ನವದೆಹಲಿ:ರಾಷ್ಟ್ರ ರಾಜಧಾನಿ ಕೊರೊನಾ ಸೋಂಕಿನ ವಿರುದ್ಧ ಕಠಿಣ ಯುದ್ಧ ನಡೆಸುತ್ತಿದ್ದು, ವಿಜಯಶಾಲಿಯಾಗಿ ಹೊರಹೊಮ್ಮಲಿದೆ. ಆದರೆ ಅದಕ್ಕೆ ಸಮಯಾವಕಾಶ ಬೇಕು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಕೋವಿಡ್ ರೋಗಿಗಳಿಗೆ ಹಾಸಿಗೆಗಳ ಹೆಚ್ಚಳ, ಪರೀಕ್ಷೆಗಳ ಸಂಖ್ಯೆ ಹೆಚ್ಚಿಸುವುದು, ಪ್ಲಾಸ್ಮಾ ಚಿಕಿತ್ಸೆ, ಸಮೀಕ್ಷೆ ಮತ್ತು ತಪಾಸಣೆಯ ಮೂಲಕ ಸರ್ಕಾರ ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿದೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ಅರವಿಂದ್ ಕೇಜ್ರಿವಾಲ್, ದೆಹಲಿ ಸಿಎಂ ಕಳೆದೊಂದು ತಿಂಗಳಿಂದ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಂಖ್ಯೆ ಹೆಚ್ಚಿಸಲಾಗಿದೆ. ಈಗ ಹಾಸಿಗೆಗಳ ಕೊರತೆಯಿಲ್ಲ, ಲಭ್ಯವಿರುವ 13,500 ರಲ್ಲಿ 7,500 ಹಾಸಿಗೆಗಳು ಖಾಲಿ ಇವೆ. ನಗರದಲ್ಲಿ ಪ್ರಸ್ತುತ ಪ್ರತಿ ದಿನ ಸುಮಾರು 20,000 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದಿದ್ದಾರೆ.
ಕೊರೊನಾ ವೈರಸ್ ಹರಡುವಿಕೆಯ ಮಟ್ಟವನ್ನು ಕಂಡುಹಿಡಿಯಲು ಸೆರೋಲಾಜಿಕಲ್ ಸಮೀಕ್ಷೆ (ಸ್ವ್ಯಾಬ್ ಬದಲಿಗೆ ರಕ್ತದ ಮಾದರಿ ಪರೀಕ್ಷೆ) ಪ್ರಾರಂಭಿಸಲಾಗಿದೆ. ಇಂದು ಪ್ರಾರಂಭವಾದ ಸಮೀಕ್ಷೆಯಡಿ 20,000 ಮಾದರಿಗಳನ್ನು ಸಂಗ್ರಹಿಸಲಾಗುವುದು ಎಂದು ತಿಳಿಸಿದ್ದಾರೆ.