ನವದೆಹಲಿ:ಶೀತಗಾಳಿ ಹಾಗೂ ದಟ್ಟವಾದ ಮಂಜು ರಾಷ್ಟ್ರ ರಾಜಧಾನಿಯನ್ನು ಆವರಿಸುತ್ತಲೇ ಇದ್ದು, ಇಂದು ರೈಲ್ವೆ ಹಾಗೂ ವಿಮಾನ ಸೇವೆ ಮೇಲೆ ಅಡ್ಡಪರಿಣಾಮ ಬೀರಿದೆ.
ಉತ್ತರದಲ್ಲಿ ಚಳಿಗೆ ಜನರು ತತ್ತರಿಸಿ ಹೋಗಿದ್ದು, ಭಾನುವಾರ ದೆಹಲಿಯಲ್ಲಿ 2.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿತ್ತು. ದೆಹಲಿಯ ಕಂಟೋನ್ಮೆಂಟ್ ಪ್ರದೇಶವನ್ನ ಮಂಜು ಆವರಿಸಿದೆ. ಇನ್ನು ದಟ್ಟವಾದ ಮಂಜಿನಿಂದಾಗಿ ಗೋಚರತೆ ಕಡಿಮೆ ಆಗಿರುವುದರಿಂದ ನವದೆಹಲಿ ರೈಲ್ವೆ ನಿಲ್ದಾಣದಿಂದ 30 ರೈಲುಗಳು ತಡವಾಗಿ ಸಂಚರಿಸಲಿವೆ ಎಂದು ಉತ್ತರ ರೈಲ್ವೆ ತಿಳಿಸಿದೆ. ಅಲ್ಲದೇ ದೆಹಲಿ ಏರ್ಪೋರ್ಟ್ನಲ್ಲಿ ವಿಮಾನ ಸೇವೆಯ ಸಮಯದಲ್ಲೂ ಬದಲಾವಣೆ ಆಗಿದೆ, ಆದರೆ ಯಾವುದೇ ವಿಮಾನ ರದ್ದಾಗಿಲ್ಲ.