ಮತ್ತು ಪೂಂಚ್-ರಜೌರಿ ವಲಯಗಳಲ್ಲಿನ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಸೇರಿದಂತೆ ಬಿಎಸ್‌ಎಫ್‌ನ ಕಾರ್ಯಾಚರಣೆಯ ಪ್ರದೇಶಕ್ಕೆ (ಎಒಆರ್) ರಾಕೇಶ್ ಅಸ್ತಾನಾ ಭೇಟಿ ನೀಡಿದ್ದರು. ಇವರ ಜೊತೆಗೆ ಪಶ್ಚಿಮ ಕಮಾಂಡ್​ನ ಹೆಚ್ಚುವರಿ ಡಿಜಿ ಮತ್ತು ಬಿಎಸ್​ಎಫ್​ನ ಐಜಿ ಮುಂತಾದವರು ಸಾಥ್ ನೀಡಿದ್ದರು.

ಭೇಟಿಯ ವೇಳೆ ಗಡಿ ಪ್ರದೇಶಗಳಲ್ಲಿನ ಸವಾಲುಗಳು ಹಾಗೂ ಅಲ್ಲಿನ ಪರಿಸ್ಥಿತಿಯ ಪರಿಶೀಲನೆ ನಡೆಸಿದರು. ಯೋಧರೊಂದಿಗೆ ಸಂವಾದದಲ್ಲಿ ಪಾಲ್ಗೊಂಡ ಅವರು, ಗಡಿಯಲ್ಲಿ ಯೋಧರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.

ಇದರ ಜೊತೆಗೆ ಎಲ್ಲಾ ವೇಳೆಯಲ್ಲೂ ಎಚ್ಚರದಿಂದಿರಲು ಸೂಚನೆ ನೀಡಿದ ಅವರು, ಬಿಎಸ್​ಎಫ್​ ಶಿಸ್ತುಬದ್ಧ ಪಡೆಯಾಗಿದ್ದು, ಇತ್ತೀಚಿನ ಸಾಹಸ ಕಾರ್ಯಗಳು ಬಿಎಸ್​ಎಫ್​ನ ದೇಶ ಪ್ರೇಮವನ್ನು ಬಿಂಬಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಅದರೊಂದಿಗೆ ಬಿಎಸ್​ಎಫ್​ನ ಯೋಧರ ಕಲ್ಯಾಣಕ್ಕೆ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ.

ABOUT THE AUTHOR

...view details