ನವದೆಹಲಿ :ದೆಹಲಿಯ ಹಲವಾರು ಭಾಗಗಳು ಮತ್ತು ರಾಷ್ಟ್ರ ರಾಜಧಾನಿಯ ಅಕ್ಕಪಕ್ಕದ ಪ್ರದೇಶಗಳಲ್ಲಿ ಇಂದು ಬೆಳಗ್ಗೆ ಗುಡುಗು ಸಹಿತ ಭಾರಿ ಮಳೆಯಾಗಿದೆ. ಭಾರೀ ಚಳಿಯ ನಡುವೆಯೂ ನವದೆಹಲಿಯ ಚಾಂದಿನಿಚೌಕ್, ಬಾರಖಂಬಾ ರಸ್ತೆ, ಗ್ರೀನ್ ಪಾರ್ಕ್ ಸೇರಿದಂತೆ ನಗರದ ಬಹುತೇಕ ಭಾಗಗಳಲ್ಲಿ ಮುಂಜಾನೆಯಿಂದಲೇ ಮಳೆ ಸುರಿದಿದೆ.
ದಕ್ಷಿಣ ದೆಹಲಿಯ ಕೆಲವು ಭಾಗಗಳಾದ ಅಯನಗರ, ಡೆರಾಮಾಂಡಿ, ತುಘಲಕ್ಬಾದ್ ಮತ್ತು ಹರಿಯಾಣದ ಕೆಲವು ಜಿಲ್ಲೆಗಳಲ್ಲಿ "ಗುಡುಗು ಸಹಿತ ಅಲ್ಪ ಮತ್ತು ಸಾಧಾರಣ ಮಳೆಯಾಗಲಿದೆ" ಎಂದು ಭಾರತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.