ಡೆಂಗ್ಯೂ ಜ್ವರವನ್ನು ಹರಡುವ ಏಡಿಸ್ ಎಜಿಪ್ತಿ ಜಾತಿಯ ಸೊಳ್ಳೆಗಳು ನಿಂತ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಬಳಸದೆ ಬಿಟ್ಟ, ಹಳೆಯ ಟೈರ್, ಡ್ರಮ್, ಹೂದಾನಿಗಳು, ಬಾವಿ, ಮರದ ಪೊಟರೆಗಳಲ್ಲಿ ನಿಂತ ಕೊಳೆತ ನೀರು ಈ ಸೊಳ್ಳೆಗಳ ಸಂತಾನೋತ್ಪತ್ತಿಗೆ ಅತ್ಯುತ್ತಮ ತಾಣಗಳಾಗಿವೆ. ಮೊದಲಿಗೆ ಕೇವಲ ಗ್ರಾಮೀಣ ಭಾಗದಲ್ಲಿ ಕಂಡುಬರುತ್ತಿದ್ದ ಡೆಂಗ್ಯೂ ಜ್ವರ ಈಗ ನಗರಗಳಿಗೂ ವ್ಯಾಪಿಸಿದೆ.
ಸೊಳ್ಳೆ ಕಚ್ಚಿದ 4 ರಿಂದ 7 ದಿನಗಳ ಒಳಗೆ ಡೆಂಗ್ಯೂ ಜ್ವರದ ಲಕ್ಷಣಗಳು ಕಾಣಿಸಲಾರಂಭಿಸುತ್ತವೆ. ಝಿಕಾ, ಚಿಕೂನ್ ಗುನ್ಯಾ ಹಾಗೂ ಇನ್ನಿತರ ವೈರಸ್ಗಳನ್ನು ಸಹ ಏಡಿಸ್ ಎಜಿಪ್ತಿ ಜಾತಿಯ ಸೊಳ್ಳೆಗಳು ಹರಡುತ್ತವೆ. 4 ಬಗೆಯ ಡೆಂಗ್ಯೂ ವೈರಸ್ ಪ್ರಬೇಧಗಳಿರುವುದರಿಂದ ಒಬ್ಬ ಮನುಷ್ಯನಿಗೆ ಆತನ ಜೀವಿತಾವಧಿಯಲ್ಲಿ ನಾಲ್ಕು ಬಾರಿ ಡೆಂಗ್ಯೂ ಜ್ವರ ಕಾಡಬಹುದು.
ವಿಶ್ವದ 100 ದೇಶಗಳಲ್ಲಿ ಡೆಂಗ್ಯೂ ಜ್ವರ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ವಿಶ್ವದ ಶೇ 40 ರಷ್ಟು ಜನ ಡೆಂಗ್ಯೂ ಹರಡುವ ಅಪಾಯವಿರುವ ಪ್ರದೇಶಗಳಲ್ಲಿ ವಾಸಿಸುತ್ತಾರೆ. ಈ ಪ್ರದೇಶಗಳ ಜನರಿಗೆ ರೋಗ ಉಂಟು ಮಾಡುವ ಪ್ರಮುಖ ಕಾರಣ ಡೆಂಗ್ಯೂ ಆಗಿದೆ. ಪ್ರತಿವರ್ಷ ಸುಮಾರು 400 ಮಿಲಿಯನ್ ಜನರಿಗೆ ಡೆಂಗ್ಯೂ ಜ್ವರದಿಂದ ಬಳಲುತ್ತಾರೆ. ಇದರಲ್ಲಿ ಸುಮಾರು 100 ಮಿಲಿಯನ್ ಜನರಿಗೆ ಗಂಭೀರ ಆರೋಗ್ಯ ಸಮಸ್ಯೆಗಳುಂಟಾಗುತ್ತವೆ ಹಾಗೂ ಸುಮಾರು 22 ಸಾವಿರ ಜನ ಪ್ರತಿವರ್ಷ ಡೆಂಗ್ಯೂ ಜ್ವರಕ್ಕೆ ಬಲಿಯಾಗುತ್ತಾರೆ.
2015 ರಿಂದ ಭಾರತದಲ್ಲಿ ವರದಿಯಾದ ಡೆಂಗ್ಯೂ ಪ್ರಕರಣ ಹಾಗೂ ಸಾವು :
Sl. No. | Affected States/UTs | 2015 | 2016 | 2017 | 2018( Prov.) | 2019( till Nov.) | |||||
C | D | C | D | C | D | C | D | C | D | ||
1 | ಆಂಧ್ರ ಪ್ರದೇಶ | 3159 | 2 | 3417 | 2 | 4925 | 0 | 4011 | 0 | 4647 | 0 |
2 | ಅರುಣಾಚಲ ಪ್ರದೇಶ | 1933 | 1 | 13 | 0 | 18 | 0 | 1 | 0 | 123 | 0 |
3 | ಅಸ್ಸಾಂ | 1076 | 1 | 6157 | 4 | 5024 | 1 | 166 | 0 | 167 | 0 |
4 | ಬಿಹಾರ | 1771 | 0 | 1912 | 0 | 1854 | 0 | 2142 | 0 | 6193 | 0 |
5 | ಛತ್ತೀಸಗಢ | 384 | 1 | 356 | 0 | 444 | 0 | 2674 | 10 | 681 | 0 |
6 | ಗೋವಾ | 293 | 0 | 150 | 0 | 235 | 0 | 335 | 1 | 874 | 0 |
7 | ಗುಜರಾತ್ | 5590 | 9 | 8028 | 14 | 4753 | 6 | 7579 | 5 | 14835 | 16 |
8 | ಹರಿಯಾಣ | 9921 | 13 | 2493 | 0 | 4550 | 0 | 1898 | 0 | 937 | 0 |
9 | ಹಿಮಾಚಲ ಪ್ರದೇಶ | 19 | 1 | 322 | 0 | 452 | 0 | 4672 | 7 | 320 | 2 |
10 | ಜಮ್ಮು ಕಾಶ್ಮೀರ | 153 | 0 | 79 | 1 | 488 | 0 | 214 | 0 | 435 | 0 |
11 | ಜಾರ್ಖಂಡ್ | 102 | 0 | 414 | 1 | 710 | 5 | 463 | 1 | 803 | 0 |
12 | ಕರ್ನಾಟಕ | 5077 | 9 | 6083 | 8 | 17844 | 10 | 4427 | 4 | 15232 | 13 |
13 | ಕೇರಳ | 4075 | 25 | 7439 | 13 | 19994 | 37 | 4083 | 32 | 3940 | 16 |
14 | ಮಧ್ಯ ಪ್ರದೇಶ | 2108 | 8 | 3150 | 12 | 2666 | 6 | 4506 | 5 | 3645 | 2 |
15 | ಮೇಘಾಲಯ | 13 | 0 | 172 | 0 | 52 | 0 | 44 | 0 | 61 | 0 |
16 | ಮಹಾರಾಷ್ಟ್ರ | 4936 | 23 | 6792 | 33 | 7829 | 65 | 11011 | 55 | 12374 | 25 |
17 | ಮಣಿಪುರ | 52 | 0 | 51 | 1 | 193 | 1 | 14 | 0 | 334 | 0 |
18 | ಮಿಜೋರಾಂ | 43 | 0 | 580 | 0 | 136 | 0 | 68 | 0 | 42 | 0 |
19 | ನಾಗಾಲ್ಯಾಂಡ್ | 21 | 1 | 142 | 0 | 357 | 0 | 369 | 0 | 8 | 0 |
20 | ಒಡಿಶಾ | 2450 | 2 | 8380 | 11 | 4158 | 6 | 5198 | 5 | 3251 | 0 |
