ಕರ್ನಾಟಕ

karnataka

ETV Bharat / bharat

ಕೋವಿಡ್​-19 ಬಿಕ್ಕಟ್ಟಿನ ನಡುವೆಯೂ ಬಿಹಾರದಲ್ಲಿ 2015 ಕ್ಕಿಂತ ಹೆಚ್ಚಿನ ಮತದಾನ! - ಬಿಹಾರ ಎಲೆಕ್ಷನ್​ ಸುದ್ದಿ

ಬಿಹಾರ ವಿಧಾನಸಭಾ ಚುನಾವಣೆ ಕೋವಿಡ್​-19 ಸಾಂಕ್ರಾಮಿಕ ರೋಗದ ಮಧ್ಯೆಯೂ ನಡೆದ ದೇಶದ ಮೊದಲ ಪ್ರಮುಖ ಚುನಾವಣೆಯಾಗಿದೆ. ಈ ಚುನಾವಣೆಯಲ್ಲಿ ಶೇ. 57.05 ರಷ್ಟು ಮತದಾನ ದಾಖಲಾಗಿದ್ದರೆ, 2015 ರಲ್ಲಿ ಅದು ಶೇ 56.66 ರಷ್ಟಿತ್ತು. ಮಹಿಳಾ ಮತದಾರರ ಮತದಾನ ಶೇ 59.69 ರಷ್ಟಿತ್ತು. ಇದೇ ವೇಳೆ, ಪುರುಷ ಮತದಾರರ ಮತದಾನ ಪ್ರಮಾಣ 54.68 ರಷ್ಟಿತ್ತು.

voter-turnout-higher-than-2015
2015 ಕ್ಕಿಂತ ಹೆಚ್ಚಿನ ಮತದಾನ

By

Published : Nov 9, 2020, 10:35 AM IST

ಪಾಟ್ನಾ:ಬಿಹಾರ ರಾಜ್ಯ ಕೋವಿಡ್​​-19 ಸಾಂಕ್ರಾಮಿಕ ರೋಗದ ಹೊರತಾಗಿಯೂ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಶೇಕಡಾ 57.05 ರಷ್ಟು ಮತದಾನ ದಾಖಲಿಸಿದೆ. ಇದು 2015 ಕ್ಕೆ ಹೋಲಿಸಿದರೆ ಸ್ವಲ್ಪ ಹೆಚ್ಚಾಗಿದೆ.

2015ರಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು ಮತದಾನ ಪ್ರಮಾಣ ಶೇ 56.66 ರಷ್ಟಿತ್ತು ಎಂದು ಚುನಾವಣಾ ಆಯೋಗದ ಅಂಕಿ ಅಂಶಗಳು ತಿಳಿಸಿವೆ. ಇನ್ನು ಈ ವರ್ಷ ಬಿಹಾರ ಚುನಾವಣೆಯಲ್ಲಿ ಮಹಿಳಾ ಮತದಾನ ಪ್ರಮಾಣ ಶೇ 59.69 ರಷ್ಟಿದ್ದು, ಪುರುಷ ಮತದಾರರಿಂದ ಶೇ. 54.68 ರಷ್ಟು ಮತದಾನವಾಗಿದೆ. 2015 ಕ್ಕೆ ಹೋಲಿಸಿದರೆ ಈ ಬಾರಿ ಮತದಾನದ ಪ್ರಮಾಣ ಹೆಚ್ಚಿದೆ.

ಮೊದಲ ಹಂತದಲ್ಲಿ ಶೇ. 55.68 ಮತ್ತು ಎರಡನೇ ಹಂತದಲ್ಲಿ ಶೇ. 55.70 ಮತದಾನವಾಗಿದ್ದು, ಇದಕ್ಕೆ ಹೋಲಿಸಿದರೆ ನವೆಂಬರ್ 7 ರಂದು ನಡೆದ 3ನೇ ಹಂತದ ಚುನಾವಣೆಯಲ್ಲಿ ಪ್ರತಿಶತ 60 ರಷ್ಟು ಮತದಾನವಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಶೇ 57.33 ರಷ್ಟು ಮತದಾನವಾಗಿದೆ. ಇನ್ನು ಮೂರನೇ ಹಂತದಲ್ಲಿ ಚುನಾವಣೆ ನಡೆದ ಯಾವುದೇ ಕ್ಷೇತ್ರದಲ್ಲಿ ಮರು ಮತದಾನಕ್ಕೆ ಆದೇಶ ಹೊರಡಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ABOUT THE AUTHOR

...view details