ಲಕ್ಷ್ಮೀಪುರ ಖೇರಿ (ಉತ್ತರಪ್ರದೇಶ):42 ಮಂದಿಯ ಸಮೂಹವೊಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮೇಲೆ ಎಫ್ಐಆರ್ ದಾಖಲಿಸಿಕೊಳ್ಳುವಂತೆ ಮನವಿ ಮಾಡಿದೆ. ಉತ್ತರ ಪ್ರದೇಶದ ಲಕ್ಷ್ಮೀಪುರ ಖೇರಿ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಕ್ಸಿ ವಿರುದ್ಧ ದೂರು ದಾಖಲಿಸಿ ಎಂದು ಅವರು ಮನವಿ ಮಾಡಿದ್ದಾರೆ.
ಚೀನಾ ವಿರುದ್ಧ ಸಿಡಿದೆದ್ದ ಉತ್ತರ ಪ್ರದೇಶದ ಮಂದಿ: ಜಿನ್‌ಪಿಂಗ್ ವಿರುದ್ಧ ಕೇಸು ದಾಖಲಿಸಲು ಮನವಿ - ಪೊಲೀಸ್
ಕೊರೊನಾ ಸೋಂಕು ಹರಡುತ್ತಿರುವ ಆರೋಪದ ಮೇಲೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ವಿರುದ್ಧ ಕೇಸು ದಾಖಲಿಸಿಕೊಳ್ಳುವಂತೆ 40 ಮಂದಿಯ ಸಮೂಹವೊಂದು ಉತ್ತರಪ್ರದೇಶದ ಪೊಲೀಸರಿಗೆ ಮನವಿ ಮಾಡಿದೆ.
ಕೊರೊನಾ ಸೋಂಕನ್ನು ಚೀನಾ ವಿಶ್ವವ್ಯಾಪಿ ಹರಡುತ್ತಿರುವ ಕಾರಣದಿಂದ ವ್ಯಾಪಾರ,ವ್ಯವಹಾರಕ್ಕೆ ಭಾರಿ ನಷ್ಟವಾಗಿದೆ. ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಇದರಿಂದಾಗಿ ಪ್ರಕರಣ ದಾಖಲಿಸಿ, ಕ್ರಮ ಕೈಗೊಳ್ಳಬೇಕೆಂದು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ಇದಕ್ಕೂ ಮೊದಲು, ಮುಜಾಫರ್‌ಪುರ್ ಕೋರ್ಟ್‌ನಲ್ಲಿ ಚೀನಾ ಅಧ್ಯಕ್ಷರ ಹಾಗೂ ಭಾರತದಲ್ಲಿರುವ ಚೀನಾ ರಾಯಭಾರಿ ಸನ್ ವೈಡೋಂಗ್ ವಿರುದ್ಧ ದೂರು ದಾಖಲಾಗಿತ್ತು. ದೂರಿನಲ್ಲಿ ಮಾರಕ ರೋಗ ಹರಡಿ ಚೀನಾ ಪಿತೂರಿ ನಡೆಸುತ್ತಿದೆ ಎಂದು ಆರೋಪಿಸಲಾಗಿತ್ತು. ಈ ಅರ್ಜಿಯ ವಿಚಾರಣೆ ಮುಜಾಫರ್‌ಪುರ್ ಕೋರ್ಟ್‌ನಲ್ಲಿ ಏಪ್ರಿಲ್ 11ರಂದು ನಡೆಯಲಿದೆ.