ಕರ್ನಾಟಕ

karnataka

ETV Bharat / bharat

ಕೇವಲ 80 ಗಂಟೆ! ಭಾರತೀಯ ರಾಜಕೀಯ ಇತಿಹಾಸದಲ್ಲೇ ಫಡ್ನವೀಸ್​ ವಿಭಿನ್ನ ದಾಖಲೆ - ಭಾರತೀಯ ರಾಜಕೀಯ ಇತಿಹಾಸ.ಅತಿ ಕಡಿಮೆ ಅವಧಿಗೆ ಮುಖ್ಯಮಂತ್ರಿ

ಕಳೆದ ನಾಲ್ಕು ದಿನಗಳ ಹಿಂದೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ದೇವೇಂದ್ರ ಫಡ್ನವೀಸ್​ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದ್ರ ಜೊತೆಗೆ ಒಂದು ದಾಖಲೆಯನ್ನೂ ನಿರ್ಮಿಸಿದ್ದಾರೆ.

Devendra Fadnavis
ದೇವೇಂದ್ರ ಫಡ್ನವೀಸ್​

By

Published : Nov 26, 2019, 7:46 PM IST

ಮುಂಬೈ:ಕಳೆದ ನಾಲ್ಕು ದಿನಗಳ ಹಿಂದೆ ಕ್ಷಿಪ್ರ​ ರಾಜಕೀಯ ಬೆಳವಣಿಗೆಯಲ್ಲಿ ಸಿಎಂ ಆಗಿ ದೇವೇಂದ್ರ ಫಡ್ನವೀಸ್​ ಪ್ರಮಾಣ ವಚನ ಸ್ವೀಕರಿಸಿದ್ದರು. ಆದ್ರೆ ಸುಪ್ರೀಂಕೋರ್ಟ್​ ಬುಧವಾರ ಸಂಜೆ 5 ಗಂಟೆಯೊಳಗೆ ಬಹುಮತ ಸಾಬೀತು ಮಾಡುವಂತೆ ಸೂಚಿಸಿದ್ದರಿಂದ ಸೋಲು ಗ್ಯಾರಂಟಿ ಅನ್ನೋದನ್ನು ಮನಗಂಡು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಈ ಮೂಲಕ ಒಂದು ರೆಕಾರ್ಡ್‌ ಕೂಡಾ ಮಾಡಿದ್ದಾರೆ.

ಈ ಹಿಂದಿನ ಅವಧಿಯಲ್ಲಿ ಸಂಪೂರ್ಣ 5 ವರ್ಷಗಳ ಕಾಲ ಸಿಎಂ ಆಗಿದ್ದ ಫಡ್ನವೀಸ್​ ಇದೀಗ ಅತೀ ಕಡಿಮೆ ಅವಧಿಗೆ ಸಿಎಂ ಆಗಿ ಸುದ್ದಿ ಮಾಡಿದ್ದಾರೆ. ಮಹಾರಾಷ್ಟ್ರದ ರಾಜಕೀಯ ಇತಿಹಾಸದಲ್ಲೇ ಫಡ್ನವೀಸ್​ ಕೇವಲ 80 ಗಂಟೆಗಳ ಕಾಲ (ನಾಲ್ಕು ದಿನ) ಮುಖ್ಯಮಂತ್ರಿಯಾಗಿ ಅಧಿಕಾರದ ಜವಾಬ್ದಾರಿ ನಿರ್ವಹಿಸಿದ್ದಾರೆ.

1974 ರಿಂದಲೂ ಭಾರತೀಯ ರಾಜಕೀಯ ಇತಿಹಾಸದಲ್ಲಿ ಅತೀ ಕಡಿಮೆ ಅವಧಿಗೆ ಸಿಎಂ ಆಗಿರುವ 3ನೇ ಮುಖ್ಯಮಂತ್ರಿಯಾಗಿದ್ದು ಹಾಗು ಮಹಾರಾಷ್ಟ್ರದ ಪ್ರಥಮ ಸಿಎಂ ಕೂಡಾ ಎಂಬ ದಾಖಲೆಯೂ ಇವರ ಪಾಲಾಗಿದೆ. ಈ ಹಿಂದೆ ಉತ್ತರಪ್ರದೇಶದ ಜಗದಾಂಬಿಕಾ ಪಾಲ್​ (44ಗಂಟೆ) ಹಾಗೂ ಕರ್ನಾಟಕದ ಬಿ.ಎಸ್.​​ ಯಡಿಯೂರಪ್ಪ (55ಗಂಟೆ) ಈ ದಾಖಲೆ ನಿರ್ಮಿಸಿದ್ದು 3 ದಿನಗಳ ಕಾಲ ಸಿಎಂ ಆಗಿದ್ದರು.

ABOUT THE AUTHOR

...view details