ಕೋಯಿಕ್ಕೋಡ್(ಕೇರಳ): ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಕೇರಳದ ಸಾಂಪ್ರದಾಯಿಕ ಸುಗ್ಗಿ ಹಬ್ಬ ಓಣಂ ಸಂಭ್ರಮ ಕಳೆಗುಂದಿದೆ. ಆದರೆ ವಿದ್ಯಾರ್ಥಿಗಳು ಮಾತ್ರ ತಮ್ಮ ವಿಶೇಷ ಆವಿಷ್ಕಾರದಿಂದ ಓಣಂ ಆಚರಣೆಯನ್ನು ಭರ್ಜರಿಯಾಗಿ ನಡೆಸಿದ್ದಾರೆ.
ಆನ್ಲೈನ್ ಶಿಕ್ಷಣ ಕೇವಲ ಓದಿಗಾಗಿ ಮಾತ್ರ ಬಳಕೆ ಮಾಡದೆ ಹಬ್ಬ ಆಚರಣೆಯಲ್ಲೂ ಬಳಕೆ ಮಾಡಿಕೊಂಡಿರುವುದು ವಿಶೇಷ. ಈ ವಿಚಾರದ ಕುರಿತು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಚರ್ಚೆ ನಡೆಸಿ, ಸಮನ್ವಯತೆಯಿಂದ ಹಬ್ಬ ಆಚರಿಸಲು ಮುಂದಾಗಿದ್ದಾರೆ. ಇನ್ನು ಈ ವೇಳೆ ಪೌರಾಣಿಕ ಅಸುರರಾಜನಾದ ಮಹಾಬಲಿ ಮತ್ತು ವಿಷ್ಣು ಅವತಾರವಾಗಿರುವ ವಾಮನನ ವೇಷವನ್ನು ವಿದ್ಯಾರ್ಥಿಗಳು ತೊಟ್ಟಿದ್ದರು. ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು, ನೃತ್ಯ, ಹಾಡು, ಅಡುಗೆ ಸ್ಪರ್ಧೆ, ಚರ್ಚಾ ಸ್ಪರ್ಧೆ ಹೀಗೆ ಅನೇಕ ಕಾರ್ಯಕ್ರಮಗಳು ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸಮ್ಮುಖದಲ್ಲಿ ಆನ್ಲೈನ್ ಮೂಲಕ ಪ್ರದರ್ಶನಗೊಂಡವು.