ಶ್ರೀನಗರ: ಲಾಕ್ ಡೌನ್ನಿಂದಾಗಿ ಈ ಬಾರಿಯ ರಂಜಾನ್ ಸಂಪೂರ್ಣ ವಿಭಿನ್ನವಾಗಿದ್ದು, ಯಾವಾಗಲೂ ಜನರಿಂದ ತುಂಬಿರುತ್ತಿದ್ದ ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಐತಿಹಾಸಿಕ ಜಾಮಾ ಮಸೀದಿ ಖಾಲಿ ಹೊಡೆಯುತ್ತಿದೆ.
ಲಾಕ್ ಡೌನ್ ಎಫೆಕ್ಟ್: ರಂಜಾನ್ ನಡುವೆ ಖಾಲಿ ಹೊಡೆಯುತ್ತಿರುವ ಕಾಶ್ಮೀರದ ಮಸೀದಿ, ಮಾರುಕಟ್ಟೆಗಳು - ರಂಝಾನ್ ಆದ್ರೂ ಖಾಲಿ ಹೊಡೆಯುತ್ತಿರುವ ಕಾಶ್ಮೀರದ ಮಸೀದಿ, ಮಾರುಕಟ್ಟೆಗಳು
ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಲಾಕ್ ಡೌನ್ ವಿಧಿಸಿರುವ ಹಿನ್ನೆಲೆ ಎಲ್ಲರೂ ಮನೆಯಲ್ಲೇ ಇದ್ದು ಆರಾಧನೆಗಳನ್ನು ಮಾಡಿ ಎಂದು ಈಗಾಗಲೇ ಸರ್ಕಾರ ಮನವಿ ಮಾಡಿದೆ. ಜೊತೆಗೆ ಮುಸ್ಲಿಂ ಧಾರ್ಮಿಕರ ನಾಯಕರು ಕೂಡ ಮನೆಯಲ್ಲೇ ನಮಾಜ್ ನಿರ್ವಹಿಸುವಂತೆ ಸೂಚಿಸಿದ್ದಾರೆ. ಹೀಗಾಗಿ ಯಾರೂ ಕೂಡ ಮಸೀದಿ ಕಡೆ ಕಾಲಿಟ್ಟಿಲ್ಲ.

ಕೇವಲ ಮಸೀದಿ ಪರಿಸರ ಮಾತ್ರವಲ್ಲದೆ ಶೋಪಿಯಾನ್ ಪಟ್ಟಣದ ಮಾರುಕಟ್ಟೆಗಳು ಸ್ತಬ್ಧವಾಗಿದ್ದು, ಪ್ರತೀ ವರ್ಷ ರಂಜಾನ್ಗಿಂತ ಮೊದಲು ಶಾಬಾನ್ ತಿಂಗಳು ಬರುವಾಗಲೇ ಈ ಪಟ್ಟಣದ ಮಾರುಕಟ್ಟೆಗಳು ರಂಜಾನ್ಗೆ ಸಿದ್ದವಾಗುತ್ತಿತ್ತು. ಹಣ್ಣು, ಖರ್ಜೂರಗಳ ಮಾರಾಟ ಜೋರಾಗಿತ್ತು. ಆದರೆ, ಈ ಬಾರಿ ಕೊರೊನಾ ಲಾಕ್ ಡೌನ್ನಿಂದಾಗಿ ಮಾರುಕಟ್ಟೆ ಬೀಕೋ ಎನ್ನುತ್ತಿದೆ.