ಕರ್ನಾಟಕ

karnataka

ETV Bharat / bharat

ಸಾರ್ವಜನಿಕ​ ಆಸ್ತಿಗೆ ಹಾನಿ ಮಾಡಿದ್ರೆ ಗುಂಡು ಹಾರಿಸುತ್ತೇವೆ.. ಸಿಎಎ ವಿರೋಧಿಗಳಿಗೆ ಬಿಜೆಪಿ ಅಧ್ಯಕ್ಷರ ಎಚ್ಚರಿಕೆ - ದಿಲೀಪ್ ಘೋಷ್

ನೀವು ಇಲ್ಲಿಗೆ ಬರುತ್ತೀರಾ, ನಮ್ಮ ಆಹಾರವನ್ನು ತಿನ್ನುತ್ತೀರಾ, ಇಲ್ಲಿಯೇ ಇರುತ್ತೀರಾ ಮತ್ತು ನಮ್ಮವರ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡುತ್ತೀರಿ. ಇದು ನಿಮ್ಮ ಜಮೀನ್ದಾರಿಕೆನಾ? ನಾವು ನಿಮ್ಮನ್ನು ಲಾಠಿಗಳಿಂದ ಹೊಡೆದಿದ್ದೇವೆ. ನಿಮ್ಮನ್ನು ಜೈಲಿಗೆ ಹಾಕುತ್ತೇವೆ. ಹೀಗೆ ಮಾಡಿದರೇ ಗುಂಡು ಹಾರಿಸುತ್ತೇವೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

CAA
ಸಿಎಎ

By

Published : Jan 13, 2020, 7:35 AM IST

ಕೋಲ್ಕತ್ತಾ: ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಅವರು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಪ್ರತಿಭಟನೆ ನಡೆಸುವವರ ವಿರುದ್ಧ ಗುಡುಗಿದ್ದಾರೆ.

ನೀವು ಇಲ್ಲಿಗೆ ಬರುತ್ತೀರಾ, ನಮ್ಮ ಆಹಾರವನ್ನು ತಿನ್ನುತ್ತೀರಾ, ಇಲ್ಲಿಯೇ ಇರುತ್ತೀರಾ ಮತ್ತು ನಮ್ಮವರ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡುತ್ತೀರಿ. ಇದು ನಿಮ್ಮ ಜಮೀನ್ದಾರಿಕೆನಾ? ನಾವು ನಿಮ್ಮನ್ನು ಲಾಠಿಗಳಿಂದ ಹೊಡೆದಿದ್ದೇವೆ. ನಿಮ್ಮನ್ನು ಜೈಲಿಗೆ ಹಾಕುತ್ತೇವೆ. ಹೀಗೆ ಮಾಡಿದರೇ ಗುಂಡು ಹಾರಿಸುತ್ತೇವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಪಶ್ಚಿಮ ಬಂಗಾಳದ (ಮಮತಾ ಬ್ಯಾನರ್ಜಿ) ಪೊಲೀಸರು ಸಾರ್ವಜನಿಕರ ಆಸ್ತಿ-ಪಾಸ್ತಿ ಹಾನಿ ಮಾಡಿದವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಏಕೆಂದರೇ ಅವರೆಲ್ಲ ಮಮತಾ ಬ್ಯಾನರ್ಜಿ ಮತದಾರರು. ನಮ್ಮ ಪಕ್ಷಗಳ ಆಡಳಿತ ಇರುವ ರಾಜ್ಯಗಳಾದ ಕರ್ನಾಟಕ, ಉತ್ತರ ಪ್ರದೇಶ ಮತ್ತು ಅಸ್ಸೊಂನಲ್ಲಿ ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

ABOUT THE AUTHOR

...view details