ಬೆರ್ಹಂಪುರ (ಒಡಿಶಾ):ಗೆಲುವು-ಸೋಲಿನ ಲೆಕ್ಕಾಚಾರದ ಮೇಲೆ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿರ್ಧಾರ ಮಾಡುತ್ತಾರೆ. ಆದರೆ ಇಲ್ಲೊಬ್ಬ ಮಹಾಶಯ ಈವರೆಗೆ ಚುನಾವಣೆಗಳಲ್ಲಿ ಸೋತರೂ, ಈ ಬಾರಿಯ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ.
ಒಡಿಶಾದ ಬೆರ್ಹಂಪುರ ನಿವಾಸಿ ಸ್ಯಾಂಬಾಬು ಸುಬುಧಿ ಈವರೆಗೆ 30 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ. ಆದರೆ ಒಂದರಲ್ಲೂ ಗೆಲವು ಕಂಡಿಲ್ಲ. ಆದರೂ ತಮ್ಮ ಮೊದಲಿನ ಉತ್ಸಾಹ ಬಿಡದೆ, ಮತ್ತೆ ಈ ಬಾರಿಯ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಬೆರ್ಹಂಪುರ ಹಾಗೂ ಅಸ್ಕ ಕ್ಷೇತ್ರಗಳಿಗೆ ಅವರು ನಾಮಪತ್ರ ಸಲ್ಲಿಸಿದ್ದಾರೆ.
30 ಚುನಾವಣೆಗಳಲ್ಲಿ ಸೋತರೂ ಚುನಾವಣೆಗಿಳಿದ ಸ್ಯಾಂಬಾಬು ಸುಬುಧಿ ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಸುಬುಧಿ, 1962ರಿಂದ ಆರಂಭಿಸಿ ಈವರೆಗೆ ಲೋಕಸಭೆ ಹಾಗೂ ವಿಧಾನಸಭೆ ಸೇರಿ ಬೇರೆ ಬೇರೆ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದೇನೆ. ಹಲವು ಪಕ್ಷಗಳಿಂದ ಅಫರ್ ಬಂದರೂ ತೆರಳದೆ, ಸ್ವತಂತ್ರ ಅಭ್ಯರ್ಥಿಯಾಗಿಯೇ ಸ್ಪರ್ಧಿಸುತ್ತಾ ಬಂದಿದ್ದೇನೆ ಎಂದಿದ್ದಾರೆ.
ತಾನು ಪಿ.ವಿ. ನರಸಿಂಹ ರಾವ್ ಹಾಗೂ ಬಿಜು ಪಟ್ನಾಯಕ್ ವಿರುದ್ಧವೂ ಸ್ಪರ್ಧಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಈಗಿ ರಾಜಕೀಯ ಜಂಜಾಟ ಹಾಗೂ ಹಣದ ಹೊಳೆ ಹರಿಸುತ್ತಿರುವ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ.