ಕರ್ನಾಟಕ

karnataka

ETV Bharat / bharat

ಪಾಕ್ ಗುಂಡಿನ ದಾಳಿಗೂ ಜಗ್ಗದೆ ರಣಬೀರ್​ ಕಾಲುವೆ ಕಾರ್ಯ ಪೂರ್ತಿಗೊಳಿಸಿದ ಬಿಎಸ್​ಎಫ್​ 'ರಣಧೀರರು' - ಗುಂಡಿನ ದಾಳಿಯ ಭೀತಿ

ಪಾಕಿಸ್ತಾನದ ರೇಂಜರ್‌ಗಳ ಗುಂಡಿನ ದಾಳಿಯ ಭೀತಿಯ ನಡುವೆಯೂ ರಣಬೀರ್ ಕಾಲುವೆಯ ಕಾರ್ಯವನ್ನು ಗಡಿ ಭದ್ರತಾ ಪಡೆ ಪೂರ್ಣಗೊಳಿಸಿದೆ.

By

Published : May 28, 2020, 12:09 PM IST

Updated : May 28, 2020, 12:27 PM IST

ಜಮ್ಮು:ಪಾಕಿಸ್ತಾನದ ಆಕ್ಷೇಪಣೆಯನ್ನು ಕಡೆಗಣಿಸಿರುವ ಗಡಿ ಭದ್ರತಾ ಪಡೆ ಯೋಧರು ಗುಂಡಿನ ದಾಳಿಯನ್ನೂ ಲೆಕ್ಕಿಸದೆ ಜಮ್ಮು ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯ (ಐಬಿ) ರಣಬೀರ್ ಕಾಲುವೆಯ ಕಾರ್ಯ ಪೂರ್ಣಗೊಳಿಸಿದ್ದು, ರೈತರು ಸೇರಿದಂತೆ ಗಡಿ ನಿವಾಸಿಗಳಿಗೆ ಅಗತ್ಯ ಪರಿಹಾರವನ್ನು ನೀಡಿದೆ ಎಂದು ಬಿಎಸ್ಎಫ್ ವಕ್ತಾರರು ತಿಳಿಸಿದ್ದಾರೆ.

ಪಾಕಿಸ್ತಾನದ ರೇಂಜರ್‌ಗಳ ಗುಂಡಿನ ದಾಳಿಯ ಭೀತಿಯ ನಡುವೆಯೂ ಅರ್ನಿಯಾ ಮತ್ತು ಆರ್ ಎಸ್ ಪುರ ಸೆಕ್ಟರ್‌ನಲ್ಲಿ ಕಾಲುವೆಯ ಕಾಮಗಾರಿ ಕೈಗೊಳಿಸಲಾಗಿದೆ ಎಂದು ಅವರು ಹೇಳಿದರು.

ಜಮ್ಮುವಿನ ಜೀವನಾಡಿಯೆಂದು ಪರಿಗಣಿಸಲ್ಪಟ್ಟಿರುವ ರಣಬೀರ್ ಕಾಲುವೆಯನ್ನು 1905ರಲ್ಲಿ ಈ ಪ್ರದೇಶದ ರೈತರಿಗೆ ನೀರಾವರಿ ವ್ಯವಸ್ಥೆ ಒದಗಿಸುವ ಸಲುವಾಗಿ ನಿರ್ಮಿಸಲಾಗಿತ್ತು.

Last Updated : May 28, 2020, 12:27 PM IST

ABOUT THE AUTHOR

...view details