ಮುಂಬೈ: ಮರುಭೂಮಿ ಮಿಡತೆಗಳ ಸಮೂಹವು ಮಹಾರಾಷ್ಟ್ರದ ಪೂರ್ವ ಭಾಗಕ್ಕೆ ಪ್ರವೇಶಿಸಿದ್ದು, ಅಲ್ಲಿನ ಕೃಷಿ ಇಲಾಖೆ ಸಿಬ್ಬಂದಿ ಕೀಟಗಳಿಂದ ರಕ್ಷಿಸಲು ಬೆಳೆಗಳ ಮೇಲೆ ರಾಸಾಯನಿಕ ಸಿಂಪಡಣೆ ಪ್ರಾರಂಭಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿದರ್ಭಕ್ಕೆ ಕಾಲಿಟ್ಟ ಮರುಭೂಮಿ ಮಿಡತೆಗಳು: ಬೆಳೆಗಳಿಗೆ ರಾಸಾಯನಿಕ ಸಿಂಪಡಣೆ - ವಿದರ್ಭ ಪ್ರದೇಶವನ್ನು ಪ್ರವೇಶಿಸಿದ ಮರುಭೂಮಿ ಮಿಡತೆಗಳು
ಮಿಡತೆಗಳ ಸಮೂಹವು ಮಹಾರಾಷ್ಟ್ರದ ಪೂರ್ವ ಭಾಗಕ್ಕೆ ಪ್ರವೇಶಿಸಿದ್ದು, ಅಲ್ಲಿನ ಕೃಷಿ ಇಲಾಖೆ ಸಿಬ್ಬಂದಿ ಕೀಟಗಳಿಂದ ರಕ್ಷಿಸಲು ಬೆಳೆಗಳ ಮೇಲೆ ರಾಸಾಯನಿಕ ಸಿಂಪಡಣೆ ಪ್ರಾರಂಭಿಸಿದ್ದಾರೆ.
Desert locusts
ಹಲವು ಸಸ್ಯಗಳು ಹಾಗೂ ಬೆಳೆಗಳಿಗೆ ಹೆಸರುವಸಿಯಾಗಿರುವ ವಿದರ್ಭ ಪ್ರದೇಶದ 4-5 ಹಳ್ಳಿಗಳು ಮಿಡತೆಗಳ ಆಕ್ರಮಣಕ್ಕೆ ಒಳಗಾಗಿವೆ ಎಂದು ಪ್ರಾಥಮಿಕ ವರದಿಗಳು ತಿಳಿಸುತ್ತಿವೆ.
"ಮರುಭೂಮಿ ಮಿಡತೆಗಳ ಸಮೂಹವು ಅಮರಾವತಿ ಜಿಲ್ಲೆಯಿಂದ ರಾಜ್ಯವನ್ನು ಪ್ರವೇಶಿಸಿವೆ. ಬಳಿಕ ಅವುಗಳು ವಾರ್ಧಾಗೆ ಹೋಗಿದ್ದು, ಈಗ ನಾಗಪುರ ಕಟೋಲ್ ತಹಸಿಲ್‌ನಲ್ಲಿದೆ." ಎಂದು ಕೃಷಿ ಜಂಟಿ ನಿರ್ದೇಶಕ ರವೀಂದ್ರ ಭೋಸಲೆ ಹೇಳಿದ್ದಾರೆ.