ಔರಂಗಬಾದ್:ಚುನಾವಣೆಗೆ ಟಿಕೆಟ್ ನೀಡಲಿಲ್ಲವೆಂದು ಬಂಡೇಳುವ ಅಭ್ಯರ್ಥಿಗಳನ್ನು ನೋಡಿದ್ದೇವೆ. ಆದರೆ, ಇಲ್ಲೊಬ್ಬ ಕಾಂಗ್ರೆಸ್ ಶಾಸಕ ಪಕ್ಷದ ಕಚೇರಿಯಿಂದ 300 ಕುರ್ಚಿಗಳನ್ನು ಹೊತ್ತೊಯ್ದಿರುವ ಘಟನೆ ಮಹಾರಾಷ್ಟ್ರದ ಔರಂಗಬಾದ್ನಲ್ಲಿ ನಡೆದಿದೆ.
ಸಿಲ್ಲೋದ್ನ ಶಾಸಕ ಅಬ್ದುಲ್ ಸತ್ತರ್ ಎಂಬುವರು ಕಾಂಗ್ರೆಸ್ನಿಂದ ಟಿಕೆಟ್ ದೊರೆಯದಿದ್ದಕ್ಕೆ ಅಸಮಾಧಾನಗೊಂಡು, ಪಕ್ಷದ ಸ್ಥಳೀಯ ಕಚೇರಿಯಿಂದ 300 ಕುರ್ಚಿಗಳನ್ನು ಹೊತ್ತೊಯ್ದಿದ್ದಾರೆ. ಕಾಂಗ್ರೆಸ್ ಹಾಗೂ ಎನ್ಸಿಪಿ ಮೈತ್ರಿ ಕುರಿತು ಶಹಗುಂಜ್ನಲ್ಲಿನ ಪಕ್ಷದ ಕಚೇರಿ ಗಾಂಧಿ ಭವನದಲ್ಲಿ ನಿನ್ನೆ ಸಭೆ ನಡೆಯುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಬೆಂಬಲಿಗರೊಂದಿಗೆ ಬಂದ ಸತ್ತರ್ ಕಚೇರಿಯಲ್ಲಿದ್ದ ಕುರ್ಚಿಗಳನ್ನು ಕೊಂಡೊಯ್ದಿದ್ದಾರೆ. ಇವು ನಾನು ನೀಡಿದ್ದ ಕುರ್ಚಿಗಳು ಎಂದೂ ಅವರು ಹೇಳಿಕೊಂಡಿದ್ದಾರೆ.