ಕರ್ನಾಟಕ

karnataka

ETV Bharat / bharat

ಮಾಗಿಯ ಚಳಿಗೂ ಮುನ್ನ ಮೂಳೆ ಕಟಕಟಿಸುವ ಥಂಡಿಗೆ ತತ್ತರಿಸಿದ ದೆಹಲಿ: ಇದು ಜಸ್ಟ್ ಟೀಸರ್​!

2020ರಲ್ಲಿ ದೆಹಲಿಯು ಅಕ್ಟೋಬರ್‌ನಲ್ಲಿ ಸರಾಸರಿ 17.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಿಸಿದೆ. ಇದು 1962ರ ನಂತರ ಸಫ್ದರ್‌ಜಂಗ್ ಮಾನಿಟರಿಂಗ್ ಸ್ಟೇಷನ್‌ನಲ್ಲಿ 16.9 ಡಿಗ್ರಿ ಸೆಲ್ಸಿಯಸ್ ಆಗಿದ್ದ ಇಲ್ಲಿಯವರೆಗಿನ ಅತ್ಯಂತ ಕಡಿಮೆ ತಾಪಮಾನವಾಗಿತ್ತು.

Delhi
ದೆಹಲಿ

By

Published : Oct 31, 2020, 6:27 PM IST

ನವದೆಹಲಿ:ರಾಷ್ಟ್ರರಾಜಧಾನಿ ದೆಹಲಿ ಹಾಗೂ ಎನ್​ಸಿಆರ್​ ಪ್ರದೇಶದಲ್ಲಿ ಮಾಗಿಯ ಚಳಿ ಆವರಿಸುವ ಮುನ್ನವೇ ಇಲ್ಲಿನ ಥಂಡಿ ದೆಹಲಿಗರನ್ನು ಹಣ್ಣುಗಾಯಿ ನೀರುಗಾಯಿ ಮಾಡಿಬಿಟ್ಟಿದೆ.

ದೆಹಲಿಯಲ್ಲಿ 1962ರ ಬಳಿಕ ಅಕ್ಟೋಬರ್ ತಿಂಗಳಲ್ಲಿ ಅತ್ಯಂತ ಶೀತಲ ಮಾಸಿಕ ದಾಖಲಾಗಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

2020ರಲ್ಲಿ ದೆಹಲಿಯು ಅಕ್ಟೋಬರ್‌ನಲ್ಲಿ ಸರಾಸರಿ 17.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಿಸಿದೆ. ಇದು 1962ರ ನಂತರ ಸಫ್ದರ್‌ಜಂಗ್ ಮಾನಿಟರಿಂಗ್ ಸ್ಟೇಷನ್‌ನಲ್ಲಿ 16.9 ಡಿಗ್ರಿ ಸೆಲ್ಸಿಯಸ್ ಆಗಿದ್ದ ಇಲ್ಲಿಯವರೆಗಿನ ಅತ್ಯಂತ ಕಡಿಮೆ ತಾಪಮಾನವಾಗಿತ್ತು.

ಶಾಂತ ಗಾಳಿ ಮತ್ತು ರಾಜಧಾನಿಯ ಮೇಲೆ ಮೋಡ ಕವಿದ ವಾತಾವರಣದಿಂದಾಗಿ ಈ ಪರಿಯ ಶೀತ ಸಂಭವಿಸಿದೆ. ಕನಿಷ್ಠ ತಾಪಮಾನವು ನವೆಂಬರ್ 1ರಂದು 10 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುತ್ತದೆ ಎಂದು ಐಎಂಡಿ ವಿಜ್ಞಾನಿ ಹೇಳಿದ್ದಾರೆ.

ರಾಷ್ಟ್ರ ರಾಜಧಾನಿ ಕನಿಷ್ಠ 12.5 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ಸಹ ದಾಖಲಿಸಿದೆ. ಇದು ಅಕ್ಟೋಬರ್ ತಿಂಗಳಲ್ಲಿ 26 ವರ್ಷಗಳಲ್ಲಿ ಅತಿ ಕಡಿಮೆ. 1937ರಲ್ಲಿ 9.4 ಡಿಗ್ರಿ ಸೆಲ್ಸಿಯಸ್‌ಗೆ ಅತ್ಯಂತ ಕಡಿಮೆ ತಾಪಮಾನ ದಾಖಲಿಸಿತ್ತು ಎಂದು ಶ್ರೀವಾಸ್ತವ ಹೇಳಿದರು.

ಐಎಂಡಿ ಪ್ರಕಾರ, ರಾಜಧಾನಿ ಸಾಮಾನ್ಯವಾಗಿ ಅಕ್ಟೋಬರ್ ತಿಂಗಳಲ್ಲಿ ಸರಾಸರಿ 19.1 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ದಾಖಲಿಸುತ್ತದೆ. ಇದಲ್ಲದೆ, ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಶನಿವಾರ 31.4 ಮತ್ತು 13 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿತ್ತು. ಗಾಳಿಯು ಗಂಟೆಗೆ 11.1 ಕಿ.ಮೀ. ವೇಗದಲ್ಲಿ ಬೀಸುತ್ತಿದೆ.

ABOUT THE AUTHOR

...view details