ಕರ್ನಾಟಕ

karnataka

ETV Bharat / bharat

ಈ ನಗರಕ್ಕೆ ಏನಾಗಿದೆ..? ಪಾತಾಳಕ್ಕೆ ಕುಸಿದ ದೆಹಲಿಯ ಗಾಳಿಯ ಗುಣಮಟ್ಟ..! - ದೆಹಲಿಯಲ್ಲಿ ವಾಯುಮಾಲಿನ್ಯ

ಘಾಜಿಯಾಬಾದ್,ಗ್ರೇಟರ್ ನೋಯ್ಡಾ, ಗುರುಗ್ರಾಮ,ಫರೀದಾಬಾದ್, ನೋಯ್ಡಾ ಭಾಗಗಳಲ್ಲಿ ಗಾಳಿಯ ಗುಣಮಟ್ಟ ಕಳೆದ ಮೂರು ವರ್ಷಗಳಲ್ಲೇ ಕನಿಷ್ಠಮಟ್ಟಕ್ಕೆ ಕುಸಿತ ಕಂಡಿದೆ.

ದೆಹಲಿಯ ಗಾಳಿಯ ಗುಣಮಟ್ಟ

By

Published : Nov 4, 2019, 2:47 AM IST

Updated : Nov 4, 2019, 6:33 AM IST

ದೆಹಲಿ:ರಾಷ್ಟ್ರ ರಾಜಧಾನಿ ಈ ಹಿಂದೆಂದಿಗಿಂತಲೂ ವಿಷಮ ಪರಿಸ್ಥಿತಿ ಎದುರಿಸುತ್ತಿದ್ದು, ನಿವಾಸಿಗಳು ವಿಷಗಾಳಿಯ ಸುಳಿಯಲ್ಲಿ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಘಾಜಿಯಾಬಾದ್,ಗ್ರೇಟರ್ ನೋಯ್ಡಾ, ಗುರುಗ್ರಾಮ,ಫರೀದಾಬಾದ್, ನೋಯ್ಡಾ ಭಾಗಗಳಲ್ಲಿ ಗಾಳಿಯ ಗುಣಮಟ್ಟ ಕಳೆದ ಮೂರು ವರ್ಷಗಳಲ್ಲೇ ಕನಿಷ್ಠಮಟ್ಟಕ್ಕೆ ಕುಸಿತ ಕಂಡಿದೆ.

ವರದಿ ಕೇಳಿದ ಸುಪ್ರೀಂ:

ವಾಯುಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯನ್ನು ಸುಪ್ರೀಂಕೋರ್ಟ್​ ಸೋಮವಾರ ಪಡೆದುಕೊಳ್ಳುವ ಸಾಧ್ಯತೆ ಇದೆ. ದೆಹಲಿಗೆ ಹೊಂದಿಕೊಂಡಿರುವ ರಾಜ್ಯಗಳಲ್ಲಿ(ಉತ್ತರ ಪ್ರದೇಶ, ಹರಿಯಾಣ, ಪಂಜಾಬ್) ಕಳೆಗಳಿಗೆ ಬೆಂಕಿ ನೀಡುವುದನ್ನು ನಿಲ್ಲಿಸಲು ಮಂಡಳಿ ಮನವಿ ಮಾಡಿದೆ.

ಕ್ಯಾರೆಟ್ ತಿನ್ನಿ ಎಂದ ಸಚಿವ..!

ದೆಹಲಿಯ ವಿಷಗಾಳಿಯಿಂದ ಆರೋಗ್ಯ ಕಾಪಾಡಿಕೊಳ್ಳಲು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್​​ ರಾಷ್ಟ್ರ ರಾಜಧಾನಿ ಜನತೆಗೆ ವಿಶೇಷ ಸಲಹೆಯೊಂದನ್ನು ನೀಡಿದ್ದಾರೆ.

ದೆಹಲಿ ನಿವಾಸಿಗಳು ಕ್ಯಾರೆಟ್ ತಿನ್ನುವ ಮೂಲಕ ವಾಯುಮಾಲಿನ್ಯದಿಂದ ಬರಬಹುದಾದ ತೊಂದರೆಯಿಂದ ರಕ್ಷಿಸಿಕೊಳ್ಳಬಹುದು ಎಂದಿದ್ದಾರೆ. ಕ್ಯಾರೆಟ್​ನಲ್ಲಿ ವಿಟಮಿನ್ ಎ, ಪೊಟ್ಯಾಷಿಯಂ ಅಂಶಗಳಿದ್ದು ಇವು ಆರೋಗ್ಯಕ್ಕೆ ಉತ್ತಮ ಎಂದು ಡಾ.ಹರ್ಷವರ್ಧನ್ ಟ್ವೀಟ್ ಮಾಡಿದ್ದಾರೆ.

ಶಾಲಾ ಕಾಲೇಜ್ ಬಂದ್, ವಿಮಾನ ಹಾರಾಟ ವ್ಯತ್ಯಯ:

ವಿಷಗಾಳಿಯ ಹಿನ್ನೆಲೆಯಲ್ಲಿ ದೆಹಲಿಯ ಬಹುತೇಕ ಪ್ರದೇಶಗಳಲ್ಲಿ ಶಾಲಾ-ಕಾಲೇಜುಗಳನ್ನು ನ.5ರ ತನಕ ಮುಚ್ಚಲಾಗಿದೆ. ಪರಿಸ್ಥಿತಿಯನ್ನು ಅವಲೋಕಿಸಿ ಕೇಜ್ರಿವಾಲ್ ಸರ್ಕಾರ ಮುಂದಿನ ನಿರ್ಧಾರ ಕೈಗೊಳ್ಳಲಿದೆ.

ವಿಮಾನ ಹಾರಾಟಕ್ಕೆ ಪ್ರತೀಕೂಲ ಹವಾಮಾನ ಇದ್ದ ಕಾರಣ ಬರೋಬ್ಬರಿ 37 ವಿಮಾನಗಳ ಲ್ಯಾಂಡಿಂಗ್ ಬೇರೆಡೆ ಮಾಡಲಾಗಿದೆ. ಇವುಗಳಲ್ಲಿ 12 ಏರ್ ಇಂಡಿಯಾ ವಿಮಾನ ಸೇರಿವೆ.

Last Updated : Nov 4, 2019, 6:33 AM IST

ABOUT THE AUTHOR

...view details