ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಯುಮಾಲಿನ್ಯ ದಿನೇದಿನೆ ಹೆಚ್ಚುತ್ತಿದೆ. ಇದೇ ವಿಚಾರದಲ್ಲಿ ದೇಶದ ರಾಜಧಾನಿ ಕಳಪೆ ಹಣೆಪಟ್ಟಿಗೆ ಪಾತ್ರವಾಗಿದೆ.
ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ವಿಶ್ವದ ಒಟ್ಟಾರೆ ಗಾಳಿಯ ಗುಣಮಟ್ಟದ ಬಗ್ಗೆ ವರದಿಯೊಂದನ್ನು ತಯಾರಿಸಿದೆ. ಈ ವರದಿಯಲ್ಲಿ ದೆಹಲಿಯ ಗಾಳಿಯ ಗುಣಮಟ್ಟ ಜಗತ್ತಿಲ್ಲೇ ಅತ್ಯಂತ ಕಳಪೆಯಾಗಿದೆ ಎಂದು ಹೇಳಿದೆ.
ಸ್ಕೈಮೆಟ್ ವರದಿಯ ಕಳಪೆ ಗಾಳಿಯ ಗುಣಮಟ್ಟ ಪ್ರಕಾರ ದೆಹಲಿ ವಿಶ್ವದಲ್ಲೇ ಅಗ್ರಸ್ಥಾನದಲ್ಲಿದೆ. ನಂತರದಲ್ಲಿ ಪಾಕಿಸ್ತಾನದ ಲಾಹೋರ್, ಉಜ್ಬೇಕಿಸ್ತಾನದ ತಾಷ್ಕೆಂಟ್, ಪಾಕ್ನ ಕರಾಚಿ, ಭಾರತದ ಕೋಲ್ಕತಾ, ಚೀನಾದ ಚೆಂಗ್ಡು ಹಾಗೂ ಹಾನೋಯ್ ನಗರಗಳಿವೆ. ಒಂಭತ್ತನೇ ಸ್ಥಾನವನ್ನು ಮಹಾನಗರಿ ಮುಂಬೈ ಪಡೆದಿದೆ.
ವಾಯುಮಾಲಿನ್ಯದ ಚರ್ಚೆಯ ಸಭೆಯಲ್ಲಿ 25 ಸಂಸದರು ಗೈರು..! ಗೌತಿ ವಿರುದ್ಧ ತಿರುಗಿಬಿದ್ದ ನೆಟ್ಟಿಗರು..
ದೆಹಲಿಯ ಗಾಳಿಯ ಗುಣಮಟ್ಟ ಸೂಚ್ಯಂಕ 527 ಇದ್ದರೆ ನಂತರದಲ್ಲಿರುವ ಲಾಹೋರ್(234), ತಾಷ್ಕೆಂಟ್(185), ಕರಾಚಿ(180) ಕೋಲ್ಕತ್ತಾ(161), ಚೆಂಗ್ಡು(158) ಹಾಗೂ ಹಾನೋಯ್(158) ಆಗಿವೆ. ಒಟ್ಟಿನಲ್ಲಿ ದೆಹಲಿಯ ಗಾಳಿಯ ಗುಣಮಟ್ಟ ಅತ್ಯಂತ ಕಳಪೆಯಾಗಿದ್ದು, ಮತ್ತೊಮ್ಮೆ ವಿಶ್ವಮಟ್ಟದಲ್ಲಿ ಭಾರತಕ್ಕೆ ಈ ವರದಿ ಹಿನ್ನಡೆ ಉಂಟು ಮಾಡಿದೆ.