ಕರ್ನಾಟಕ

karnataka

By

Published : Aug 3, 2019, 12:35 PM IST

ETV Bharat / bharat

ಸಿದ್ಧಾರ್ಥ ಸಾವು ಉದ್ಯಮಕ್ಕೆ ಹೊಡೆತ... ಆ ಪ್ರತಿಷ್ಠಿತ ಉದ್ಯಮಿ ಹೀಗ್ಯಾಕೆ ಹೇಳಿದರು!

ವ್ಯಕ್ತಿಯ ವೈಫಲ್ಯ ಮತ್ತು ಉದ್ಯಮದ ನಡುವೆ ಒಂದು ಸಾಮಾಜಿ ಚೌಕಟ್ಟು ಇರಬೇಕು ಎಂದು ಇನ್ಫೋಸಿಸ್​ ಮುಖ್ಯಸ್ಥ ನಂದನ್​ ನೀಲೇಕಣಿ ಹೇಳಿದ್ದಾರೆ.

ನಂದನ್​ ನೀಲೇಕಣಿ

ಬೆಂಗಳೂರು:ವ್ಯಕ್ತಿ ಮತ್ತು ಉದ್ಯಮದ ನಡುವೆ ಒಂದು ಸಾಮಾಜಿಕ ಚೌಕಟ್ಟು ಇರಬೇಕು. ಆದ್ರೆ ಭಾರತದಲ್ಲಿ ಈ ಎರಡೂ ಒಟ್ಟಿಗೆ ಬೆಸೆದುಕೊಂಡಿದ್ದು, ಹಲವು ಕೆಟ್ಟ ಪರಿಣಾಮಗಳು ಉಂಟಾಗುತ್ತಿವೆ, ಎಂದು ಇನ್ಫೋಸಿಸ್​ ಮುಖ್ಯಸ್ಥ ನಂದನ್​ ನೀಲೇಕಣಿ ಅಭಿಪ್ರಾಯಪಟ್ಟಿದ್ದಾರೆ.

ವಿ.ಜಿ.ಸಿದ್ಧಾರ್ಥ್ ಸಾವು ಉದ್ಯಮದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಪ್ರಶ್ನೆಗೆ ನೇರವಾಗಿ ಪ್ರತಿಕ್ರಿಯಿಸಿದ ಅವರು, ಒಬ್ಬ ವ್ಯಕ್ತಿಯ ವೈಫಲ್ಯ​ ಆತನ ಉದ್ಯಮದ ನಡುವೆ ಒಂದು ಚೌಕಟ್ಟು ಇರಬೇಕು ಎಂದಿದ್ದಾರೆ.

ವೈಫಲ್ಯ, ವ್ಯಕ್ತಿ ಮತ್ತು ಸಂಸ್ಥೆ ಎಲ್ಲ ಒಂದಕ್ಕೊಂದು ಬೆರೆತುಹೋಗಿವೆ. ಹೀಗಾಗಿ ಸಂಸ್ಥೆಯ ಮೇಲೆ ಹಲವು ಅಡ್ಡ ಪರಿಣಾಮಗಳು ಬೀರುತ್ತವೆ. ಹೊಸದಾಗಿ ಉದ್ಯಮ ಕ್ಷೇತ್ರಕ್ಕೆ ಕಾಲಿಡುವವರು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ.

ನೀಲೇಕಣಿ ಮತ್ತು ವಿ.ಜಿ.ಸಿದ್ಧಾರ್ಥ್​ ಪರಸ್ಪರ ಪರಿಚಿತರಾಗಿದ್ದು, ಇನ್ಫೋಸಿಸ್​ ಬೆಳವಣಿಗೆಯಲ್ಲಿ ಇಬ್ಬರ ಪಾತ್ರವೂ ಇದೆ. ಅಲ್ಲದೆ ಕೆಫೆ ಕಾಫಿ ಡೇ ಉದ್ಯಮದಲ್ಲೂ ನೀಲೇಕಣಿ 2.6 ರಷ್ಟು ಪಾಲುದಾರಿಕೆ ಹೊಂದಿದ್ದಾರೆ.

ABOUT THE AUTHOR

...view details