ರೋಹಟಕ್:ಭೀಕರ ಸಾಮೂಹಿಕ ಅತ್ಯಾಚಾರ, ಹತ್ಯೆ ಪ್ರಕರಣ ಸೇರಿದಂತೆ ಇತರೆ ಅಪರಾಧಗಳಿಗೆ ಜೈಲು ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌದ ಮುಖ್ಯಸ್ಥ/ ಸ್ವಯಂ ಘೋಷಿತ ದೇವಮಾನವ ಗುರ್ಮಿತ್ ರಾಮ್ ರಹೀಮ್ ಸಿಂಗ್ ಜೈಲಲ್ಲೇ 18 ಸಾವಿರ ರೂ. ಗಳಿಸಿದ್ದಾನೆ.
ಜೈಲಲ್ಲಿ ತರಕಾರಿ ಬೆಳೆದು 18 ಸಾವಿರ ರೂ. ಗಳಿಸಿದ ಕೈದಿ ಬಾಬಾ ಗುರ್ಮಿತ್ - CBI Today News
ಪಂಚಕುಲದಲ್ಲಿ ನಡೆಸಿದ ಅತ್ಯಾಚಾರ ಮತ್ತು ಹತ್ಯೆಗಳ ಪ್ರಕರಣದ ಸಂಬಂಧ 2017ರಲ್ಲಿ ಸಿಬಿಐನಿಂದ ಬಂಧನಕ್ಕೆ ಒಳಗಾದ ಗುರ್ಮಿತ್ಗೆ ನ್ಯಾಯಾಲಯವು 20 ವರ್ಷ ಜೈಲು ಶಿಕ್ಷೆಗೆ ವಿಧಿಸಿತ್ತು. ಎರಡು ವರ್ಷಗಳಿಂದ ರೋಹಟಕ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಗುರ್ಮಿತ್, ಕಾರಾಗೃಹದಲ್ಲಿ ತರಕಾರಿ ಬೆಳೆದು 18 ಸಾವಿರ ರೂ. ಗಳಿಸಿದ್ದಾನೆ.

ಜೈಲಿನ ಆವರಣದಲ್ಲಿ ತರಕಾರಿ ಬೆಳೆದ ಗುರ್ಮಿತ್ ದೈಹಿಕ ಶ್ರಮದಿಂದ ತೂಕು ಇಳಿಸಿಕೊಂಡಿದ್ದಾನೆ. ಜೈಲು ಕೈದಿಯಾಗಿ ಬಂದಾಗ ತೂಕ 105 ಕೆಜಿ ಇತ್ತು. ಈಗ 90 ಕೆಜಿಗೆ ತಲುಪಿದ್ದಾನೆ. ಈತ ಆಲೂಗಡ್ಡೆ, ಟೊಮ್ಯಾಟೋ ಮತ್ತು ಬಾಟಲ್ ಸೋರೆಕಾಯಿಯಂತಹ ತರಕಾರಿಗಳನ್ನು ಬೆಳೆದಿದ್ದಾನೆ.