21 | ಪಂಜಾಬ್ | 14128 | 18 | 10439 | 15 | 15398 | 18 | 14980 | 9 | 8949 | 0 |
22 | ರಾಜಸ್ಥಾನ | 4043 | 7 | 5292 | 16 | 8427 | 14 | 9587 | 10 | 12664 | 14 |
23 | ಸಿಕ್ಕಿಂ | 21 | 0 | 82 | 0 | 312 | 0 | 320 | 0 | 243 | 0 |
24 | ತಮಿಳು ನಾಡು | 4535 | 12 | 2531 | 5 | 23294 | 65 | 4486 | 13 | 6577 | 5 |
25 | ತ್ರಿಪುರಾ | 40 | 0 | 102 | 0 | 127 | 0 | 100 | 0 | 100 | 0 |
26 | ತೆಲಂಗಾಣ | 1831 | 2 | 4037 | 4 | 5369 | 0 | 4592 | 2 | 12072 | 6 |
27 | ಉತ್ತರ ಪ್ರದೇಶ | 2892 | 9 | 15033 | 42 | 3092 | 28 | 3829 | 4 | 9280 | 20 |
28 | ಉತ್ತರಾಖಂಡ್ | 1655 | 1 | 2146 | 4 | 849 | 0 | 689 | 3 | 10500 | 8 |
29 | ಪಶ್ಚಿಮ ಬಂಗಾಳ | 8516 | 14 | 22865 | 45 | 37746 | 46 | - | - | ||
30 | ಅಂಡಮಾನ್ ನಿಕೋಬಾರ್ | 153 | 0 | 92 | 0 | 18 | 0 | 49 | 0 | 168 | 0 |
31 | ಚಂಡೀಗಢ | 966 | 1 | 1246 | 0 | 1125 | 0 | 301 | 0 | 235 | 0 |
32 | ದೆಹಲಿ | 15867 | 60 | 4431 | 10 | 9271 | 10 | 7136 | 4 | 4155 | 0 |
33 | ದಾದ್ರಾ ನಗರ ಹವೇಲಿ | 1154 | 0 | 4161 | 2 | 2064 | 0 | 493 | 0 | 954 | 2 |
34 | ದಮನ್ ದಿಯು | 165 | 0 | 89 | 0 | 59 | 0 | 163 | 0 | 128 | 2 |
35 | ಪುದುಚೇರಿ | 771 | 0 | 490 | 2 | 4568 | 7 | 592 | 2 | 1495 | 1 |
ಒಟ್ಟು | 99913 | 220 | 129166 | 245 | 188401 | 325 | 101192 | 172 | 136422 | 132 |
{ C=Cases | D=Deaths | NR=Not Reported }
ಡೆಂಗ್ಯೂ ಜ್ವರ ಹರಡುವಿಕೆ
* ಏಡಿಸ್ ಎಜಿಪ್ತಿ ಸೊಳ್ಳೆಗಳು ಸಾಮಾನ್ಯವಾಗಿ ನಿಂತ ನೀರಿನಲ್ಲಿ ಮೊಟ್ಟೆ ಇಟ್ಟು ಸಂತಾನೋತ್ಪತ್ತಿ ಮಾಡುತ್ತವೆ.
* ಮನೆಯ ಹೊರಗೆ ಹಾಗೂ ಒಳಗೆ ಎರಡೂ ಕಡೆಗಳಲ್ಲಿ ಕಂಡು ಬರುವ ಈ ಸೊಳ್ಳೆಗಳು ಮಾನವರಿಗೆ ಕಚ್ಚಿ ರಕ್ತ ಹೀರಲು ಹೆಚ್ಚು ಇಷ್ಟಪಡುತ್ತವೆ.
* ಮೊದಲೇ ಡೆಂಗ್ಯೂ ಜ್ವರ ಇರುವ ವ್ಯಕ್ತಿಯನ್ನು ಕಚ್ಚಿದಾಗ ವೈರಸ್ ಸೊಳ್ಳೆಯ ದೇಹ ಪ್ರವೇಶಿಸುತ್ತವೆ. ನಂತರ ಈ ಸೊಳ್ಳೆಗಳು ಇತರರನ್ನು ಕಚ್ಚುವ ಮೂಲಕ ಅವರಿಗೆ ವೈರಸ್ ಸಾಗಿಸುತ್ತವೆ.
* ಡೆಂಗ್ಯೂ ಬಾಧಿತ ಗರ್ಭಿಣಿಗೆ ಹುಟ್ಟುವ ಮಗುವಿಗೂ ಡೆಂಗ್ಯೂ ವೈರಸ್ ಹರಡಬಹುದು.